ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ: ಸಚಿವ ಸತೀಶ್ ಜಾರಕಿಹೊಳಿ
ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿ, ಅಕ್ಟೋಬರ್ 21: ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಾರಿ ಅಧಿವೇಶನ ಅದ್ದೂರಿಯಾಗಿ ಮಾಡೋಣ ಎಂದಿದ್ದಾರೆ.
ಬಿಜೆಪಿ ಶಾಸಕ ಅಭಯ ಪಾಟೀಲ್ ವಿರುದ್ಧ ಸಚಿವ ಜಾರಕಿಹೊಳಿ ವಾಗ್ದಾಳಿ
ತೆರಿಗೆ ಏರಿಕೆ ಸಂಬಂಧ ಮೂರು ವರ್ಷಗಳಿಂದ ಪತ್ರ ವ್ಯವಹಾರ ನಡೆದಿದೆ. ಕರ ಹೆಚ್ಚಳದ ಪತ್ರದಲ್ಲಿ ತಿದ್ದುಪಡಿ ಆಗಿದೆ ಎಂಬ ವಿಚಾರಕ್ಕೆ ಘರ್ಷಣೆ ಇದು. ಭ್ರಷ್ಟಾಚಾರ, ಕಳವು ಅಲ್ಲ ದಿನಾಂಕ ಸಂಬಂಧ ಇಷ್ಟು ದೊಡ್ಡ ಗಲಾಟೆ. ಇದಕ್ಕೆಲ್ಲ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಿಂದೆ ಇದ್ದಾರೆ ಎಂದು ಸಚಿವ ಜಾರಕಿಹೊಳಿ ವಾಗ್ದಾಳಿ ಮಾಡಿದ್ದಾರೆ.
ಕಮಿಷನರ್ ಅವರ ಮಾತು ಕೇಳಬೇಕು ಎಲ್ಲವು ಕಂಟ್ರೋಲ್ನಲ್ಲಿ ಇರಬೇಕು ಅಂತಾ ಮಾಡುತ್ತಿದ್ದಾರೆ. ಇದೊಂದು ಟೈಪಿಂಗ್ ತಪ್ಪು ಅಷ್ಟೇ ಬೇರೆ ಏನೂ ಇಲ್ಲ. ಅಭಯ್ ಪಾಟೀಲ್ ಇಷ್ಟು ದೊಡ್ಡದಾಗಿ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ತವಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು, ಪುರುಷರು ಎಲ್ಲಾ ಕೆಲಸ ಬಿಟ್ಟು ಕುರಿಸಿದ್ದಾರೆ. ಸಿಓಡಿ ತನಿಖೆ ಆದರೇ ಎಲ್ಲಾ ವಿಚಾರ ಬೆಳಕಿಗೆ ಬರಲಿದೆ. ಸರ್ಕಾರಕ್ಕೆ ಒಂದು ಶಿಫಾರಸ್ಸು ಮಾಡಬೇಕಿದೆ ಅಷ್ಟೇ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಿನ್ನಾಭಿಪ್ರಾಯಗಳಿರಬಹುದು ಆದರೆ ಪಕ್ಷದ ಎಲ್ಲ ನಾಯಕರ ನಡುವೆ ಸಾಮರಸ್ಯವಿದೆ: ಸತೀಶ್ ಜಾರಕಿಹೊಳಿ
ನಾವು ಏನೆ ಇದ್ದರು ಸರ್ಕಾರ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಪಾಲಿಕೆ ಆಯುಕ್ತರ ಐಎಎಸ್ ಪ್ರಮೋಷನ್ ತಡೆಯಲು ಬ್ಲ್ಯಾಕ್ ಮೇಲ್. ಕೇಂದ್ರ ಸರ್ಕಾರ, ಗೃಹ ಸಚಿವ, ಪ್ರಧಾನಿ ಪತ್ರ ಬರೆಯಲು ಆಗಲ್ಲ. ಹಿಂದೆ ಅಭಯ ಪಾಟೀಲ್ ಮಾಡಿದ ಅಕ್ರಮಗಳ ಬಗ್ಗೆಯೂ ತನಿಖೆ ಆಗಲಿ ಎಂದಿದ್ದಾರೆ.
ಎಲ್ಲಾ ಅಕ್ರಮಗಳ ಬಗ್ಗೆ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ
ಪೌರಕಾರ್ಮಿಕರ ನೇಮಕಾತಿಯಲ್ಲೂ ಅಕ್ರಮ ನಡೆಸಲಾಗಿದೆ. ಎಲ್ಲಾ ಅಕ್ರಮಗಳ ಬಗ್ಗೆ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಜೈಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಗೆ ಅನುಮತಿ ವಿಚಾರವಾಗಿ ಮಾತನಾಡಿದ್ದು, ಸನ್ಮಾನ್ಯ ಶ್ರೀ ಶ್ರೀ ಶ್ರೀ ಅಭಯ್ ಪಾಟೀಲ್ರದ್ದು ಎಂದು ವ್ಯಂಗ್ಯವಾಡಿದ್ದಾರೆ. ವಿಶ್ವದಲ್ಲಿ ಎಲ್ಲೂ ನಡೆಯದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಭಾವ ಬೀರಿ ಜೈಕಿಸಾನ್ ಮಾರುಕಟ್ಟೆಗೆ ಅನುಮತಿ ಕೊಡಿಸಿದ್ದಾರೆ. ಬೇಡವೆಂದು ಪತ್ರ ಬರೆದ್ದೂ ಇವರೇ ನಂತರ ಅನುಮತಿ ಕೊಡಿಸಿದ್ದೂ ಇವ್ರೇ. ಆಯುಕ್ತರನ್ನು ಬ್ಲಾಕ್ಮೇಲ್ ಮಾಡಿದರೆ ಬೇರೆಯವರನ್ನು ಕರೆತರುತ್ತೇವೆ. ಉತ್ತರ ಕೊಡುವ ಶಕ್ತಿಯಿಲ್ಲದೆ ಸಭೆ ಅರ್ಧಕ್ಕೆ ನಿಲ್ಲಿಸಿ ಎದ್ದುಹೋಗಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.