ಬೆಂಗಳೂರಿನಲ್ಲಿ ಇಂದು ಮೊಳಗಲಿದೆ ಸೈರನ್: ಮಾಕ್ ಡ್ರಿಲ್​​ಗೆ ಸಜ್ಜಾದ ಸಿಲಿಕಾನ್​ ಸಿಟಿ

ಭಾರತ ಸೇನೆಗೆ ಬಲ ತುಂಬಲು ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಮಾಕ್ ಡ್ರಿಲ್​ ಮಾಡಲಾಗುತ್ತಿದೆ. ಹಲಸೂರಿನ ಅಗ್ನಿಶಾಮಕ ದಳ ಕಚೇರಿಯಲ್ಲಿ ಸಂಜೆ 4 ರಿಂದ ರಾತ್ರಿ 8 ರವರೆಗೆ ಮಾಕ್ ಡ್ರಿಲ್​ ನಡೆಯಲಿದ್ದು, ಯಾವೆಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂಬ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರೂ ಭಾಗವಹಿಸಲು ಅವಕಾಶವಿದೆ.

ಬೆಂಗಳೂರಿನಲ್ಲಿ ಇಂದು ಮೊಳಗಲಿದೆ ಸೈರನ್: ಮಾಕ್ ಡ್ರಿಲ್​​ಗೆ ಸಜ್ಜಾದ ಸಿಲಿಕಾನ್​ ಸಿಟಿ
ಮಾಕ್ ಡ್ರಿಲ್ (ಸಂಗ್ರಹ ಚಿತ್ರ)
Updated By: ಗಂಗಾಧರ​ ಬ. ಸಾಬೋಜಿ

Updated on: May 07, 2025 | 12:38 PM

ಬೆಂಗಳೂರು, ಮೇ 07: ಪಾಕ್‌-ಭಾರತದ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಈ ಮಧ್ಯೆ ಪಾಕ್​ನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ಮಾಡುವ ಮೂಲಕ ಶಾಕ್​ ನೀಡಿದೆ. ಸಿಂಧೂರ ಅಳಿಸಿದವರಿಗೆ ಸಿಂಧೂರ್ ಆಪರೇಷನ್ (Operation Sindoor) ಮೂಲಕ ತಕ್ಕ ಉತ್ತರ ನೀಡಲಾಗಿದೆ. ಇದರ ನಡುವೆ ಇಂದು ದೇಶಾದ್ಯಂತ ಮಾಕ್​ ಡ್ರಿಲ್ (Mock drill)​​ ನಡೆಯಲಿದೆ. ಇತ್ತ ಕರ್ನಾಟದ ಮೂರು ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿ ಮಾತ್ರ  ಮಾಕ್​ ಡ್ರಿಲ್​ ನಡೆಯಲಿದ್ದು, ಸಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಾರತ ಸೇನೆಗೆ ಬಲತುಂಬಲು ಇಂದು ಮಾಕ್ ಡ್ರಿಲ್

1971ರ ಭಾರತ-ಪಾಕ್ ಯುದ್ಧದ ನಂತರ ಇದೇ ಮೊದಲ ಬಾರಿಗೆ ಮಾಕ್ ಡ್ರಿಲ್​​ ನಡೆಯುತ್ತಿದೆ. ಇಂದು ಬೆಂಗಳೂರಿನಲ್ಲಿ ಮಾತ್ರ ಮಾಕ್‌ಡ್ರಿಲ್‌ ನಡೆಯಲಿದೆ. ಮೊದಲು ಹಲಸೂರು ಲೇಕ್​ನಿಂದ ಮಾಕ್ ಡ್ರಿಲ್ ಶುರುವಾಗಲಿದೆ. ಬಳಿಕ ಅಗ್ನಿಶಾಮಕ ಪ್ರಧಾನ ಕಚೇರಿಯಲ್ಲಿ ಮಾತ್ರ ಮಾಕ್ ಡ್ರಿಲ್ ನಡೆಯಲಿದ್ದು, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಅಣಕು ಕಾರ್ಯಾಚರಣೆ ಇರಲಿದೆ. ಈ ಮಾಕ್ ಡ್ರಿಲ್​​ನಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಲು ಅವಕಾಶವಿದೆ.

ಇದನ್ನೂ ಓದಿ: ಅತ್ತ ಆಪರೇಷನ್ ಸಿಂಧೂರ್, ಇತ್ತ ಶಾಂತಿ ಮಂತ್ರ ಜಪಿಸಿದ ಕರ್ನಾಟಕ ಕಾಂಗ್ರೆಸ್​ಗೆ ಜನ ತರಾಟೆ

ನಗರದ ಹಲಸೂರಿನ ಅಗ್ನಿಶಾಮಕ ದಳ ಕಚೇರಿಯಲ್ಲಿ ಮಾಕ್ ಡ್ರಿಲ್​​ಗೆ ಈಗಾಗಲೇ ಸಕಲ ಸಿದ್ಧತೆ ಮಾಡಲಾಗಿದೆ. ಆ ಮೂಲಕ ಮೂಲಕ ಭಾರತೀಯ ಸೇನೆಗೆ ಬೆಂಬಲ ನೀಡಲಾಗುತ್ತಿದೆ. ಅಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ತಂಡ, ಎನ್​ಸಿಸಿ ತಂಡಗಳ ಮೂಲಕ ಮಾಕ್​ ಡ್ರಿಲ್​ ನಡೆಯಲಿದೆ. ಈ ನಿಟ್ಟಿನಲ್ಲಿ ಹಲಸೂರಿನ ಅಗ್ನಿಶಾಮಕ ದಳ ಕಚೇರಿಯಲ್ಲಿ  ಸಿವಿಲ್ ಡಿಫೆನ್ಸ್ ತಂಡ ಬೀಡುಬಿಟ್ಟಿದೆ.

ಮಾಕ್ ಡ್ರಿಲ್​ ಹಿನ್ನೆಲೆ ಬೆಂಗಳೂರಿನಲ್ಲಿ ರಾತ್ರಿ 7 ಗಂಟೆಗೆ ಸರಿಯಾಗಿ ಸಂಪೂರ್ಣ ವಿದ್ಯುತ್ ಸ್ಥಗಿತಗೊಳ್ಳಲಿದೆ. ವಾಯುದಾಳಿಯ ಸಮಯದಲ್ಲಿ ಲೈಟ್ ಆಫ್ ಮಾಡಲಾಗುತ್ತದೆ. ಈ ವೇಳೆ ಸಾರ್ವಜನಿಕರು ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು. ಯುದ್ಧದ ಸಮಯದಲ್ಲಿ ಹೇಗೆ ನಿಭಾಯಿಬೇಕು ಮತ್ತು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಈ ಅಭ್ಯಾಸ ಮಾಡಲಾಗತ್ತದೆ.

ಇದನ್ನೂ ಓದಿ: ಮಾಕ್ ಡ್ರಿಲ್ ಅಂದ್ರೇನು? ಬೆಂಗಳೂರಿನಲ್ಲಿ ಎಲ್ಲೆಲ್ಲಿ, ಹೇಗೆ ನಡೆಯುತ್ತೆ? ಇಲ್ಲಿದೆ ಸಂಪೂರ್ಣ ವಿವರ

ಸಿಲಿಕಾನ್ ಸಿಟಿ, ಐಟಿ ಕ್ಯಾಪಿಟಲ್ ಬೆಂಗಳೂರು ಪ್ರಮುಖ ಟಾರ್ಗೆಟ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ಮಾಕ್‌ಡ್ರಿಲ್‌ನಲ್ಲಿ ಯುದ್ಧದ ವೇಳೆ ಜನರು ಹೇಗೆ ಸನ್ನದ್ಧರಾಗಿರಬೇಕು. ಪ್ಯಾನಿಕ್ ಆಗದೇ ಯಾವೆಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಅಂತ ಅರಿವು ಮೂಡಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:35 pm, Wed, 7 May 25