ಬೆಂಗಳೂರು, ಮೇ 21: ರಾಜಧಾನಿಯಲ್ಲಿ ಬಿಸಿಲಿನ ಪ್ರಮಾಣ ಕೊಂಚ ಕಡಿಮೆಯಾಗಿ ಕಳೆದ ಒಂದು ವಾರದಿಂದ ಮಳೆ (Rain) ಆಗುತ್ತಿದೆ. ಆದರೆ ತರಕಾರಿಗಳ ಬೆಲೆ (Vegetables Price) ಏರಿಕೆಯಾಗಿದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ತರಕಾರಿ ಬೆಲೆ ಬಹಳ ದುಬಾರಿಯಾಗಿದೆ.
ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿ ಇದ್ದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬಂದಿಲ್ಲ. ಈ ಮಧ್ಯೆ ಕಳೆದ ಒಂದು ವಾರದಿಂದ ಮಳೆಯು ಬರುತ್ತಿದ್ದು, ಬಂದಂತಹ ಬೆಳೆಯು ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇನ್ನು ಹೊಸ ಬೆಳೆ ಬರುವವರೆಗೂ ಬೆಲೆ ಇದೇ ರೀತಿ ಹೆಚ್ಚಾಗುವ ಸಾಧ್ಯಾತೆ ಇದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ತರಕಾರಿ ಬೆಲೆ | ||
ತರಕಾರಿ | ಹಿಂದಿನಬೆಲೆ (ಕೆಜಿ ರೂ.) | ಇಂದಿನಬೆಲೆ (ಕೆಜಿ ರೂ.) |
ಗಜ್ಜರಿ | 80 | 82 |
ಬೀನ್ಸ್ | 220 | 235 |
ನವಿಲುಕೋಸು | 60 | 78 |
ಬದನೆಕಾಯಿ | 60 | 70 |
ದಪ್ಪ ಮೆಣಸಿನಕಾಯಿ | 40 | 72 |
ಬಟಾಣಿ | 140 | 190 |
ಬೆಂಡೆಕಾಯಿ | 60 | 66 |
ಟೊಮಾಟೋ | 30 | 44 |
ಆಲೂಗೆಡ್ಡೆ | 30 | 49 |
ಹಾಗಲಕಾಯಿ | 60 | 82 |
ಸೋರೆಕಾಯಿ | 40 | 56 |
ಬೆಳ್ಳುಳ್ಳಿ | 300 | 318 |
ಶುಂಠಿ | 180 | 195 |
ಪಡವಲಕಾಯಿ | 30 | 47 |
ಗೋರಿಕಾಯಿ | 50 | 64 |
ಹಸಿರು ಮೆಣಸಿಕಾಯಿ | 80 | 110 |
ಬಿಟ್ರೋಟ್ | 40 | 46 |
ಈರುಳ್ಳಿ | 20 | 42 |
ಇನ್ನು ತರಕಾರಿ ಬೆಲೆ ತುಂಬ ಜಾಸ್ತಿಯಾಗಿದೆ. ತರಕಾರಿ ಯಾವುದು ಸರಿಯಾಗಿ ಬರುತ್ತಿಲ್ಲ. ಹೊಸ ಬೆಳೆ ಬರುವವರೆಗೂ ಬೆಲೆ ಹೀಗೆ ಮುಂದುವರೆಯಲಿದೆ. ಆದರೆ ತರಕಾರಿಗಳ ಬೆಲೆ ಕೇಳಿ ಗ್ರಾಹಕರು ತರಕಾರಿಗಳನ್ನು ಖರೀದಿ ಮಾಡಲು ಹಿಂದುಮುಂದು ನೋಡುತ್ತಿದ್ದಾರೆ. ಒಂದು ಕೆಜಿ ಖರೀದಿಸುವವರು ಅರ್ಧ ಕೆಜಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರ ತುಂಬ ಕಡಿಮೆ ಆಗುತ್ತಿದೆ ಎಂದು ವ್ಯಾಪರಸ್ಥ ಇನಾಯತ್ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವಾರವೂ ತರಕಾರಿ, ಹಣ್ಣುಗಳ ಬೆಲೆ ಏರಿಕೆ, ಯಾವುದಕ್ಕೆ ಎಷ್ಟಿದೆ ದರ? ಇಲ್ಲಿದೆ ವಿವರ
ತರಕಾರಿಗಳ ಬೆಲೆ ತುಂಬ ಜಾಸ್ತಿಯಾಗಿದೆ. ತರಕಾರಿಗಳ ಬೆಲೆ ಕೇಳಿಯೇ ಅರ್ಧ ಸುಸ್ತಾಗುತ್ತಿದೆ. ಸದ್ಯ ಎಲ್ಲಾ ತರಕಾರಿಗಳ ಬೆಲೆ 80ರ ಗಡಿದಾಟಿದೆ. ಬೀನ್ಸ್ ಬೆಲೆ ಅಂತು 200 ರ ಗಡಿದಾಟಿದೆ. ಈ ಮಧ್ಯೆ ಸೌತೆಕಾಯಿ ಹಾಗೂ ಬಿಂಬೆಹಣ್ಣಿನ ಬೆಲೆಯು ತುಂಬ ಜಾಸ್ತಿಯಾಗಿ ಹೋಗಿದೆ. ಹೀಗಾದರೆ ತರಕಾರಿಗಳನ್ನ ಖರೀದಿ ಮಾಡುವುದಾದರು ಹೇಗೆ ಹೇಳಿ. ಮನೆಗಳಲ್ಲಿ ಸಮಾರಂಭಗಳನ್ನು ಮಾಡುವುದಾದರು ಹೇಗೆ. ತರಕಾರಿಯಿಂದ ಹಿಡಿದು ದಿನಸಿವರೆಗೂ ಎಲ್ಲಾ ಬೆಲೆಯು ತುಂಬ ಜಾಸ್ತಿಯಾಗಿ ಹೋಗಿದೆ. ಹೀಗೆ ಮುಂದುವರೆದರೆ ಬಡಜನರ ಪರಿಸ್ಥಿತಿ ತುಂಬ ಕಷ್ಟವಾಗಲಿದೆ ಎಂದು ಗ್ರಾಹಕ ಶೋಭರಾಣಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ