ಸರ್ಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ: ಸಚಿವ ಸಿಎನ್​ ಅಶ್ವತ್ಥ್​ ನಾರಾಯಣ್​

ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದರ ಅಂಗವಾಗಿ ಬೆಂಗಳೂರಿನ ಆಯ್ದ ಒಂದು ಸರಕಾರಿ ಶಾಲೆಯಿಂದ ಪ್ರಾಯೋಗಿಕವಾಗಿ ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾವಣೆ ಮಾಡಲಾಗುವುದು ಎಂದು ಸಚಿವ ಅಶ್ವತ್ಥ್​ ನಾರಾಯಣ್ ಹೇಳಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ: ಸಚಿವ ಸಿಎನ್​ ಅಶ್ವತ್ಥ್​ ನಾರಾಯಣ್​
ಸಚಿವ ಅಶ್ವತ್ಥ್ ನಾರಾಯಣ
Follow us
TV9 Web
| Updated By: preethi shettigar

Updated on:Jan 21, 2022 | 5:37 PM

ಬೆಂಗಳೂರು: 75ನೇ ಸ್ವಾತಂತ್ರ್ಯದ ವರ್ಷಾಚರಣೆಯ ಅಂಗವಾಗಿ ರಾಜ್ಯದ ಸರಕಾರಿ ಶಾಲಾ (Government School) ವಿದ್ಯಾರ್ಥಿಗಳಿಂದ (Students) ನ್ಯಾನೊ ಉಪಗ್ರಹವೊಂದನ್ನು(Satellite) ವಿನ್ಯಾಸಗೊಳಿಸಿ, ಉಡಾಯಿಸುವ ಯೋಜನೆಗೆ 1.90 ಕೋಟಿ ರೂ. ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ್​ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದರ ಅಂಗವಾಗಿ ಬೆಂಗಳೂರಿನ ಆಯ್ದ ಒಂದು ಸರಕಾರಿ ಶಾಲೆಯಿಂದ ಪ್ರಾಯೋಗಿಕವಾಗಿ ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ತಾಂತ್ರಿಕ ತಜ್ಞರ ಸಮಿತಿಯು ಯೋಜನೆಯ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲಿದ್ದು, ಕೆಜಿಎಸ್3ಸ್ಯಾಟ್ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜತೆಗೆ ಕೇಂದ್ರ ಸರಕಾರದ ಬಾಹ್ಯಾಕಾಶ ಇಲಾಖೆಯ ಇನ್-ಸ್ಪೇಸ್​ ವಿಭಾಗವು ಕೂಡ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ. 9 ರಿಂದ 12 ತಿಂಗಳ ಅವಧಿಯಲ್ಲಿ ನನಸಾಗಲಿರುವ ಈ ಯೋಜನೆಗೆ ಇಸ್ರೋ ಮತ್ತು ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಒಕ್ಕೂಟದ (ಐಟಿಸಿಎ) ಸಹಯೋಗವನ್ನೂ ತೆಗೆದುಕೊಳ್ಳಲಾಗುವುದು ಎಂದು ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ್​ ತಿಳಿಸಿದ್ದಾರೆ.

ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಜ.29ರವರೆಗೆ ಶಾಲೆ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶಾಲೆ ಓಪನ್ ಬಗ್ಗೆ ಜ.29ರಂದು ಮತ್ತೆ ಸಭೆ ನಡೆಸಿ ಶಾಲೆ ಓಪನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಜೊತೆ ಸಭೆ ಬಳಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.  ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಶಾಲೆ ನಡೆಯುತ್ತೆ. ಮಕ್ಕಳಿಗೆ ಸೋಂಕು ಹೆಚ್ಚಾದರೆ ಮಾತ್ರ ಶಾಲೆ ಬಂದ್‌ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸೋಂಕು ಹೆಚ್ಚಳವಾದರೆ  ಮೂರು ದಿನ ಅಥವಾ 7 ದಿನ ಮಾತ್ರ ಶಾಲೆ ಬಂದ್‌ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಕಡಿಮೆ ಮಕ್ಕಳಿಗೆ ಸೋಂಕು ಬಂದ್ರೆ 3 ದಿನ ಶಾಲೆ ಬಂದ್​ ಮಾಡಲಾಗುವುದು, ಹೆಚ್ಚು ಮಕ್ಕಳಿಗೆ ಸೋಂಕು ಬಂದರೆ, ಅಂದರೆ 25-30 ಮಕ್ಕಳಿಗೆ ಸೋಂಕು ಬಂದ್ರೆ 7 ದಿನ ಶಾಲೆ ಬಂದ್‌ ಮಾಡಲಾಗುವುದು. ಶಾಲೆ ಬಂದ್ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈವರೆಗೆ ರಾಜ್ಯದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಕೊವಿಡ್‌ ಟೆಸ್ಟ್‌ ಮಾಡಲಾಗಿದೆ. ಈ ಪೈಕಿ ಶೇ.5ರಷ್ಟು ಮಕ್ಕಳಿಗೆ ಮಾತ್ರ ಸೋಂಕು ಪತ್ತೆ ಆಗಿದೆ. ತುಮಕೂರು, ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಖಾಸಗಿ ಶಾಲೆಗಳನ್ನು ಮೀರಿಸಿ ನಂ.1 ಸ್ಥಾನ ಪಡೆದ ಸರ್ಕಾರಿ ಶಾಲೆ; ರಾಯಚೂರಿನಲ್ಲೇ ನಂಬರ್ ಒನ್ ಹೈಟೆಕ್ ಕಂಪ್ಯೂಟರ್ ಲ್ಯಾಬ್!

‘ಸಮಾಜದ ಪ್ರತಿಯೊಬ್ಬರನ್ನೂ ಟಿವಿ9 ಗುರುತಿಸುತ್ತದೆ’; ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್​ ನಾರಾಯಣ್​

Published On - 5:25 pm, Fri, 21 January 22