ಚುನಾವಣೆಗಾಗಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡ್ತಿದ್ದಾರೆ; 2ಡಿ ಮೀಸಲಾತಿ ಅವೈಜ್ಞಾನಿಕ, ಅಸಾಂಪ್ರದಾಯಿಕ ಎಂದ ವಿನಯ್ ಕುಲಕರ್ಣಿ
ಪಂಚಮಸಾಲಿ ಸಮುದಾಯಕ್ಕೆ 17% ಮೀಸಲಾತಿ ಕೇಳಿದ್ದೆವು. ಇನ್ನೊಬ್ಬರ ಮೀಸಲಾತಿ ತೆಗೆದು ಕೊಡುವ ಅವಶ್ಯಕತೆ ಇರಲಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಸಮಾಜ ಒಟ್ಟು 24.6 ಪರ್ಸೆಂಟ್ ಇದ್ರು.
ಬೆಳಗಾವಿ: ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2D ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಮುಂಬರುವ ಚುನಾವಣೆ ಸಲುವಾಗಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ. 2ಡಿ ಮೀಸಲಾತಿ ಅವೈಜ್ಞಾನಿಕ, ಅಸಾಂಪ್ರದಾಯಿಕವಾಗಿದೆ. ನಾವ್ಯಾರೂ 2D ಮೀಸಲಾತಿ ಕೇಳಿರಲಿಲ್ಲ. ಯಾವುದೋ ಹೊಸದೊಂದು ಕ್ರಿಯೆಟ್ ಮಾಡಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಪಂಚಮಸಾಲಿ ಸಮುದಾಯಕ್ಕೆ 17% ಮೀಸಲಾತಿ ಕೇಳಿದ್ದೆವು. ಇನ್ನೊಬ್ಬರ ಮೀಸಲಾತಿ ತೆಗೆದು ಕೊಡುವ ಅವಶ್ಯಕತೆ ಇರಲಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಸಮಾಜ ಒಟ್ಟು 24.6 ಪರ್ಸೆಂಟ್ ಇದ್ರು. ಲಿಂಗಾಯತ ಹೂಗಾರ್, ಲಿಂಗಾಯತ ಕಂಬಾರ ಸೇರಿ ಅನೇಕ ಉಪಜಾತಿಗಳಿವೆ. ಆದ್ರೆ ಹೂಗಾರ್, ಗಾಣಿಗೆರ್ ಅಂತ ಇದ್ರೆ ಮಾತ್ರ 2ಎ ಮೀಸಲಾತಿ ಕೊಡ್ತೀವಿ ಅಂದ್ರು. ನಮ್ಮ ಸಮಾಜ ಬೇರೆ ಸಮಾಜದ ಮಧ್ಯ ಬೆಂಕಿ ಹಚ್ಚುವ ಕೆಲಸ ಸರ್ಕಾರ ಮಾಡಿದೆ. ಇನ್ನೊಬ್ಬರ ಮೀಸಲಾತಿ ತೆಗೆದು ನಮಗೆ ಕೊಡುವ ಅವಶ್ಯಕತೆ ಇರಲಿಲ್ಲ. ಇವತ್ತೂ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಹಿಂದೆ ಅರವಿಂದ್ ಬೆಲ್ಲದ ಮಾತನಾಡಿ ಮುನ್ಸೂಚನೆ ಕೊಟ್ಟಿದ್ರು. ಅದನ್ನು ವಿರೋಧ ಮಾಡಿದ್ದೇವು, ಆದ್ರೆ ಬೆಲ್ಲದ ಹೇಳಿದ ಹಾಗೆ ಬೊಮ್ಮಾಯಿ ಮಾಡಿದ್ದಾರೆ. ಇದು ನಮಗೆ ಯಾರಿಗೂ ಸಮಾಧಾನ ತಂದಿಲ್ಲ 2 ಪರ್ಸೆಂಟ್ ಮೀಸಲಾತಿಯಿಂದ ನಮಗೆ ಏನು ಸಿಗಲ್ಲ. ಯಾವ ಸಮಾಜಕ್ಕೆ ಇದರಿಂದ ಏನೂ ದೊಡ್ಡ ಲಾಭ ಆಗಿಲ್ಲ. ಇದು ಮುಂಬರುವ ಚುಣಾವಣೆ ತಂತ್ರಗಾರಿಕೆಯಿಂದ ಈ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಯಾರಿಗೂ ಲಾಭ ಆಗೋದಿಲ್ಲ ಎಂದು ವಿನಯ್ ಕುಲಕರ್ಣಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿಟಿ ರವಿ: ಪಾದಯಾತ್ರೆಯಲ್ಲಿ ಘೋಷಣೆ
ನಮ್ಮ ಸಮಾಜದ ಜೊತೆಗೆ ಇನ್ನೊಬ್ಬರ ಸಮಾಜ ಎತ್ತಿ ಕಟ್ಟುವಂತ ಕೆಲಸ ಆಗುತ್ತಿದೆ
ಕಾಶಪ್ಪನವರ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ವಿನಯ್ ಕುಲಕರ್ಣಿ, ಸಹಜವಾಗಿ ರಾಜೀನಾಮೆ ಕೊಟ್ಟಿರಬಹುದು ಈ ತರಹದ ನಿರ್ಣಯಗಳು ಸೂಕ್ತವಾದ ನಿರ್ಣಯಗಳಲ್ಲ. ನಮ್ಮ ಸಮಾಜದ ಜೊತೆಗೆ ಇನ್ನೊಬ್ಬರ ಸಮಾಜ ಎತ್ತಿ ಕಟ್ಟುವಂತ ಕೆಲಸ ಅವರು ಮಾಡುತ್ತಿದ್ದಾರೆ. ಇದು ಸರಿಯಾದಂತ ವ್ಯವಸ್ಥೆ ಅಲ್ಲ ಇದು ವೈಯಕ್ತಿಕವಾಗಿ ಮಾಡಿರುವ ವ್ಯವಸ್ಥೆ. ಸಮಾಜ ಸಮಾಜದ ಒಳಗೆ ಬೆಂಕಿ ಹಚ್ಚುವಂತಹ ಕೆಲಸ ಮಾಡುತ್ತಿದ್ದಾರೆ ಇದನ್ನು ನಾವು ಯಾರು ಒಪ್ಪುವುದಿಲ್ಲ ಎಂದರು.
ಶಿಗ್ಗಾಂವಿ ಟಿಕೆಟ್ ಕೇಳಿಲ್ಲ, ಧಾರವಾಡ ಟಿಕೆಟ್ ಕೇಳಿದ್ದೇನೆ
ಇನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಶಿಗ್ಗಾಂವಿ ಟಿಕೆಟ್ ಕೇಳಿಲ್ಲ, ಧಾರವಾಡ ಟಿಕೆಟ್ ಕೇಳಿದ್ದೇನೆ ಎಂದು ಕುಲಕರ್ಣಿ ತಿಳಿಸಿದ್ದಾರೆ. ನಮ್ಮ ಪಕ್ಷದ ಮುಖಂಡರು ಏನೂ ಮಾಡ್ತಾರೋ ನೋಡೋಣ. ಪಕ್ಷದ ನಿರ್ಣಯ ನೋಡೋಣ, 7-8 ಜನ ಆಕಾಂಕ್ಷಿಗಳಿದ್ದಾರೆ. ಪಾಪ ಅವರ ಮನಸ್ಸಿಗೆ ನಾನು ನೋವು ಮಾಡಲು ಸಿದ್ಧವಿಲ್ಲ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:45 am, Sun, 26 March 23