ಬೆಂಗಳೂರಿನಲ್ಲಿ 279 ಅನಧಿಕೃತ ಲೇಔಟ್​​ಗಳು ಪತ್ತೆ: ಈ ಸ್ಥಳಗಳಲ್ಲಿ ಜಾಗ ಖರೀದಿಸದಂತೆ ಬಿಡಿಎ ಎಚ್ಚರಿಕೆ

ಬೆಂಗಳೂರಿನಲ್ಲಿ ಅನಧಿಕೃತ ಲೇಔಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಪ್ರದೇಶಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡದಂತೆ ಬಿಡಿಎ ಎಚ್ಚರಿಕೆ ನೀಡಿದೆ. ಅನಧಿಕೃತ ಲೇಔಟ್‌ಗಳಲ್ಲಿ ಯಾವುದೇ ಹೊಸ ಆಸ್ತಿಯನ್ನು ನೋಂದಾಯಿಸದಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಯಲಹಂಕ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ತಾಲ್ಲೂಕುಗಳಲ್ಲಿ ಈ ಅನಧಿಕೃತ ಲೇಔಟ್‌ಗಳಿವೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 279 ಅನಧಿಕೃತ ಲೇಔಟ್​​ಗಳು ಪತ್ತೆ: ಈ ಸ್ಥಳಗಳಲ್ಲಿ ಜಾಗ ಖರೀದಿಸದಂತೆ ಬಿಡಿಎ ಎಚ್ಚರಿಕೆ
ಬಿಡಿಎ
Follow us
|

Updated on: Apr 23, 2024 | 8:31 PM

ಬೆಂಗಳೂರು, ಏಪ್ರಿಲ್​ 23: ನಗರದಲ್ಲಿ ಹೆಚ್ಚುತ್ತಿರುವ ಅನಧಿಕೃತ ಲೇಔಟ್‌ಗಳ (unauthorized layouts) ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಳವಳ ವ್ಯಕ್ತಪಡಿಸಿದೆ. ಸದ್ಯ ನಗರದಲ್ಲಿ 27,000 ಪ್ಲಾಟ್‌ಗಳನ್ನು ಹೊಂದಿರುವ 279 ಅನಧಿಕೃತ ಲೇಔಟ್‌ಗಳನ್ನು ಬಿಡಿಎ ಗುರುತಿಸಿದ್ದು, ಕಾನೂನು ಮತ್ತು ಆರ್ಥಿಕ ತೊಂದರಿಯಿಂದ ಪಾರಾಗಲು ಈ ಪ್ರದೇಶಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡದಂತೆ ಬಿಡಿಎ  ಎಚ್ಚರಿಕೆ ನೀಡಿದೆ. ಅನಧಿಕೃತ ಲೇಔಟ್‌ಗಳನ್ನು ತಡೆಗಟ್ಟಲು ಬಿಡಿಎ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅನಧಿಕೃತ ಲೇಔಟ್‌ಗಳಲ್ಲಿ ಯಾವುದೇ ಹೊಸ ಆಸ್ತಿಯನ್ನು ನೋಂದಾಯಿಸದಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಅನಧಿಕೃತ ಲೇಔಟ್‌ಗಳ ಬಗ್ಗೆ ಬಿಡಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಲೇಔಟ್‌ಗಳು ಇರುವ ತಾಲ್ಲೂಕು, ಹೋಬಳಿಗಳು, ಗ್ರಾಮಗಳು ಮತ್ತು ಸರ್ವೆ ನಂಬರ್‌ಗಳ ವಿವರಗಳ ಸಮಗ್ರ ವರದಿಯನ್ನು ಸಹ ಪ್ರಕಟಿಸಿದೆ.

ಇದನ್ನೂ ಓದಿ: ಕೊನೆಗೂ ಶಿವರಾಮಕಾರಂತ ಫಲಾನುಭವಿಗಳಿಗೆ ಬಿಡಿಎನಿಂದ ಗುಡ್ ನ್ಯೂಸ್; ಗಣಪತಿ ಹಬ್ಬದ ಬಳಿಕ ನಿವೇಶನ ಹಂಚಿಕೆ

ಯಲಹಂಕ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ತಾಲ್ಲೂಕುಗಳಲ್ಲಿ ಈ ಅನಧಿಕೃತ ಲೇಔಟ್‌ಗಳಿವೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಬಿಡಿಎಯಿಂದ ಯಾವುದೇ ಅನುಮೋದನೆ ಪಡೆದಿಲ್ಲ. ಒಟ್ಟು 279 ಬಡಾವಣೆಗಳ ಪೈಕಿ ಬಿದರಹಳ್ಳಿ ಹೋಬಳಿ 52, ಯಲಹಂಕ ಹೋಬಳಿ 16, ಜಾಲ ಹೋಬಳಿ 29, ಕೆಂಗೇರಿ 41, ಉತ್ತರಹಳ್ಳಿ 4, ಜಿಗಣಿ 53, ಬೇಗೂರು 14, ಕೆಆರ್ ಪುರಂ 5, ಕೆಆರ್ ಪುರಂ 5, ಯಲಹಂಕ ಹೋಬಳಿ 279, ಸರ್ಜಾಪುರ ಮತ್ತು ವರ್ತೂರಿನಲ್ಲಿ 8 ಬಡಾವಣೆಗಳಿವೆ.

ಅನಧಿಕೃತ ಲೇಔಟ್‌ಗಳಿರುವ ಸ್ಥಳಗಳು ಹೀಗಿವೆ

  • ಆನೇಕಲ್ ತಾಲೂಕು: ಬಿಲ್ವಾರದಹಳ್ಳಿ, ಕಲಕೆರೆ, ಹುಲಹಳ್ಳಿ, ಹುಲಿಮಂಗಲ, ಬೇಗಿಹಳ್ಳಿ, ಸಿಂಗೇನ ಅಗ್ರಹಾರ, ಚಿಕ್ಕೆನೆಕ್ಕುಂದಿ, ಹಲಸಹಳ್ಳಿ ತಿಪ್ಪಸಂದ್ರ, ಹುನ್ನೂರು, ಹಳೇ ಸಂಪಿಗೆಹಳ್ಳಿ, ಹೆಗೊಂಡನಹಳ್ಳಿ, ಕತ್ರಿಗುಪ್ಪೆ ರಾಮಣ್ಣನಾಯಕನಹಳ್ಳಿ, ಶ್ರೀರಾಮಪುರದನಹಳ್ಳಿ, ಶ್ರೀರಾಮಪುರದನಹಳ್ಳಿ, ಗಟ್ಟಲಹಳ್ಳಿ, ಗಟ್ಟಲಹಳ್ಳಿ , ದೊಮ್ಮಸಂದ್ರ, ಸೂಲಿಕುಂಟೆ, ಆವಲಹಳ್ಳಿ , ಕೊಡತಿ, ಹುನ್ನೂರು, ರಾಯಸಂದ್ರ, ಕಗ್ಗಲೀಪುರ, ಕೊಮ್ಮಸಂದ್ರ, ಮತ್ತಿತರ ಗ್ರಾಮಗಳು.
  • ಬೆಂಗಳೂರು ಪೂರ್ವ: ಅಗ್ರಹಾರ, ಬಂಡೆಬೊಮ್ಮಸಂದ್ರ, ಯರಪ್ಪನಹಳ್ಳಿ, ಕಾಡ, ಅನಗಳಾಪುರ, ಕಾಡುಸೊನ್ನಪ್ಪನಹಳ್ಳಿ, ರಾಂಪುರ, ಬಿದರಹಳ್ಳಿ, ಮತ್ತು ಇತರೆ.
  • ಬೆಂಗಳೂರು ದಕ್ಷಿಣ: ಕೆಂಗೇರಿ ಹೋಬಳಿ, ತಗಚಗುಪ್ಪೆ, ಕೆ. ಗೊಲ್ಲಹಳ್ಳಿ, ದೇವಗೆರೆ, ಗುಡಿಮಾವು, ಕಂಬಿಪುರ, ಅಗರ.
  • ಯಲಹಂಕ: ಜಾಲ ಹೋಬಳಿಯ ಸಾತನೂರು, ಬೈಯಪ್ಪನಹಳ್ಳಿ, ಸಿಂಗನಾಯಕನಹಳ್ಳಿ, ಮುದ್ದನಹಳ್ಳಿ, ಬೆಟ್ಟಹಲಸೂರು, ಹುಣಸಮಾರನಹಳ್ಳಿ, ಕಟ್ಟಿಗೇನಹಳ್ಳಿ, ಮಾರೇನಹಳ್ಳಿ, ಗಂಟಿಗಾನಹಳ್ಳಿ, ಮತ್ತಿತರೆ ಗ್ರಾಮಗಳು.

ಇದನ್ನೂ ಓದಿ: ಬೆಂಗಳೂರಿಗೆ ಜಲ ಕಂಟಕ: ಆರ್​​ಆರ್​ ನಗರ ಬಿಡಿಎ ಅಪಾರ್ಟ್ ಮೆಂಟ್​ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು

ಬಿಡಿಎ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ‘ಈ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳು ಬಿಡಿಎ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ನಿರ್ಮಿಸಿಲಾದ ರಸ್ತೆಗಳು ನಿಗದಿತ ಅಗಲ ಹೊಂದಿಲ್ಲ. ಉದ್ಯಾನವನಗಳು ಅಥವಾ CA ಸೈಟ್‌ಗಳಿಗೆ ಯಾವುದೇ ಜಾಗವನ್ನು ನಿಗದಿಪಡಿಸಲಾಗಿಲ್ಲ. ಬೋರ್‌ವೆಲ್‌ ಕೊರೆಯಲಾಗಿದೆ. ವಿದ್ಯುತ್‌ ಒದಗಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಪ್ಲಾಟ್ ಖರೀದಿದಾರರು ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ನಮಗೆ ರಾಜಕೀಯ ಸಂಸ್ಕಾರವಿದೆ, ಸಂಡೂರಲ್ಲಿ ಪತ್ನಿ ಗೆಲ್ಲೋದು ಶತಸಿದ್ಧ: ಸಂಸದ
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ವಿಶಿಷ್ಟ ಶೈಲಿಯಲ್ಲಿ ಯೋಗೇಶ್ವರ್ ಪರ ಮತ ಯಾಚಿಸಿದ ಶಾಸಕ ಪ್ರದೀಪ್ ಈಶ್ವರ್
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಲಾರಿ ಹಾಗೂ ಬಸ್​ ಮಧ್ಯೆ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ವಕ್ಫ್ ಜಮೀನು ಅತಿಕ್ರಮಣಕಾರರಲ್ಲಿ ಶೇಕಡ 90 ಮುಸಲ್ಮಾನರು: ಜಮೀರ್ ಅಹ್ಮದ್
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಶ್ರದ್ಧಾಂಜಲಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ: ಪ್ರಲ್ಹಾದ್ ಜೋಶಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಮಾಧ್ಯಮದವರಿಗೆ ಎಲ್ಲ ವಿಷಯ ಗೊತ್ತಿರುತ್ತೆ ಎಂದು ನಗಲಾರಂಭಿಸಿದ ಕುಮಾರಸ್ವಾಮಿ
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಗಂಗರಾಳಿದ ಚನ್ನಪಟ್ಟಣ ಜನರಲ್ಲಿ ನಾಯಕತ್ವದ ಗುಣ ಇರೋದು ಸ್ವಾಭಾವಿಕ:ಯೋಗೇಶ್ವರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಕುಮಾರಸ್ವಾಮಿ ಚುನಾವಣೆ ಸಮಯುದಲ್ಲಿ ಮಾತ್ರ ಕಣ್ಣೀರು ಸುರಿಸೋದು: ಶಿವಕುಮಾರ್
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ
ಜನರ ಸಮಸ್ಯೆ ನೋಡಿ ನೋವಿನಿಂದ ಹಲವಾರು ಬಾರಿ ಅತ್ತಿದ್ದೇನೆ: ಕುಮಾರಸ್ವಾಮಿ