ದಕ್ಷಿಣ ಕನ್ನಡ: ಮುಸ್ಲಿಂ ವ್ಯಕ್ತಿ ಜಾಗದಲ್ಲಿ ದೇವಸ್ಥಾನ ಪತ್ತೆ; ಅಲ್ಲಿಯೇ ನಾಗ ಸಾನಿಧ್ಯದ ಸುಳಿವು ಗೋಚರ

ಬೆಳ್ತಂಗಡಿ(Belthangady) ತಾಲೂಕಿನ ತೆಕ್ಕಾರಿನಲ್ಲಿ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ಹಿಂದಿನ ಪ್ರಶ್ನಾ ಚಿಂತನೆ ವೇಳೆ ಉತ್ಖನನ ನಡೆಸಿದ ಮೇಲೆ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಸರ್ಕಾರಿ ಜಾಗದ 15 ಅಡಿ ಆಳದಲ್ಲಿ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿತ್ತು. ಸದ್ಯ ದೇವಸ್ಥಾನ ಪತ್ತೆ ಬೆನ್ನಲ್ಲೇ ನಾಗಾರಾಧನೆ ಬಗ್ಗೆಯೂ ಸ್ಪೋಟಕ ಸತ್ಯ ಬಹಿರಂಗವಾಗಿದೆ.

ದಕ್ಷಿಣ ಕನ್ನಡ: ಮುಸ್ಲಿಂ ವ್ಯಕ್ತಿ ಜಾಗದಲ್ಲಿ ದೇವಸ್ಥಾನ ಪತ್ತೆ; ಅಲ್ಲಿಯೇ ನಾಗ ಸಾನಿಧ್ಯದ ಸುಳಿವು ಗೋಚರ
ಬೆಳ್ತಂಗಡಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 22, 2023 | 7:28 PM

ದಕ್ಷಿಣ ಕನ್ನಡ, ನ.22: ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ತೆಕ್ಕಾರಿನಲ್ಲಿ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ದೇವಸ್ಥಾನ ಪತ್ತೆ ವಿಚಾರ ‘ ಇದೀಗ ಅದರ ಬೆನ್ನಲ್ಲೇ ಗ್ರಾಮಸ್ಥರು ಅದೇ ಜಾಗದಲ್ಲಿಯೇ ಪ್ರಶ್ನಾ ಚಿಂತನೆ ಇಟ್ಟಿದ್ದಾರೆ. ಪ್ರಶ್ನಾ ಚಿಂತನೆಯಲ್ಲಿ ನಾಗ ಸಾನಿಧ್ಯದ ಸುಳಿವು ಗೋಚರವಾಗಿದೆ. ದೈವಜ್ಞ ಮಾಡಾವು ವೆಂಕಟ್ರಮಣ್ ಭಟ್ ನೇತೃತ್ವದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನ ಪತ್ತೆಯಾದ ಜಾಗದ ಹತ್ತಿರದಲ್ಲೇ ನಾಗಬನ ಇರುವ ಸುಳಿವು ಸಿಕ್ಕಿದೆ.

ತೆರೆದಷ್ಟು ಬಿಚ್ಚಿಕೊಳ್ಳುತ್ತಲೇ ಇದೆ ತೆಕ್ಕಾರು ಗೋಪಾಲಕೃಷ್ಣ ದೇವರ ರಹಸ್ಯ

ಹಿಂದಿನ ಪ್ರಶ್ನಾ ಚಿಂತನೆ ವೇಳೆ ಉತ್ಖನನ ನಡೆಸಿದ ಮೇಲೆ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಸರ್ಕಾರಿ ಜಾಗದ 15 ಅಡಿ ಆಳದಲ್ಲಿ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿತ್ತು. ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರುವ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿತ್ತು. ಸದ್ಯ ದೇವಸ್ಥಾನ ಪತ್ತೆ ಬೆನ್ನಲ್ಲೇ ನಾಗಾರಾಧನೆ ಬಗ್ಗೆಯೂ ಸ್ಪೋಟಕ ಸತ್ಯ ಬಹಿರಂಗವಾಗಿದೆ. ಈ ಮೂಲಕ ತೆಕ್ಕಾರು ಗೋಪಾಲಕೃಷ್ಣ ದೇವರ ರಹಸ್ಯ ತೆರೆದಷ್ಟು ಬಿಚ್ಚಿಕೊಳ್ಳುತ್ತಲೇ ಇದೆ. ಇದರಿಂದ ತೆಕ್ಕಾರಿನಲ್ಲಿ ಮತ್ತೊಂದು ಉತ್ಖನನಕ್ಕೆ ದಾರಿ ಮಾಡಿಕೊಡುತ್ತಾ ಹೊಸ ಪ್ರಶ್ನಾ ಚಿಂತನೆ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:ಮಂಗಳೂರು: ಕನಸಿನಿಂದ ಪತ್ತೆಯಾಯ್ತು ನಶಿಸಿ ಹೋದ ದೇವಸ್ಥಾನ, ಸ್ಥಳ ಬಿಟ್ಟು ಕೊಟ್ಟ ಮುಸ್ಲಿಂ ವ್ಯಕ್ತಿ

ನ.7 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲಿನಲ್ಲಿ ಮುಸ್ಲಿಂ ಧರ್ಮದ ವ್ಯಕ್ತಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಾಲಯ ಇರುವ ಬಗ್ಗೆ ವ್ಯಕ್ತಿಯೊಬ್ಬರಿಗೆ ಕನಸು ಬಿದ್ದಿತ್ತು. ಅದರಂತೆ ಜೆಸಿಬಿ ಮೂಲಕ ಜಮೀನು ಅಗೆದಾಗ ನಶಿಸಿ ಹೋಗಿದ್ದ ನೂರಾರು ವರ್ಷಗಳ ಹಿಂದಿನ ಗೋಪಾಲಕೃಷ್ಣ ದೇವರ ವಿಗ್ರಹ ಪತ್ತೆಯಾಗಿತ್ತು. ಹೀಗಾಗಿ ಮುಸ್ಲಿಂ ವ್ಯಕ್ತಿ ತನ್ನ ವಶದಲ್ಲಿದ್ದ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಪ್ರಶ್ನೆ ಇಟ್ಟಿದ್ದು, ನಾಗ ಸಾನಿಧ್ಯದ ಸುಳಿವು ಸಿಕ್ಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Wed, 22 November 23