ಬೆಂಗಳೂರಿನಲ್ಲಿ ಈ ವಾರವೂ ತರಕಾರಿ, ಹಣ್ಣುಗಳ ಬೆಲೆ ಏರಿಕೆ, ಯಾವುದಕ್ಕೆ ಎಷ್ಟಿದೆ ದರ? ಇಲ್ಲಿದೆ ವಿವರ
Bangalore vegetable prices; ಬೆಂಗಳೂರಿನಲ್ಲಿ ತರಕಾರಿ ದರ ಮತ್ತೆ ದುಬಾರಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದೀಗ ಮತ್ತಷ್ಟು ತುಟ್ಟಿಯಾಗಿದೆ. ಬೀನ್ಸ್ ಹಾಗೂ ಬಟಾಣಿ ಬೆಲೆಯಂತೂ ದಾಖಲೆ ಬರೆಯುತ್ತಿವೆ. ಜತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಯಾವ ತರಕಾರಿಗೆ ಎಷ್ಟಿದೆ ಬೆಲೆ? ಯಾವ ಹಣ್ಣಿಗೆ ಎಷ್ಟಿದೆ ದರ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ (Bengaluru Rains) ನಿಜ. ಆದರೆ, ಅದಕ್ಕೂ ಮುನ್ನ ಬಿಸಿಲಿನ ಪ್ರಮಾಣ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಇದರ ಪರಿಣಾಮ ಈ ವಾರ ಕೂಡ ತರಕಾರಿಗಳ ಬೆಲೆ (Vegetable Price) ಏರಿಕೆಯಾಗಿದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹೆಚ್ಚು ದುಬಾರಿಯಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ತರಕಾರಿ ದರ ಕೆಜಿಗೆ ಸುಮಾರು 20 ರೂಪಾಯಿಯಷ್ಟು ಏರಿಕೆಯಾಗಿದೆ.
ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ವ್ಯಾಪಾರಿಗಳು ಹೆಚ್ಚಿನ ಬೆಲೆ ನಿಗದಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಯಾವ ತರಕಾರಿಗೆ ಎಷ್ಟಿದೆ ದರ?
ತರಕಾರಿ – ಬೆಲೆ (ಕೆಜಿಗೆ ರೂ.ಗಳಲ್ಲಿ)
- ಕ್ಯಾರೇಟ್ – 95
- ಬೀನ್ಸ್ – 220
- ನವಿಲುಕೋಸು – 80
- ಬದನೆಕಾಯಿ – 70
- ದಪ್ಪ ಮೆಣಸಿನಕಾಯಿ – 80
- ಬಟಾಣಿ – 200
- ಬೆಂಡೆಕಾಯಿ – 80
- ಟೊಮೆಟೋ – 35
- ಆಲೂಗೆಡ್ಡೆ- 49
- ಹಾಗಲಕಾಯಿ – 80
- ಸೋರೆಕಾಯಿ – 52
- ಬೆಳ್ಳುಳ್ಳಿ – 320
- ಶುಂಠಿ – 195
- ಪಡವಲಕಾಯಿ – 47
- ಗೋರಿಕಾಯಿ – 64
- ಹಸಿರುಮೆಣಸಿಕಾಯಿ – 110
- ಬಿಟ್ರೋಟ್ – 46
- ಈರುಳ್ಳಿ – 40 ಕೆಜಿಗೆ
ಇದು ಸೋಮವಾರ ಮಾರಾಟವಾದ ತರಕಾರಿಗಳ ಬೆಲೆ. ಕಳೆದ ವಾರ ಸೌತೆಕಾಯಿ ಹಾಗೂ ನಿಂಬೆಹಣ್ಣು ಬೆಲೆ ಏರಿಕೆಯಾಗಿತ್ತು. ಬೇರೆ ತರಕಾರಿಗಳ ಬೆಲೆ 60 ರೂ. ಒಳಗೆಯೇ ಇತ್ತು. ಆದರೆ ಈ ವಾರ ಬೀನ್ಸ್, ಕ್ಯಾರೇಟ್, ಬದನೆಕಾಯಿ, ಹಸಿರುಮೆಣಸಿನಕಾಯಿ, ಟೋಮಾಟೋ, ಬಟಾಣಿ, ಬೆಳ್ಳುಳ್ಳಿ ಸತತವಾಗಿ ಏರಿಕೆಯಾಗುತ್ತಿದೆ. ಸದ್ಯ ಒಂದು ವಾರದಿಂದ ಮಳೆಯಾಗುತ್ತಿದೆ. ಮಳೆ ಬಂದರೆ ಟೋಮೆಟೋ ಹಾಗೂ ಈರುಳ್ಳಿ ಬೆಲೆ ಏರಿಕೆಯಾಗುತ್ತದೆ. ಮಳೆ ಬಂದಿಲ್ಲ ಅಂದರೆ ತರಕಾರಿಗಳ ಬೆಲೆ ಏರಿಕೆಯಾಗುತ್ತೆ. ಮುಂದಿನವಾರ ತರಕಾರಿಗಳ ಬೆಲೆ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಬೀನ್ಸ್ ಬೆಲೆ ಅಂತೂ 200 ರೂ. ಗಡಿದಾಟಿದೆ. ಈ ಮಧ್ಯೆ ಸೌತೆಕಾಯಿ ಹಾಗೂ ಬಿಂಬೆಹಣ್ಣಿನ ಬೆಲೆ ಕೂಡ ತುಂಬಾ ಜಾಸ್ತಿಯಾಗಿದೆ.
ಹಣ್ಣುಗಳೂ ದುಬಾರಿ
ತರಕಾರಿಗಳ ಬೆಲೆ ಅಷ್ಟೇ ಅಲ್ಲದೆ ಹಣ್ಣುಗಳ ಬೆಲೆ ಕೂಡ ಈ ವಾರ ಏರಿಕೆಯಾಗಿದೆ. ಜನರಿಂದ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಬರುತ್ತಿರುವ ಬೆನ್ನಲ್ಲೇ, ದರ ದುಬಾರಿಯಾಗಿದೆ.
ಹಣ್ಣುಗಳ ದರ ಕೆಜಿಗೆ ರೂ.ಗಳಲ್ಲಿ
- ಸಪೋಟ- 60 – 70
- ಸೇಬು – 100 – 200
- ಮಾವಿನ ಹಣ್ಣು – 100 – 150
- ಕಿತ್ತಳೆ ಹಣ್ಣು – 100 – 180
- ದ್ರಾಕ್ಷಿ – 60 – 80
- ಮರಸೇಬು – 190 – 200
- ದಾಳಿಂಬೆ – 100 – 150
- ಕಲ್ಲಂಗಡಿ – 40 – 50
- ಬಾಳೆಹಣ್ಣು – 30 – 40
- ಅನಾನಸ್ – 80 – 80
- ಆಸ್ಟ್ರೇಲಿಯಾ ಗ್ರೇಪ್ಸ್ – 200 – 150
ಇದನ್ನೂ ಓದಿ: ಮಂಗಳೂರು, ಉಡುಪಿಯಲ್ಲಿ 60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 am, Tue, 14 May 24