ಸೆಲ್ಫಿ ತೆಗೆದುಕೊಳ್ಳಲು ಹೋಗಿ ದುರಂತ ಅಂತ್ಯ ಕಂಡ ಯುವತಿ; ಜಲಪಾತಕ್ಕೆ ಬಿದ್ದು ಸಾವು

ದುರಂತ ಅಂತ್ಯ ಕಂಡ ಹಾಂಗ್​ಕಾಂಗ್​ನ ಇನ್ಸ್​ಸ್ಟಾ ಸೆಲೆಬ್ರಿಟಿಯ ಹೆಸರು ಸೋಫಿಯಾ ಚೆವುಂಗ್. ಬರೀ 32 ವರ್ಷದ ಇನ್ಸ್​ಸ್ಟಾ ಸೆಲೆಬ್ರಿಟಿಯ ಜೀವನ ಯಾತ್ರೆ ಸೆಲ್ಫಿಯಿಂದ ಅಂತ್ಯವಾಗಿದೆ. ಹಪಾಲ್ ಲೈ ಜಲಪಾತದ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದ ಸೋಫಿಯಾ, ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ.


ಇತ್ತೀಚಿನ ವರ್ಷಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಬಿಟ್ಟವರ ಸಂಖ್ಯೆ ದೊಡ್ಡದಿದೆ. ಜಲಪಾತಗಳ ತುದಿಯಲ್ಲಿ, ಎತ್ತರದ ಪರ್ವತದ ಅಂಚಿನಲ್ಲಿ, ನದಿ ದಂಡೆಯಲ್ಲಿ, ಕಾಡು ಪ್ರಾಣಿಗಳ ಸನಿಹದಲ್ಲಿ ಹೀಗೆ ತೀರಾ ಅಪಾಯಕಾರಿ ಜಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಬೇಕೆಂಬ ಆಸೆಯೇ ಜೀವಕ್ಕೆ ಮಾರಕವಾಗಿದೆ. ಕೆಲವರ ಸೆಲ್ಫಿ ಹುಚ್ಚು ಹೇಗೆ ಅವರ ಪ್ರಾಣಕ್ಕೆ ಕಂಟಕವಾಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವ ಧೈರ್ಯ ಪ್ರದರ್ಶಿಸಲು ಹೋದ ಯುವತಿಯೊಬ್ಬಳು ಸೀದಾ ಸಾವಿನ ಮನೆ ಸೇರಿದ್ದಾಳೆ.

ದುರಂತ ಅಂತ್ಯ ಕಂಡ ಹಾಂಗ್​ಕಾಂಗ್​ನ ಇನ್ಸ್​ಸ್ಟಾ ಸೆಲೆಬ್ರಿಟಿಯ ಹೆಸರು ಸೋಫಿಯಾ ಚೆವುಂಗ್. ಬರೀ 32 ವರ್ಷದ ಇನ್ಸ್​ಸ್ಟಾ ಸೆಲೆಬ್ರಿಟಿಯ ಜೀವನ ಯಾತ್ರೆ ಸೆಲ್ಫಿಯಿಂದ ಅಂತ್ಯವಾಗಿದೆ. ಹಪಾಲ್ ಲೈ ಜಲಪಾತದ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದ ಸೋಫಿಯಾ, ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ ಈ ಸುಂದರಿಯ ದುರಂತ ಅಂತ್ಯ ಇನ್ನಾದರೂ ಸೆಲ್ಫಿ ಪ್ರಿಯರಿಗೆ ಪಾಠವಾಗಬೇಕಿದೆ.

ಇದನ್ನೂ ಓದಿ:
ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರಕ್ಕೆ ಬಿದ್ದ ಯುವತಿ; ವ್ಯಕ್ತಿಯ ಸಮಯಪ್ರಜ್ಞೆಯಿಂದ ಬಚಾವ್

Click on your DTH Provider to Add TV9 Kannada