ಬೆಂಗಳೂರು, ಆಗಸ್ಟ್ 10: ಕಟ್ಟಡ ನಿರ್ಮಾಣ ವೇಳೆ ಸೆಂಟ್ರಿಂಗ್ ಕುಸಿದು (Centering collapsed) ಮೂವರು ಕಾರ್ಮಿಕರ ಪೈಕಿ ಇಬ್ಬರು ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರಿನ ಪೀಣ್ಯದ ಎನ್ಟಿಟಿಎಫ್ ರಸ್ತೆಯಲ್ಲಿ ನಡೆದಿದೆ. ದುರಂತದಲ್ಲಿ ಕಾರ್ಮಿಕ ಹಿಮಾಂಶು (28), ಆಸ್ಪತ್ರೆಗೆ ಸಾಗಿಸುವಾಗ ಪ್ರಕಾಶ್ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸೆಂಟ್ರಿಂಗ್ ಹಾಕಿ ಆರ್.ಸಿ.ಸಿ ಹಾಕುವ ಕೆಲಸ ನಡೆಯುತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಐದನೇ ಅಂತಸ್ತಿನಲ್ಲಿ ಕಟ್ಟಡ ಕಾಮಗಾರಿ ಕೆಲಸ ನಡೆಯುತಿತ್ತು. ಈ ಸಂದರ್ಭದಲ್ಲಿ ನಿರ್ಮಾಣ ಮಾಡುತ್ತಿದ್ದ ಸೆಂಟ್ರಿಂಗ್ ಕುಸಿದಿದೆ. ಐದನೇ ಮಹಡಿಯಿಂದ ಕಾರ್ಮಿಕ ಹಿಮಾಂಶು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕ ಯಾದಗಿರಿ ಮೂಲದವನು.
ರಾಮನಗರ: ಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಜೋಗಿಪಾಳ್ಯ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಜೋಗಿಪಾಳ್ಯದ ಜಯಮ್ಮಗೆ ಗಾಯಗಳಾಗಿದ್ದು, ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಕೋಲಾರ ನವ ವಧು-ವರ ಹೊಡೆದಾಟ ಕೇಸ್; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಗ್ರಾಮದ ಹೊರವಲಯದಲ್ಲಿ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಕುರಿಗಳನ್ನು ರಕ್ಷಿಸಲು ಚಿರತೆ ಮೇಲೆ ಜಯಮ್ಮ ಪ್ರತಿದಾಳಿ ನಡೆಸಿದ್ದಾರೆ. ತನ್ನ ಬಳಿಯಿದ್ದ ಕೋಲಿನಿಂದ ಚಿರತೆ ಮುಖಕ್ಕೆ ತಿವಿದಿದ್ದಾರೆ. ಈ ವೇಳೆ ಅವರ ಮೇಲೆ ದಾಳಿದ್ದು, ಬಳಿಕ ಮಹಿಳೆ ಚೀರಿಕೊಂಡಾಗ ಚಿರತೆ ಬಿಟ್ಟು ಓಡಿದೆ.
ಬಳ್ಳಾರಿ: ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಬಳಿ ಬೈಕ್ ಕಳ್ಳತನ ಮಾಡುತ್ತಿದ್ದ ಅಪ್ರಾಪ್ತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 3 ಲಕ್ಷ ಮೌಲ್ಯದ 9 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನ ತಪಾಸಣೆ ಮಾಡುವಾಗ ಅಪ್ರಾಪ್ತ ಸಿಕ್ಕಿಬಿದಿದ್ದಾನೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಎಂದು ವಂಚನೆ ಮಾಡ್ತಿದ್ದವನ ಬಂಧನ
ಅನುಮಾನಗೊಂಡು ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರೋದನ್ನ ಒಪ್ಪಿಕೊಂಡಿದ್ದಾನೆ. ಬಸ್ ನಿಲ್ದಾಣ ಹಾಗೂ ಸರ್ಕಾರಿ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಗಳಲ್ಲಿ ಆರೋಪಿ ಬೈಕ್ ಕಳ್ಳತನ ಮಾಡಿದ್ದ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.