ಆಸ್ತಿ ಹಸ್ತಾಂತರಿಸದ ತಂದೆಯ ಕಣ್ಣುಗಳನ್ನು ಕಿತ್ತಿದ್ದ ಮಗನಿಗೆ 9 ವರ್ಷ ಜೈಲುಶಿಕ್ಷೆ ವಿಧಿಸಿದ ನ್ಯಾಯಾಲಯ
ಆಸ್ತಿ ಹಸ್ತಾಂತರಿಸದ ತಂದೆಯ ಕಣ್ಣುಗಳನ್ನು ಕಿತ್ತಿದ್ದ ಮಗನಿಗೆ 57ನೇ CCH ಕೋರ್ಟ್ 40 ಸಾವಿರ ರೂ. ದಂಡ ಮತ್ತು 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಟಿ.ಗೋವಿಂದಯ್ಯರಿಂದ ಅಪರಾಧಿ ಅಭಿಷೇಕ್ ಚೇತನ್ಗೆ ಶಿಕ್ಷೆ ವಿಧಿಸಲಾಗಿದೆ. 2018ರ ಆ.29ರಂದು ಬೆಂಗಳೂರಿನ ಶಾಕಾಂಬರಿನಗರದಲ್ಲಿ ಘಟನೆ ನಡೆದಿತ್ತು.
ಬೆಂಗಳೂರು, ನವೆಂಬರ್ 22: ಆಸ್ತಿ ಹಸ್ತಾಂತರಿಸದ ತಂದೆಯ ಕಣ್ಣುಗಳನ್ನು ಕಿತ್ತಿದ್ದ ಮಗನಿಗೆ 57ನೇ CCH ಕೋರ್ಟ್ 40 ಸಾವಿರ ರೂ. ದಂಡ ಮತ್ತು 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Jail sentence) ವಿಧಿಸಿದೆ. ನ್ಯಾಯಾಧೀಶ ಟಿ.ಗೋವಿಂದಯ್ಯರಿಂದ ಅಪರಾಧಿ ಅಭಿಷೇಕ್ ಚೇತನ್ಗೆ ಶಿಕ್ಷೆ ವಿಧಿಸಲಾಗಿದೆ. 2018ರ ಆ.29ರಂದು ಬೆಂಗಳೂರಿನ ಶಾಕಾಂಬರಿನಗರದಲ್ಲಿ ಘಟನೆ ನಡೆದಿತ್ತು. ತಂದೆ ಪರಮೇಶ್ನ ಕಣ್ಣುಗಳನ್ನ ಪುತ್ರ ಅಭಿಷೇಕ್ ಚೇತನ್ ಕಿತ್ತುಹಾಕಿದ್ದ.
ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307, 326, 329, 450, 341, 504ರ ಅಡಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಜಾಮೀನಿನ ಮೇಲೆ ಅಭಿಷೇಕ್ ಜೈಲಿನಿಂದ ಬಿಡುಗಡೆಗೊಂಡಿದ್ದ. ಇದೀಗ ಮತ್ತೆ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆ ಮತ್ತೆ ಬಂಧಿಸಿ ಜಯನಗರ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಸರ್ಕಾರಿ ಅಭಿಯೋಜಕಿ ಕೆ.ಎಸ್.ವೀಣಾ ಪ್ರಾಸಿಕ್ಯೂಷನ್ ಪರ ವಾದಿಸಿದ್ದರು.
ರೈಲು ನಿಲ್ದಾಣದಲ್ಲಿ ರೈಲಿಗೆ ತಲೆ ಕೊಟ್ಟು ರೈಲ್ವೆ ಅಧಿಕಾರಿ ಆತ್ಮಹತ್ಯೆ
ಮೈಸೂರು: ರೈಲು ನಿಲ್ದಾಣದಲ್ಲಿ ರೈಲಿಗೆ ತಲೆ ಕೊಟ್ಟು ರೈಲ್ವೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರು ರೈಲು ನಿಲ್ದಾಣದ ಪ್ಲಾಟ್ಫಾರಂ ನಂಬರ್ 6ರಲ್ಲಿ ನಡೆದಿದೆ. ಮೆಕ್ಯಾನಿಕಲ್ ವಿಭಾಗದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಪ್ರಭು(45) ಮೃತ ವ್ಯಕ್ತಿ. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ಸಂಬಂಧ ರೈಲ್ವೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಕಲಬುರಗಿ: ದೇವರ ಹೆಸರಿನಲ್ಲಿ ಭವಿಷ್ಯ ಹೇಳುತ್ತಿದ್ದ ವೃದ್ಧೆಯ ಕೊಲೆ
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಕುಂಸಿ ಬಳಿಕ ರೈಲಿಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ಅರುಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿ ಬಿಹಾರ ಮೂಲದ ಕುಂಸಿಯ ನಿವಾಸಿ. ಮುಂಜಾನೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಟವಾಡುತ್ತಿದ್ದಾಗ ಗೇಟ್ ಬಿದ್ದು ಮಗು ಸಾವು
ಉಡುಪಿ: ಆಟವಾಡುತ್ತಿದ್ದ ಮಗುವಿನ ಮೇಲೆ ಗೇಟ್ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದೆ. ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು. ಮನೆಯ ಪಕ್ಕದ ಗೆಸ್ಟ್ ಹೌಸ್ ಬಳಿ ಪ್ರತಿನಿತ್ಯ ಮಗು ಆಟವಾಡುತ್ತಿತ್ತು.
ಇದನ್ನು ಓದಿ: ಕೊಡಗು: ಸಚಿವ ಬೋಸರಾಜು ಪಿಎ ಹೆಸರಿನಲ್ಲಿ ಹಣ ವಸೂಲಿ: ಇಬ್ಬರ ಬಂಧನ
ನಿನ್ನೆ ಅಚಾನಕ್ ಆಗಿ ಮಗುವಿನ ಮೇಲೆ ಗೇಟ್ ಕಳಚಿ ಬಿದಿದ್ದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದೆ. ಗೆಸ್ಟ್ ಹೌಸ್ ನವರ ಬೇಜವಾಬ್ದಾರಿತನದ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.