ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಟಿವಿ9 ಹಿರಿಯ ವರದಿಗಾರ ರಹಮತ್ ಕಂಚಗಾರ್ ಗೆ ಸನ್ಮಾನ
ರಹಮತ್ ಕಂಚಗಾರ್ ಅವರು ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಯನ್ನ ಪರಿಗಣಿಸಿ ಸಮಾರಂಭದಲ್ಲಿ ಶಾಲು ಹೋದಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರೂ ಎಂ ಕೆ ಹೆಗಡೆ. ಬ್ರಹ್ಮಾನಂದ ಮತ್ತು ಸುರೇಶ್ ಅವರಿಗೆ ಸನ್ಮಾನ ಮಾಡಿದ್ರು.
ಬೆಳಗಾವಿ: ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಟಿವಿ9 ಕನ್ನಡ ಹಿರಿಯ ವರದಿಗಾರರಾದ ರಹಮತ್ ಕಂಚಗಾರ್ ಅವರನ್ನ ಸನ್ಮಾನಿಸಲಾಯಿತು.
ರಹಮತ್ ಕಂಚಗಾರ್ ಅವರು ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಯನ್ನ ಪರಿಗಣಿಸಿ ಸಮಾರಂಭದಲ್ಲಿ ಶಾಲು ಹೋದಿಸಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು. ಇನ್ನೂ ಕಾರ್ಯಕ್ರಮವನ್ನ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಉದ್ಘಾಟನೆ ಮಾಡಿದರು. ಸಮಾರಂಭದಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಚಾರ ಗೋಷ್ಠಿ ಕೂಡ ಆಯೋಜನೆ ಮಾಡಲಾಗಿತ್ತು. ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ನೂತನವಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರೂ ಎಂ ಕೆ ಹೆಗಡೆ. ಬ್ರಹ್ಮಾನಂದ ಮತ್ತು ಸುರೇಶ್ ಅವರಿಗೆ ಸನ್ಮಾನ ಮಾಡಿದ್ದು ಎಲ್ಲರಿಗೂ ಖುಷಿ ನೀಡಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ಹಾಗೂ ಪ್ರಮುಖ ಸುದ್ದಿ ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:50 pm, Mon, 30 May 22