Belagavi News: ಚಿರತೆ ಹಿಡಿಯಲು ಮುಧೋಳ ನಾಯಿ; ಸಚಿವ ಗೋವಿಂದ ಕಾರಜೋಳ

ಬೆಳಗಾವಿ ಗಾಲ್ಫ್​ ಮೈದಾನದ 8 ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಪಂಜರ ಇರಿಸಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗಾಗಿ 50 ಸಿಬ್ಬಂದಿಯನ್ನು, ಪರಿಣಿತರನ್ನು ನಿಯೋಜಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

Belagavi News: ಚಿರತೆ ಹಿಡಿಯಲು ಮುಧೋಳ ನಾಯಿ; ಸಚಿವ ಗೋವಿಂದ ಕಾರಜೋಳ
ಸಚಿವ ಗೋವಿಂದ ಕಾರಜೋಳ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 15, 2022 | 2:04 PM

ಬೆಳಗಾವಿ: ಜಿಲ್ಲೆಯಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು, ಅವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ (Forest Department) ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಬೆಳಗಾವಿ ಗಾಲ್ಫ್​ ಮೈದಾನದ 8 ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಪಂಜರ ಇರಿಸಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗಾಗಿ 50 ಸಿಬ್ಬಂದಿಯನ್ನು, ಪರಿಣಿತರನ್ನು ನಿಯೋಜಿಸಲಾಗಿದೆ. ಒಂದು ವೇಳೆ ಚಿರತೆ ಬೋನಿಗೆ (Leopard) ಬೀಳದಿದ್ದರೆ ಕೊನೆಯ ಪ್ರಯತ್ನವಾಗಿ ಮುಧೋಳ ನಾಯಿಗಳನ್ನು (Mudhol Hounds) ತರಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಧೋಳ ನಾಯಿಗಳು ವಾಸನೆಯ ಮೇಲೆ ಚಿರತೆಯನ್ನು ಪತ್ತೆ ಮಾಡುತ್ತವೆ. ಚಿರತೆಯಷ್ಟೇ ಅಲ್ಲ ಯಾವುದನ್ನು ಬೇಕಾದರೂ ಪತ್ತೆ ಹಚ್ಚುವ ಸಾಮರ್ಥ್ಯ ಮುಧೋಳ ನಾಯಿಗಳಿಗೆ ಇವೆ. ಮಿಲಿಟರಿಗೂ ನಮ್ಮ ಮುಧೋಳ ನಾಯಿಗಳನ್ನು ಒಯ್ಯುತ್ತಾರೆ. ವೈರಿಗಳು ಎಲ್ಲಿಯೇ ಅಡಗಿ ಕುಳಿತಿದ್ರೆ ಹುಡುಕಿ ಕೊಡುತ್ತವೆ ಎಂದು ಅವರು ತಿಳಿಸಿದರು.

ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮುನಿಸು ಮುಂದುವರಿದಿದೆ. ಬೆಳಗಾವಿಯಲ್ಲಿಯೇ ಇದ್ದರೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಅಭಯ್ ಪಾಟೀಲ್ ಗೈರು ಹಾಜರಾಗಿದ್ದರು. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಧ್ವಜಾರೋಹಣ ನೆರವೇರಿಸಿದರು.

ಮುಂದುವರಿದ ಮುನಿಸು

ಬೆಳಗಾವಿಯಲ್ಲಿರುವ ಬಳ್ಳಾರಿ ನಾಲಾ ಸಮಸ್ಯೆ ನಿವಾರಿಸಲು ನಾಳೆ (ಆಗಸ್ಟ್ 16) ಸಭೆ ನಿಗದಿಪಡಿಸಲಾಗಿದೆ. ಸಭೆ ಬಗ್ಗೆ ಶಾಸಕ ಅಭಯ್ ಪಾಟೀಲ್‌ಗೆ ಮಾಹಿತಿ ನೀಡದಿದ್ದಕ್ಕೆ ಗೋವಿಂದ್ ಕಾರಜೋಳ ವಿರುದ್ಧ ಶಾಸಕ ಅಭಯ್ ಪಾಟೀಲ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಅಭಯ್ ಪಾಟೀಲ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಗೋವಿಂದ್ ಕಾರಜೋಳ ಸಿಟ್ಟಾದರು.

ಸ್ಥಳೀಯ ಶಾಸಕರ ಗಮನಕ್ಕೆ ತರದೇ ಸಭೆ ಕರೆದಿದ್ದೇಕೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ನಾನು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದಾಗ ಕೆಲವರು ಬಂದು ಅರ್ಜಿ ಕೊಟ್ಟರು. ನಾನು ಬೆಳಗಾವಿ ಧಾರವಾಡ ರೈಲ್ವೆ ಯೋಜನೆ, ಸಾಂಬ್ರಾ ಬಳಿ ಚತುಷ್ಪಥ ಹೆದ್ದಾರಿ ಕುರಿತು ಸಭೆ ಮಾಡಿದ್ದೇನೆ. ಇದೆ ಸಂದರ್ಭದಲ್ಲಿ ಬಳ್ಳಾರಿ ನಾಲಾ ಸಮಸ್ಯೆ ಬಗ್ಗೆ ಅರ್ಜಿ ಕೊಟ್ಟರು. ಹೀಗಾಗಿ ಈ ಸಭೆಯಲ್ಲಿ ಬಳ್ಳಾರಿ ನಾಲಾ ವಿಷಯ ಸೇರಿಸಿಕೊಳ್ಳಲು ತಿಳಿಸಿದೆ. ಇದರಲ್ಲಿ ನನ್ನದು ಏನಾದರೂ ತಪ್ಪು ಇದೆಯೇ ಎಂದು ಗೋವಿಂದ ಕಾರಜೋಳ ಮರು ಪ್ರಶ್ನಿಸಿದರು.

ಜನರ ಸಂಕಷ್ಟ ಚರ್ಚೆ ಮಾಡುವುದು ತಪ್ಪೇ ಎಂದು ಕೇಳಿದರು. ರೈತರು, ಸಾರ್ವಜನಿಕರು ಬಂದು ಅರ್ಜಿ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಈ ಬಗ್ಗೆ ಪರಿಶೀಲನೆ ನಡೆಸಬೇಕಲ್ಲವೇ? ಸ್ಥಳೀಯ ಶಾಸಕರನ್ನು ಮೀಟಿಂಗ್‌ಗೆ ಕರೆಯದಿದ್ದರೆ ಹೇಳಿ. ಸಭೆಯಲ್ಲಿ ಶಾಸಕ ಅಭಯ್ ಪಾಟೀಲ ‌ಬೇಕಾದ್ದು ಹೇಳಲಿ. ಈಗ ಸಭೆ ಆಗಿದೆಯೇ? ಮೀಟಿಂಗ್ ಟೈಮ್‌ವರೆಗೆ ವೇಟ್ ಮಾಡಿ ಗೊತ್ತಾಗಲಿದೆ. ಈ ಮನಸ್ಥಿತಿ ಇರಬಾರದು ಎಂದು ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾರಜೋಳ ಅಸಮಾಧಾನ ಹೊರ ಹಾಕಿದರು.

ಮಹದಾಯಿ ಜಾರಿ ಭರವಸೆ

ಚುನಾವಣೆಗೆ ಮೊದಲೇ ಮಹದಾಯಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಮಹದಾಯಿ ಯೋಜನೆ ಬೇಗ ಜಾರಿಯಾಗುವ ಸಾಧ್ಯತೆ ಇದೆ. ನಾವು ಒಂದು ಹಂತಕ್ಕೆ ತಲುಪಿದ್ದೇವೆ ಅಂತಾ ಹೇಳಿದ್ದೇನೆ. ಮಹದಾಯಿಯಲ್ಲಿ 3.9 ಟಿಎಂಸಿ ಕುಡಿಯುವ ನೀರಿಗೆ ಸಿಕ್ಕಿದೆ. ಮಹದಾಯಿ ಯೋಜನೆಯ ಕಾರ್ಯಸಾಧ್ಯತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗಬಹುದು ಎಂಬ ಆಶಾಭಾವನೆ ಇದೆ. ಇದರ ಬಗ್ಗೆ ಕಾಂಟ್ರಾವರ್ಸಿ ಬೇಡ ಎಂದು ಕಾರಜೋಳ ವಿನಂತಿಸಿದರು.

ನಾವು ಕೇವಲ ಭರವಸೆಗಳಿಗಷ್ಟೇ ಸೀಮಿತವಾಗಿಲ್ಲ. ಬಜೆಟ್‌ನಲ್ಲಿ ಹಣವನ್ನೂ ಇಟ್ಟಿದ್ದೇವೆ. ಹಿಂದೆ ಅಧಿಕಾರದಲ್ಲಿದ್ದವರು ಯೋಜನೆ ಮಾಡುವುದಾಗಿ ಕೇವಲ ಭರವಸೆಯನ್ನಷ್ಟೇ ಕೊಟ್ಟಿದ್ದರು. ನಾವು ಯೋಜನೆ ಮಾಡಬೇಕೆಂಬ ಕಾರಣಕ್ಕೆ ಬಜೆಟ್‌ನಲ್ಲಿ ಒಂದು ಕೋಟಿ ಇಟ್ಟಿದ್ದೇವೆ. ಇನ್ನು ಇದಕ್ಕೆ ಯಾರೂ ತಕರಾರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಕೃಷಿಗೆ ನೀರು ಕೊಡುವ ಯೋಜನೆ ಅಲ್ಲ, ಕೇವಲ ಕುಡಿಯುವ ನೀರಿಗಾಗಿ ಇರುವ ಯೋಜನೆ ಎಂದು ಅವರು ಹೇಳಿದರು.

ಯೋಜನೆಗೆ ಈ ಬಾರಿ ಕೇಂದ್ರದ ಅನುಮೋದನೆ ಸಿಗುವ ಬಗ್ಗೆ ನಮಗೆ ಆತ್ಮವಿಶ್ವಾಸ ಇದೆ. ಬಜೆಟ್‌ನಲ್ಲಿ ಹಣ ಇಡುವುದು ಚುನಾವಣೆ ವಿಷಯ ಅಲ್ಲ. ನಾವು ಯೋಜನೆ ಅನುಷ್ಠಾನ ಮಾಡಬೇಕೆಂಬ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಯೋಜನೆ ಮಾರ್ಪಾಡು ಮಾಡಿದ್ದೇವೆ, ಅದರ ಬಗ್ಗೆ ಹೆಚ್ಚಿನ ವ್ಯಾಖ್ಯಾನ ಬೇಡ. ನೂರಕ್ಕೆ ನೂರು ಯೋಜನೆ ಜಾರಿ ಆಗುತ್ತೆ. ಚುನಾವಣೆ ಹೋಗುವ ಮೊದಲೇ ಆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ಕಾರಜೋಳ ಭರವಸೆ ನೀಡಿದರು.

Published On - 2:04 pm, Mon, 15 August 22

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು