Bengaluru: ಪರೀಕ್ಷೆ ಸಮಯದಲ್ಲಿ ಎಡವಟ್ಟು ನಿರ್ಧಾರಕ್ಕೆ ಮುಂದಾದ ಶಿಕ್ಷಣ ಇಲಾಖೆ; ಚುನಾವಣೆ ಕೆಲಸಕ್ಕೆ ಸಾವಿರಾರು ಶಿಕ್ಷಕರ ಬಳಕೆ

ಇನ್ನೇನು ಮುಂದಿನ ತಿಂಗಳುಗಳಿಂದ ಮಕ್ಕಳಿಗೆ ಸಾಲು ಸಾಲು ಪರೀಕ್ಷೆಗಳು ಶುರುವಾಗಲಿದೆ. ಇಂತಹ ಸಮಯದಲ್ಲಿ ಬಿಬಿಎಂಪಿ ಹಾಗೂ ಜಿಲ್ಲಾಧಿಕಾರಿಗಳು ಚುನಾವಣೆಯ ಕೆಲಸಕ್ಕಾಗಿ ಸಾವಿರಾರು ಶಿಕ್ಷಕರ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

Bengaluru: ಪರೀಕ್ಷೆ ಸಮಯದಲ್ಲಿ ಎಡವಟ್ಟು ನಿರ್ಧಾರಕ್ಕೆ ಮುಂದಾದ ಶಿಕ್ಷಣ ಇಲಾಖೆ; ಚುನಾವಣೆ ಕೆಲಸಕ್ಕೆ ಸಾವಿರಾರು ಶಿಕ್ಷಕರ ಬಳಕೆ
ಸಾಂದರ್ಭಿಕ ಚಿತ್ರ
Edited By: ಕಿರಣ್ ಹನುಮಂತ್​ ಮಾದಾರ್

Updated on: Jan 16, 2023 | 12:22 PM

ಬೆಂಗಳೂರು: ಈಗಾಗಲೇ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಪಟ್ಟಿ ಪ್ರಕಟವಾಗಿದೆ.
5ಮತ್ತು 8 ನೇ ತರಗತಿ ಮಕ್ಕಳಿಗೂ ವಾರ್ಷಿಕ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಕಾರಣ ಮುಂದಿನ ತಿಂಗಳನಿಂದ ಮಕ್ಕಳಿಗೆ ಸಾಲು ಸಾಲು ಎಕ್ಸಾಂ ಶುರುವಾಗಲಿದೆ. ಇಂತಹ ಸಂದರ್ಭದಲ್ಲಿ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ 60 ಸಾವಿರ ಶಿಕ್ಷಕರನ್ನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಬಳಸಿಕೊಳ್ಳಲು ಮುಂದಾಗಿದೆ. ಈ ಕಾರಣಕ್ಕಾಗಿ ಶಿಕ್ಷಣ ಇಲಾಖೆ ವಿರುದ್ಧ ವಿಧಾನ ಪರಿಷತ್ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಚುನಾವಣೆಗೆ ಇನ್ನೂ 4-5 ತಿಂಗಳ ಇರುವಾಗಲೇ ಬಿಬಿಎಂಪಿ, ಇತರೆ ಪಾಲಿಕೆಗಳು ಹಾಗೂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಚುನಾವಣೆಯ ಆಯೋಗದ ನಿರ್ದೇಶನದ ಕಾರಣ ನೀಡಿ ಚುನಾವಣೆಯ ತರಬೇತಿಗೆ ಪ್ರೌಢಶಾಲಾ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರನ್ನ ಕಡ್ಡಾಯವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಶಿಕ್ಷಕರ ಬಳಕೆಗೆ ಅವಕಾಶ ನೀಡದಂತೆ ಕ್ರಮವಹಿಸುವಂತೆ ಶಿಕ್ಷಣ ಸಚಿವರಿಗೆ ವಿಧಾನ ಪರಿಷತ್ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಸೇರಿ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಮೊದಲೇ ಶಿಕ್ಷಕರ ಕೊರೆತೆ ಇದ್ದು, ಇಂತಹ ಸಮಯದಲ್ಲಿ ಶಿಕ್ಷಕರನ್ನ ಚುನಾವಣೆ ಕೆಲಸಕ್ಕೆ ಬಳಸದಂತೆ ಸುತ್ತೋಲೆ ನೀಡುವಂತೆ ಶಿಕ್ಷರ ಸಂಘ ಒತ್ತಾಯ ಮಾಡಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Web contact

TV9 Kannada

Read More
Follow Us