ಅವರೇನು ದೊಡ್ಡವರೂ ಅಲ್ಲ, ಸಣ್ಣವರೂ ಅಲ್ಲ: ಜಾರಕಿಹೊಳಿ ಬ್ರದರ್ಸ್‌ಗೆ ಸಚಿವ ಉಮೇಶ್ ಕತ್ತಿ ಟಾಂಗ್

ಅವರೇನು ದೊಡ್ಡವರೂ ಅಲ್ಲ, ಸಣ್ಣವರೂ ಅಲ್ಲ: ಜಾರಕಿಹೊಳಿ ಬ್ರದರ್ಸ್‌ಗೆ ಸಚಿವ ಉಮೇಶ್ ಕತ್ತಿ ಟಾಂಗ್
ಉಮೇಶ್ ಕತ್ತಿ

ಜವಾಬ್ದಾರಿಯುತವಾಗಿ ಎಲ್ಲಾ ತಾಲೂಕುಗಳಲ್ಲಿ ಸರಿಯಾಗಿ ಕೆಲಸ ಮಾಡಿ ಎಂದು ತಿಳಿಸಿದ್ದೇವೆ. ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧಿಕಾರ ಹಿಡಿಯಲು ನಾವು ಸೇರಿದ್ದೇವೂ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಚಿವ ಉಮೇಶ್​ ಕತ್ತಿ ಸಮಜಾಯಿಷಿ ನೀಡಿದ್ದಾರೆ.

TV9kannada Web Team

| Edited By: preethi shettigar

Jan 24, 2022 | 4:40 PM

ಬೆಳಗಾವಿ: ಸಚಿವ ಉಮೇಶ್ ಕತ್ತಿ(Umesh katti) ನಿವಾಸದಲ್ಲಿ ಜಾರಕಿಹೊಳಿ‌ ಸಹೋದರರನ್ನು ಹೊರಗಿಟ್ಟು ಗೌಪ್ಯ ಸಭೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು (ಜನವರಿ 24) ಮಾತನಾಡಿದ ಸಚಿವ ಉಮೇಶ್ ಕತ್ತಿ, ನಾವು ಯಾರನ್ನೂ ಹೊರಗಿಟ್ಟು ಗೌಪ್ಯ ಸಭೆಯನ್ನು ಮಾಡಿಲ್ಲ. ಅವರೇನು ದೊಡ್ಡವರೂ ಅಲ್ಲ, ಸಣ್ಣವರೂ ಅಲ್ಲ. ಜಿಲ್ಲಾ ಪಂಚಾಯತಿ(Jilla Panchayat) ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಚರ್ಚೆ ಮಾಡುವುದಕ್ಕಾಗಿ ಸಭೆ ನಡೆಸಿದ್ದೇವು. ಜಿಲ್ಲಾ ಪಂಚಾಯತಿಯಲ್ಲಿ ಅಧಿಕಾರ ಹಿಡಿಯಲು ನಾವೆಲ್ಲಾ ಸೇರಿದ್ದೆವು. ಆದರೆ ಕೆಲವರು ಸಭೆಗೆ ಬಂದರು, ಕೆಲವರು ಬರಲಿಲ್ಲ. ಅವರು ಏಕೆ ಸಭೆಗೆ ಬಂದಿಲ್ಲ ಎಂದು ನನಗೆ ಗೊತ್ತಿಲ್ಲ. ನಾನು ಪಕ್ಷ ಸಂಘಟನೆಗಾಗಿ ಸಭೆಯನ್ನು(Meeting) ಮಾಡಿದ್ದೇನೆ ಎಂದು ಜಾರಕಿಹೊಳಿ ಬ್ರದರ್ಸ್‌ಗೆ ಟಾಂಗ್ ನೀಡಿದ್ದಾರೆ.

ಮೊನ್ನೆ ನಮ್ಮ ಅಭ್ಯರ್ಥಿ ಸೋತಿರುವ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ಜವಾಬ್ದಾರಿಯುತವಾಗಿ ಎಲ್ಲಾ ತಾಲೂಕುಗಳಲ್ಲಿ ಸರಿಯಾಗಿ ಕೆಲಸ ಮಾಡಿ ಎಂದು ತಿಳಿಸಿದ್ದೇವೆ. ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧಿಕಾರ ಹಿಡಿಯಲು ನಾವು ಸೇರಿದ್ದೇವೂ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಚಿವ ಉಮೇಶ್​ ಕತ್ತಿ ಸಮಜಾಯಿಷಿ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ರಾಜ್ಯದ ಸಿಎಂ ಮಾಡುತ್ತಾರೆ: ಸಚಿವ ಉಮೇಶ್ ಕತ್ತಿ

ನಾನು ಸಚಿವ, ಹೀಗಾಗಿ ನಾನು ಅದಕ್ಕೆ ಉತ್ತರಿಸುವುದಿಲ್ಲ. ಮಂತ್ರಿ ಮಂಡಲವನ್ನು ವಿಸ್ತರಣೆ ಮಾಡುವುದಾಗಲಿ, ಕೈ ಬಿಡುವುದಾಗಲಿ ಸಿಎಂ ಬೊಮ್ಮಾಯಿ ಮಾಡುತ್ತಾರೆ. ಈ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಬಲರಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

ಸಿಎಂ ಅವರಿಗೆ ಜವಾಬ್ದಾರಿ ಇದೆ. ಜತೆಗೆ ಹೈಕಮಾಂಡ್ ಕೂಡ ಇದೆ. ಎಲ್ಲರೂ ಕೂಡಿ ಸಂಪುಟ ವಿಸ್ತರಣೆ ಮಾಡುತ್ತಾರೆ. ನಾವು ನಮ್ಮ ಜಿಲ್ಲೆಯಲ್ಲಿ ಮಂತ್ರಿ ಮಂಡಲದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಬರುವ ಚುನಾವಣೆಗಳಲ್ಲಿ ನಾವು ಯಾವ ರೀತಿ ಸ್ಪರ್ಧೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಅಂತಾ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಚಿವ ಉಮೇಶ್​ ಕತ್ತಿ ವಿಶೇಷಾಧಿಕಾರಿ ಪ್ರಸನ್ನ ಸುಬೇದಾರ್ ವಿರುದ್ಧ ಮತ್ತೊಂದು ಆರೋಪ

ಸರ್ಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ: ಸಚಿವ ಸಿಎನ್​ ಅಶ್ವತ್ಥ್​ ನಾರಾಯಣ್​

Follow us on

Related Stories

Most Read Stories

Click on your DTH Provider to Add TV9 Kannada