ಮಂಗಳೂರು, ಉಡುಪಿಯಲ್ಲಿ 60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು

ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆಯಾಗಿರುವುದು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮಂಗಳೂರು, ಉಡುಪಿಯಲ್ಲಿ ಎಳನೀರಿನ ದರ 25 ರಿಂದ 30 ರೂ.ಗಳ ಆಸುಪಾಸಿನಲ್ಲಿರುತ್ತದೆ. ಪ್ರಸ್ತುತ, ಕುಂದಾಪುರ ಮತ್ತು ಉಡುಪಿಯಲ್ಲಿ ಎಳನೀರಿಗೆ 60 ರೂ. ಇದ್ದರೆ, ಮಂಗಳೂರಿನಲ್ಲಿ 50 ರಿಂದ 55 ರೂ.ಗೆ ಮಾರಾಟವಾಗುತ್ತಿದೆ.

ಮಂಗಳೂರು, ಉಡುಪಿಯಲ್ಲಿ 60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು
ಎಳನೀರು ದರ ಏರಿಕೆ
Follow us
Ganapathi Sharma
|

Updated on: May 13, 2024 | 11:50 AM

ಮಂಗಳೂರು, ಮೇ 13: ಮಂಗಳೂರು (Mangaluru) ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮತ್ತು ಉಡುಪಿಯಲ್ಲಿ (Udupi) ಬಿಸಿಲಿನ ಬೇಗೆ, ತಾಪಮಾನ ಹೆಚ್ಚಳದ ಪರಿಣಾಮ ಎಳನೀರಿನ ಬೆಲೆ (Tender coconut prices) ಗಗನಕ್ಕೇರಿದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಎಳನೀರಿನ ದರ ಸುಮಾರು 60 ರೂ.ಗೆ ಏರಿಕೆಯಾಗಿದೆ. ಈ ಮಧ್ಯೆ, ಪೂರೈಕೆ ಕೊರತೆಯೂ ಉಂಟಾಗಿದೆ. ಸಾಕಷ್ಟು ಪೂರೈಕೆ ಇಲ್ಲದ ಮತ್ತು ಮಾರಾಟ ಹೆಚ್ಚಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆಲ್ಲ ಮಾರುಕಟ್ಟೆಗೆ ಬಂದಿದ್ದ ಎಳನೀರು ಖಾಲಿಯಾಗಿದ್ದು ದಿನದ ವ್ಯಾಪಾರವೇ ಮುಗಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.

ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆ ಇದೇ ಮೊದಲು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮಂಗಳೂರು, ಉಡುಪಿಯಲ್ಲಿ ಎಳನೀರಿನ ದರ 25 ರಿಂದ 30 ರೂ.ಗಳ ಆಸುಪಾಸಿನಲ್ಲಿರುತ್ತದೆ. ಪ್ರಸ್ತುತ, ಕುಂದಾಪುರ ಮತ್ತು ಉಡುಪಿಯಲ್ಲಿ ಎಳನೀರಿಗೆ 60 ರೂ. ಇದ್ದರೆ, ಮಂಗಳೂರಿನಲ್ಲಿ 50 ರಿಂದ 55 ರೂ.ಗೆ ಮಾರಾಟವಾಗುತ್ತಿದೆ.

ಎಳನೀರು ದುಬಾರಿಯಾಗಿರುವುದು ಮತ್ತು ಪೂರೈಕೆ ಕೊರತೆಯ ಪರಿಣಾಮವಾಗಿ ಅನೇಕ ಗ್ರಾಹಕರು ಪರ್ಯಾಯವಾಗಿ ಕಬ್ಬಿನ ಜ್ಯೂಸ್ ಆರಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಳನೀರಿನ ದರ 60 ರೂ. ದಾಟಿತ್ತು. ಜತೆಗೆ ಇತರ ತಾಜಾ ಹಣ್ಣಿನ ಜ್ಯೂಸ್​ಗಳ ದರವೂ ಏರಿಕೆಯಾಗಿತ್ತು.

ಮೂತ್ರದ ಸೋಂಕು, ಕಿಡ್ನಿ ಕಲ್ಲು ಹೆಚ್ಚಳ

ಹೆಚ್ಚುತ್ತಿರುವ ತಾಪಮಾನವು ಜನರಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುತ್ತಿದ್ದು, 20 ರಿಂದ 40 ವರ್ಷ ವಯಸ್ಸಿನವರಲ್ಲಿ ಮೂತ್ರದ ಸೋಂಕುಗಳು ಮತ್ತು ಕಿಡ್ನಿ ಸ್ಟೋನ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಮಂಗಳೂರಿನ ವೈದ್ಯರು ತಿಳಿಸಿದ್ದಾರೆ. ಬೇಸಿಗೆ ಆರಂಭವಾದ ನಂತರ ಇಂತಹ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಅಷ್ಟೊಂದು ಜನರು ಹೋಗಲು ಏನು ಕಾರಣ?: ಇಲ್ಲಿನ ಹೊಯ್ಲು ಪದ್ದತಿ ಬಗ್ಗೆ ನಿಮಗೆ ಗೊತ್ತೇ?

ನಿರ್ಜಲೀಕರಣವು ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ಹೇಳಿವೆ. ದೇಹಕ್ಕೆ ದಿನಕ್ಕೆ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ಬೇಕಾಗುತ್ತದೆ. ಆದರೆ ಬೇಸಿಗೆಯ ತಿಂಗಳುಗಳಲ್ಲಿ ಜಿಲ್ಲೆಯ ಜನ ನಿರಂತರ ಬೆವರುವುದರಿಂದ ದೇಹದ ನೀರಿನ ಮಟ್ಟವನ್ನು ಕಡಿಮೆಯಾಗುತ್ತದೆ. ಇದು ಮೂತ್ರದ ಸೋಂಕು ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ