ಪತಿ, ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಡೆತ್​ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

ಗಂಡ ಹಾಗೂ ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತು ಸುರೇಖಾ ಡೆತ್ನೋಟ್ ಬರೆದಿಟ್ಟು ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿರುವ ತೋಟದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾದ ದಿನದಿಂದಲೂ ಹೆಂಡತಿಗೆ ಪತಿ ಕಿರುಕುಳ ನೀಡುತ್ತಿದ್ದ.

ಪತಿ, ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಡೆತ್​ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ
ಸುರೇಖಾ ಶ್ರೀನಾಥ್ ನಾಯಕ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ಬೆಳಗಾವಿ: ಪತಿ, ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ. ಸುರೇಖಾ ಶ್ರೀನಾಥ್ ನಾಯಕ (21) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ಗಂಡ ಹಾಗೂ ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತು ಸುರೇಖಾ ಡೆತ್ನೋಟ್ ಬರೆದಿಟ್ಟು ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿರುವ ತೋಟದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾದ ದಿನದಿಂದಲೂ ಹೆಂಡತಿಗೆ ಪತಿ ಕಿರುಕುಳ ನೀಡುತ್ತಿದ್ದ. ಕಾಲ ಗುಣ ಸರಿ ಇಲ್ಲ. ನೀನು ದರಿದ್ರ ಎಂದು ಟಾರ್ಚರ್ ಕೊಡುತ್ತಿದ್ದರಂತೆ. ಪತಿಯ ಕುಟುಂಬಸ್ಥರ ಮಾತಿಗೆ ನೊಂದಿದ್ದ ಸುರೆಖಾ ನಾಲ್ಕು ದಿನದ ಹಿಂದೆ ಮನೆ ಬಿಟ್ಟು ಹೋಗಿದ್ದರು. ನಿನ್ನೆ‌ ಸಂಜೆ ತೋಟದ ಮನೆಯಲ್ಲಿದ್ದ ಬಾವಿಯಲ್ಲಿ ಸುರೇಖಾ ಶವವಾಗಿ ಪತ್ತೆಯಾಗಿದ್ದಾರೆ.

ನನ್ನ ಹಾದಿ ಕಾಯಬೇಡ ನಾನು ಸತ್ತು ಹೋಗುತ್ತೇನೆ. ನನಗೆ ಸಾಕಾಗಿದೆ. ನನಗೆ ಶನಿ ಹತ್ತಿದೆ. ನೀನು ಬೇರೆ ಮದುವೆ ಮಾಡಿಕೊಂಡು ಸುಖವಾಗಿರು ಎಂದು ಸುರೇಖಾ ತಮ್ಮ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನು ಕೊಂದು ಸಾವು ಎಂದ ಪತಿ ಅರೆಸ್ಟ್
ಇನ್ನು ಮತ್ತೊಂದು ಕಡೆ ಪತ್ನಿ ಕೊಂದು ಅಪಘಾತವೆಂದು ಬಿಂಬಿಸಲೆತ್ನಿಸಿದ್ದ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹುಲಿಕಲ್ ಕ್ರಾಸ್ ಬಳಿ ಹಂತಕ ಮಹೇಶ್(32)ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹೇಶ್, ಪತ್ನಿಯನ್ನು ಕೊಂದು ಅಪಘಾತವಾಗಿ ಸಾವು ಎಂದು ಬಿಂಬಿಸಲೆತ್ನಿಸಿದ್ದ. ಅಪಘಾತವಾಗಿ ಪತ್ನಿ ಮೃತಪಟ್ಟು ತನಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ. ಸದ್ಯ ಈಗ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

3 ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಉಪ್ಪಾರಕೊಪ್ಪಲಿನ ಪ್ರೀತಿ(23) ಜೊತೆ ಮಹೇಶ್ಗೆ ವಿವಾಹವಾಗಿತ್ತು. ಆದ್ರೆ ಇವರ ನಡುವೆ ಕೌಟುಂಬಿಕ ಕಲಹ ನಡೆದು ಪತ್ನಿಯನ್ನ ಮಹೇಶ್ ಕೊಂದಿದ್ದ. ನಿನ್ನೆ ಬೆಳಗ್ಗೆ ಅಪಘಾತವಾಗಿದೆ ಎಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದ. ಆದ್ರೆ ಅಪಘಾತದ ಸ್ಥಳ ನೋಡಿ ಅನುಮಾನಗೊಂಡಿದ್ದ ಪೊಲೀಸರು ಮಹೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಮಹೇಶ್ ತಪ್ಪೊಪ್ಪಿಕೊಂಡಿದ್ದಾನೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಗರಸಭೆ ಮಾಜಿ ಅಧ್ಯಕ್ಷನ ವಿರುದ್ಧ ದಬ್ಬಾಳಿಕೆ ಆರೋಪ, ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

Read Full Article

Click on your DTH Provider to Add TV9 Kannada