ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರ ಸಾವು

ಫೋಟೋ ಶೂಟ್​ಗೆಂದು ಕ್ವಾರಿಯಲ್ಲಿ ಯುವಕರು ಇಳಿದಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು ಕ್ವಾರಿಗೆ ಬಿದ್ದಿದ್ದಾರೆ. ಮೂವರಲ್ಲಿ ಅದೃಷ್ಟವಶಾತ್ ಒಬ್ಬ ಯುವಕ ಪಾರಾಗಿದ್ದಾನೆ. ಇನ್ನಿಬ್ಬರು ಸಾವನ್ನಪ್ಪಿದ್ದಾರೆ.

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರ ಸಾವು
ಎಸ್‌ಡಿಆರ್‌ಎಫ್ ತಂಡ

ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳುವಾಗ ಕ್ವಾರಿಗೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿ ನಡೆದಿದೆ. ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತ ದುರ್ದೈವಿಗಳು. ಘಟನೆಯಲ್ಲಿ ಮೂವರ ಪೈಕಿ ಒಬ್ಬ ಯುವಕ ಪಾರಾಗಿದ್ದಾನೆ. ಈ ಸಂಬಂಧ ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಟೋ ಶೂಟ್​ಗೆಂದು ಕ್ವಾರಿಯಲ್ಲಿ ಯುವಕರು ಇಳಿದಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಯುವಕರು ಕ್ವಾರಿಗೆ ಬಿದ್ದಿದ್ದಾರೆ. ಮೂವರಲ್ಲಿ ಅದೃಷ್ಟವಶಾತ್ ಒಬ್ಬ ಯುವಕ ಪಾರಾಗಿದ್ದಾನೆ. ಇನ್ನಿಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ (ಅಕ್ಟೋಬರ್ 17) ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ ಎಸ್‌ಡಿಆರ್‌ಎಫ್ ತಂಡ ಮೃತದೇಹ ಪತ್ತೆ ಮಾಡಿದೆ.

ಮೈಸೂರು: ತನಗೆ ಅತ್ಯಚಾರವಾಗಿದೆ ಎಂದು ಡೆತ್ ನೋಟ್ ಬರೆದಿಟ್ಟಿದ್ದು ಆತ್ಮಹತ್ಯೆ‌
15 ದಿನದ ಹಿಂದೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಚನ್ನಪಟ್ಟಣದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ 15 ದಿನದ ಬಳಿಕ ಯುವತಿಯ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ತನಗೆ ಅತ್ಯಾಚಾರವಾಗಿದೆ ಎಂದು ಡೆತ್ ನೋಟ್ನಲ್ಲಿ ಯುವತಿ ಉಲ್ಲೇಖ ಮಾಡಿದ್ದಾಳೆ.

ನನ್ನ ಮೇಲೆ ಅತ್ಯಾಚಾರವಾಗಿದೆ. ತನ್ನ ಸಾವಿಗೆ ಲೋಕೇಶ್ ಕಾರಣ ಎಂದು ಮೃತ ಯುವತಿ ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾಳೆ. ಮೃತ ಯುವತಿ ಲೋಕೇಶ್‌ನನ್ನು ಪ್ರೀತಿ ಮಾಡುತ್ತಿದ್ದಳು. ಆದ್ರೆ ಲೋಕೇಶ್ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದ. ಅಲ್ಲದೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ನೊಂದಿದ್ದ ಯುವತಿ ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಆದರೆ ಪ್ರಕರಣ ದಾಖಲಿಸಿಕೊಳ್ಳದೆ ಹುಲ್ಲಹಳ್ಳಿ ಠಾಣೆ ಎಎಸ್ಐ ಶಿವರಾಜ್ ಯುವತಿಯನ್ನು ವಾಪಸ್ ಕಳಿಸಿದ್ದರು.

ತನ್ನ ಹಾಗೂ ಲೋಕೇಶ್ ನಡುವಿನ ಪ್ರೀತಿಗೆ ಸಾಕ್ಷಿ ಇದೆ, ಮೊಬೈಲ್ ನಲ್ಲಿ ವರ್ಷದಿಂದ ಮಾತನಾಡಿರುವ ಕಾಲ್ ರೆಕಾರ್ಡ್ ಇದೆ. ಈ‌ ನೋವಿನಿಂದ ಸತ್ತರೆ ನನ್ನ ಸಾವಿಗೆ ಇವರೇ ಕಾರಣ. ಇವರನ್ನು ಗಲ್ಲಿಗೇರಿಸಿ‌ ಎಂದು ಡೆತ್‌ನೋಟ್‌ನಲ್ಲಿ ಯುವತಿ ಉ್ಲಲೇಖ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗಾ ಹುಲ್ಲಹಳ್ಳಿ ಪೊಲೀಸ್ ಠಾಣೆ ಎಎಸ್ಐ ಸೇರಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:
ಜೀವವನ್ನೇ ಕಸಿದ ಸೆಲ್ಫಿ ಕ್ರೇಜ್; ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಇಬ್ಬರು ವಿದ್ಯಾರ್ಥಿಗಳ ಸಾವು

ಸೆಲ್ಫಿ ತೆಗೆದುಕೊಳ್ಳಲು ಹೋಗಿ ದುರಂತ ಅಂತ್ಯ ಕಂಡ ಯುವತಿ; ಜಲಪಾತಕ್ಕೆ ಬಿದ್ದು ಸಾವು

Click on your DTH Provider to Add TV9 Kannada