ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 3 ಮಕ್ಕಳು ಸಾವು ಪ್ರಕರಣ; ಪ್ರಕರಣದ ಬಗ್ಗೆ ವರದಿ ಕೇಳಿದ ಆರೋಗ್ಯ ಸಚಿವ ಸುಧಾಕರ್
ಘಟನೆಗೆ ಕಾರಣ, ಲಸಿಕೆಯಿಂದ ಮಕ್ಕಳು ಮೃತಪಟ್ಟಿವೆಯಾ? ಅಥವಾ ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿ ಇದೆಯಾ ಎಂಬ ನಿಟ್ಟಿನಲ್ಲಿ ವರದಿ ನೀಡುವಂತೆ ಬೆಳಗಾವಿಯ ಡಿಎಚ್‌ಒ ಶಶಿಕಾಂತ ಮುನ್ಯಾಳಗೆ ಕರೆ ಮಾಡಿ ತಕ್ಷಣ ವರದಿ ನೀಡುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ ನೀಡಿದ್ದಾರೆ.
ಬೆಳಗಾವಿ: ಜಿಲ್ಲಾಸ್ಪತ್ರೆ ಬಿಮ್ಸ್ನಲ್ಲಿ (BIMS) ಮೂರು ಮಕ್ಕಳು ನಿಗೂಢವಾಗಿ ಮೃತಪಟ್ಟಿವೆ. 13 ತಿಂಗಳ ಮಗು ಪವಿತ್ರಾ ಹುಲಗುರ್, 14 ತಿಂಗಳ ಮಗು (Child) ಮಧು ಉಮೇಶ್ ಕುರಗುಂದಿ ಮತ್ತು ಒಂದೂವರೆ ವರ್ಷದ ಚೇತನ ಪೂಜಾರಿ ಎಂಬ ಮಗು ಸಾವನ್ನಪ್ಪಿದೆ. ಮೂರು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮಕ್ಕಳು ಮೃತಪಟ್ಟಿವೆ. ಮೂರು ಪುಟ್ಟ ಮಕ್ಕಳ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಬೆಳಗಾವಿ ಡಿಹೆಚ್ಓ (DHO) ಶಶಿಕಾಂತ ಮುನ್ಯಾಳಗೆ ಆರೋಗ್ಯ ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.
ಘಟನೆಗೆ ಕಾರಣ, ಲಸಿಕೆಯಿಂದ ಮಕ್ಕಳು ಮೃತಪಟ್ಟಿವೆಯಾ? ಅಥವಾ ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿ ಇದೆಯಾ ಎಂಬ ನಿಟ್ಟಿನಲ್ಲಿ ವರದಿ ನೀಡುವಂತೆ ಬೆಳಗಾವಿಯ ಡಿಎಚ್‌ಒ ಶಶಿಕಾಂತ ಮುನ್ಯಾಳಗೆ ಕರೆ ಮಾಡಿ ತಕ್ಷಣ ವರದಿ ನೀಡುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒಗೂ ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿ ಆಯುಕ್ತರು ವರದಿ ಕೇಳಿದ್ದಾರೆ.
ಮಕ್ಕಳಿಗೆ ರುಬೆಲ್ಲಾ ವ್ಯಾಕ್ಸಿನ್ ನೀಡಲಾಗಿತ್ತು ಮಕ್ಕಳಿಗೆ ರುಬೆಲ್ಲಾ ವ್ಯಾಕ್ಸಿನ್ ನೀಡಲಾಗಿತ್ತು. ಜ.12ರಂದು ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ವ್ಯಾಕ್ಸಿನ್ ನೀಡಿದ್ದರು. ಇಂಜೆಕ್ಷನ್ ಪಡೆದ ಬಳಿಕ ವಾಂತಿ ಭೇದಿ ಆರಂಭವಾಯಿತು. ಕೂಡಲೇ ನಾವು ಆಸ್ಪತ್ರೆಗೆ ದಾಖಲು ಮಾಡಿದ್ರೂ ಮಕ್ಕಳು ಬದುಕಲಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಮಕ್ಕಳು ಸಾವನ್ನಪ್ಪಿವೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ರುಬೆಲ್ಲ ವ್ಯಾಕ್ಸಿನ್ ಪಡೆದ ಬಳಿಕ ಮಕ್ಕಳು ಸಾವನ್ನಪ್ಪಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಅಂತ ನೋಡಿಕೊಂಡು ಮಾತಾಡುತ್ತೇನೆ ಅಂತ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ಕ್ಲೀನಿಕಲ್ ಎಕ್ಸಾಮಿನೇಷನ್ ಮಾಡಬೇಕಾಗುತ್ತದೆ. ಮಾಡುತ್ತೇವೆ. ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ. ಲಸಿಕೆಯಿಂದಲೇ ಸಾವಾಗಿದೆಯಾ ಎಂಬ ವಿಚಾರ ಬಳಿಕ ತಿಳಿಯುತ್ತದೆ ಅಂತ ಹೇಳಿದರು.
ಇದನ್ನೂ ಓದಿ: ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದವರಿಗೆ ಕೊರೊನಾ; ಈವರೆಗೆ 63 ಪೊಲೀಸರಿಗೆ ಸೋಂಕು ದೃಢ
ಬಸ್ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಸಹ ಪ್ರಯಾಣಿಕರ ಸಹಕಾರಕ್ಕೆ ಭಾರೀ ಮೆಚ್ಚುಗೆ