ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಪತ್ನಿ ಹಾಕಿದ ಸ್ಕೆಚ್ ಹೇಗಿತ್ತು ಗೊತ್ತಾ? ಬೆಚ್ಚಿಬೀಳಿಸುವ ಸ್ಟೋರಿ

ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಪತ್ನಿ ಹಾಕಿದ ಸ್ಕೆಚ್ ಹೇಗಿತ್ತು ಗೊತ್ತಾ? ಬೆಚ್ಚಿಬೀಳಿಸುವ ಸ್ಟೋರಿ
ಆರೋಪಿಗಳನ್ನು ಕರೆದುಕೊಂಡು ಹೋಗುತ್ತಿರುವ ಪೊಲೀಸರು

ಜನವರಿ 13ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ರಮೇಶ್ ಮಾದಿಗರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ಕೊಲೆಯ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಪತ್ನಿಯೇ ಪ್ಲ್ಯಾನ್ ರೂಪಿಸಿದ್ದಾಳೆ.

TV9kannada Web Team

| Edited By: Ayesha Banu

Jan 17, 2022 | 8:26 AM

ಬೆಳಗಾವಿ: ಜ.13ರಂದು ರಮೇಶ್ ಮಾದಿಗರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಹತ್ಯೆಗೈದಿದ್ದ ಪತ್ನಿ ಶ್ರೀದೇವಿ ಮಾದಿಗರ(30) ಮತ್ತು ಪ್ರಿಯಕರ ಬಸವರಾಜ ಹರಿಜನ(20)ನನ್ನು ಬೆಳಗಾವಿ ಜಿಲ್ಲೆ ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜನವರಿ 13ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ರಮೇಶ್ ಮಾದಿಗರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ಕೊಲೆಯ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಪತ್ನಿಯೇ ಪ್ಲ್ಯಾನ್ ರೂಪಿಸಿದ್ದಾಳೆ. ಶ್ರೀದೇವಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕ ಬಸವರಾಜ ಶ್ರೀದೇವಿಯ ಪತಿಯ ಕೊಲೆ ಮಾಡಿದ್ದಾನೆ. ರಮೇಶ್ ಮಾದಿಗರ ಗುಪ್ತಾಂಗಕ್ಕೆ ಒದ್ದು, ಕತ್ತು ಹಿಸುಕಿ ಬಸವರಾಜ್ ಹತ್ಯೆಗೈದಿದ್ದ. ಬಳಿಕ ಶ್ರೀದೇವಿಗೆ ಹತ್ಯೆ ವಿಚಾರ ತಿಳಿಸಿ ಪರಾರಿಯಾಗಿದ್ದ. ಸದ್ಯ ಕಿತ್ತೂರು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಧಾರವಾಡ ತಾಲೂಕಿನ ಬೋಗೂರ ನಿವಾಸಿಯಾಗಿರುವ ಆರೋಪಿ ಬಸವರಾಜ, ಮೃತ ರಮೇಶ್ ಪತ್ನಿ ಶ್ರಿದೇವಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಇಬ್ಬರೂ ಒಂದಾಗಲು ಬಸವರಾಜ ಜೊತೆಗೂಡಿ ಗಂಡನ ಹತ್ಯೆಗೆ ಶ್ರಿದೇವಿ ಸ್ಕೆಚ್ ಹಾಕಿದ್ದಳು. ಜನವರಿ 12ರಂದು ರಮೇಶ್‌ಗೆ ಮನೆಯಲ್ಲೇ ಫೋನ್ ಬಿಟ್ಟು ಹೋಗುವಂತೆ ಹೇಳಿದ್ದಳು. ಮನೆಯಲ್ಲಿ ಫೋನ್ ಬಿಟ್ಟು ಹಿರೇಬಾಗೇವಾಡಿಗೆ ಕಟ್ಟಡ ಕಾಮಗಾರಿ ಕೆಲಸಕ್ಕೆ ರಮೇಶ್ ತೆರಳಿದ್ದ. ಈ ವೇಳೆ ರಮೇಶ್‌ ಕೆಲಸ‌ ಮಾಡುವ ಸ್ಥಳಕ್ಕೆ ಆರೋಪಿ ಬಸವರಾಜ ಹೋಗಿದ್ದಾನೆ. ಬಳಿಕ ಕಿತ್ತೂರಿಗೆ ಹೋಗಿ ಬರೋಣ ಬಾ ಅಂತಾ ರಮೇಶ್‌ನನ್ನು ಕರೆದುಕೊಂಡು ಹೋಗಿ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು, ಕತ್ತು ಹಿಸುಕಿ ರಮೇಶ್ ಕೊಲೆ ಮಾಡಿದ್ದಾನೆ.

ರಮೇಶ್ ಹತ್ಯೆ ಬಳಿಕ ರಮೇಶ್ ಪತ್ನಿ ಶ್ರಿದೇವಿಗೆ ವಿಚಾರ ತಿಳಿಸಿ ಎಸ್ಕೇಪ್ ಆಗಿದ್ದಾನೆ. ಶ್ರಿದೇವಿ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Pandit Birju Maharaj Died: ಖ್ಯಾತ ಕಥಕ್​ ನೃತ್ಯಪಟು, ಪದ್ಮವಿಭೂಷಣ ಪುರಸ್ಕೃತ ಬಿರ್ಜೂ ಮಹಾರಾಜ್​ ನಿಧನ

Follow us on

Related Stories

Most Read Stories

Click on your DTH Provider to Add TV9 Kannada