ಶ್ಯೂರಿಟಿ ಇಲ್ಲದೆ ಸಾಲ ಕೊಡ್ತೀವಿ ಅಂದ್ರೆ ಯಾರೂ ನಂಬಬೇಡಿ, ಈ ರೀತಿ ಮೋಸ ಮಾಡ್ತಾರೆ

ಬೆಂಗಳೂರಿನಲ್ಲಿ ಭದ್ರತೆ ಇಲ್ಲದೆ ಸಾಲ ಎಂದು ಭರವಸೆ ನೀಡಿ 2000 ಕ್ಕೂ ಹೆಚ್ಚು ಜನರನ್ನು ವಂಚಿಸಲಾಗಿದೆ. ಆನಂದ್, ರೇಷ್ಮಾ, ಅಂಜುಂ, ಆನಿಯಾ ಎಂಬುವವರು ಶ್ರೀಕಾರ ಕೋ-ಆಪರೇಟಿವ್ ಸೊಸೈಟಿ ಲೋನ್ ಹೆಸರಿನಲ್ಲಿ ವಂಚನೆ ನಡೆಸಿದ್ದಾರೆ. ಪ್ರೊಸೆಸಿಂಗ್ ಮತ್ತು ಅಕೌಂಟ್ ಓಪನಿಂಗ್ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗಿದೆ. ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶ್ಯೂರಿಟಿ ಇಲ್ಲದೆ ಸಾಲ ಕೊಡ್ತೀವಿ ಅಂದ್ರೆ ಯಾರೂ ನಂಬಬೇಡಿ, ಈ ರೀತಿ ಮೋಸ ಮಾಡ್ತಾರೆ
ಸಾಲ
Follow us
ರಾಚಪ್ಪಾಜಿ ನಾಯ್ಕ್
| Updated By: ನಯನಾ ರಾಜೀವ್

Updated on: Nov 10, 2024 | 8:42 AM

ಶ್ಯೂರಿಟಿ ಇಲ್ಲದೆ ಸಾಲ ಕೊಡುತ್ತೇವೆ ಎಂಬ ಮಾತನ್ನು ನಂಬಿ 2 ಸಾವಿರ ಮಂದಿ ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಚ್ಚಾಗಿ ವಿದ್ಯಾವಂತರೇ ವಾಸಿಸುವ ಮಾಯಾ ನಗರಿಯಲ್ಲಿ ಇಷ್ಟೆಲ್ಲಾ ಮಂದಿ ವಂಚಕ ಮಾತಿಗೆ ಮರುಳಾಗಿದ್ದಾರೆ. ಆನಂದ್, ರೇಷ್ಮಾ, ಅಂಜುಂ, ಆನಿಯಾ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ. ಸಾಲ ಕೊಡಿಸುವುದಾಗಿ ಹೇಳಿ 2ಸಾವಿರಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೈಗ್ರೌಂಡ್ಸ್ ಪೊಲೀಸರು ರೇಷ್ಮಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಕಾರ ಕೋ-ಆಪರೇಟಿವ್ ಸೊಸೈಟಿ ಲೋನ್ ಹೆಸರಲ್ಲಿ ವಂಚನೆ ಮಾಡಿದ್ದಾರೆ. 1 ಲಕ್ಷದಿಂದ 25ಲಕ್ಷದವರೆಗೂ ಸಾಲ ಕೊಡುವುದಾಗಿ ಹೇಳಿಕೆ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಸಾರ್ವಜನಿಕರಿಗೆ ಲೋನ್ ಕೊಡಿಸಲಿಕ್ಕೆ ಪ್ರೊಸೆಸಿಂಗ್ ಫೀಜ್ ಹಾಗೂ

ಅಕೌಂಟ್ ಓಪನಿಂಗ್ ಫೀಜ್ ಹೆಸರಲ್ಲಿ ಸಾವಿರಾರು ರೂ. ಪಡೆದಿದ್ದಾರೆ ಎನ್ನುವ ಆರೋಪವಿದೆ. 15 ದಿನಗಳೊಳಗಾಗಿ ಸಾಲ ಕೊಡುತ್ತೇವೆ ಎಂದು ಹೇಳಿದ್ದರು, ಸಾಲಕ್ಕಾಗಿ ಮನವಿ ಮಾಡಿದ್ದ ಸಾರ್ವಜನಿಕರ ಮೊಬೈಲ್​ ನಂಬರ್​ ಅನ್ನೇ ಲೋನ್ ಅಕೌಂಟ್ ನಂಬರ್ ಎಂದು ಆರೋಪಿಗಳು ನೀಡಿದ್ದಾರೆ.

ಮತ್ತಷ್ಟು ಓದಿ: ಪಿಎಂ-ವಿದ್ಯಾಲಕ್ಷ್ಮಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ; ಅರ್ಹ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಶಿಕ್ಷಣ ಸಾಲ

2 ಸಾವಿರಕ್ಕೂ ಹೆಚ್ಚು ಮಂದಿಯಿಂದ ಕೋಟ್ಯಂತರ ಹಣವನ್ನು ವಸೂಲಿ ಮಾಡಿದ್ದಾರೆ. ಹಣ ವಾಪಸ್ ಕೇಳಿದರೆ ಪ್ರಭಾವಿಗಳ ಹೆಸರು ಹೇಳಿ ಧಮ್ಕಿ ಹಾಕಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ