ಕಾಂಗ್ರೆಸ್​ ಗೆಲುವಿಗೆ ಜೆಡಿಎಸ್-ಬಿಜೆಪಿ ಬೆಂಬಲಿಸಿವೆ: ಡಿಕೆ ಶಿವಕುಮಾರ್ ಶಾಕಿಂಗ್​ ಹೇಳಿಕೆ

ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್​​ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸತತ ಮೂರನೇ ಚುನಾವಣೆಯಲ್ಲೂ ಮುಖಭಂಗ ಅನುಭವಿಸಿದ್ದಾರೆ. ಇನ್ನು ಈ ರಿಸಲ್ಟ್​ ಬಗ್ಗೆ ನಾನಾ ರೀತಿಯ ಚರ್ಚೆಗಳು ಶುರುವಾಗಿದೆ. ಇದರ ಮಧ್ಯ ಡಿಕೆ ಶಿವಕುಮಾರ್​​, ಯೋಗೇಶ್ವರ್​ ಗೆಲುವಿನ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ,

ಕಾಂಗ್ರೆಸ್​ ಗೆಲುವಿಗೆ ಜೆಡಿಎಸ್-ಬಿಜೆಪಿ ಬೆಂಬಲಿಸಿವೆ: ಡಿಕೆ ಶಿವಕುಮಾರ್ ಶಾಕಿಂಗ್​ ಹೇಳಿಕೆ
ಡಿಕೆ ಶಿವಕುಮಾರ್- ಯೋಗೇಶ್ವರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 24, 2024 | 3:24 PM

ರಾಮನಗರ, (ನವೆಂಬರ್ 24): ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್​​ ಗೆಲುವು ಸಾಧಿಸಿದ್ದರಿಂದ ಕುಮಾರಸ್ವಾಮಿ, ದೇವೇಗೌಡ ಶಾಕ್ ಆಗಿದ್ದು. ರಿಸಲ್ಟ್​ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ನಿಖಿಲ್​ ಕುಮಾರಸ್ವಾಮಿಗೆ ಬಿಜೆಪಿ ಸಪೋರ್ಟ್​ ಮಾಡಿಲ್ಲ. ಕೆಲವರು ಕಾಂಗ್ರೆಸ್​ಗೆ ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದು ಈಗ ಇದು ನಿಜವೆನಿಸಿದೆ. ಯಾಕಂದ್ರೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಕಾಂಗ್ರೆಸ್​ ಗೆಲುವಿಗೆ ಜೆಡಿಎಸ್-ಬಿಜೆಪಿ ಬೆಂಬಲಿಸಿವೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಗೆಲುವಿಗೆ ಜೆಡಿಎಸ್​, ಬಿಜೆಪಿಯವರು ಬೆಂಬಲಿಸಿದ್ದಾರೆ. ಬಿಜೆಪಿ ಶಾಸಕ ಡಾ.ಸಿ.ಎನ್​.ಅಶ್ವತ್ಥ್ ನಾರಾಯಣ್ ಏನು ಹೇಳಿದ್ರು? ಸಿ.ಪಿ.ಯೋಗೇಶ್ವರ್​ ಗೆಲ್ತಾರೆಂದು ಗೊತ್ತಿತ್ತು ಎಂದು ಅಶ್ವತ್ಥ್​ ಹೇಳಿಲ್ವಾ ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ!

ಕಾಂಗ್ರೆಸ್​ಗೆ ಇದ್ದಿದ್ದು ಕೇವಲ 16 ಸಾವಿರ ವೋಟ್‌, ಈಗ ಜಾಸ್ತಿ ಆಗಿದೆ. ಬಿಜೆಪಿಯವರು ನಮ್ಮ ಜೊತೆ ಬಂದು ನಿಂತುಕೊಳ್ಳದೇ ಹೋಗಿದ್ರೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದಿದ್ರೆ ಇಷ್ಟು ಮತ ಬರುತ್ತಿರಲಿಲ್ಲ. ಹೀಗಾಗಿ ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು. ಈ ಮೂಲಕ ಜೆಡಿಎಸ್​ ಮತ್ತು ಬಿಜೆಪಿ ನಾಯಕರು ಸಹ ಕಾಂಗ್ರೆಸ್​ಗೆ ಬೆಂಬಲಿಸಿದ್ದನ್ನು ಬಹಿರಂಗಪಡಿಸಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಸಹೋದರರಿಗೆ ಸಲ್ಲಬೇಕಾಗಿಲ್ಲ. ನಮ್ಮ ಪಕ್ಷದ ನಾಯಕರು ಹಾಗೂ ಕ್ಷೇತ್ರದ ಮತದಾರರಿಗೆ ಸಲ್ಲಬೇಕು. ನಮಗೆ ಎಲ್ಲಾ ಪಕ್ಷದವರೂ ಸಹಾಯ ಮಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಖಾಲಿ ಆದಾಗಿನಿಂದ ಸಾಕಷ್ಟು ಪ್ರವಾಸ ಮಾಡಿದ್ದೇವೆ. ಜನರಿಗೆ ಕೊಟ್ಟಿರುವ ಭರವಸೆಗಳನ್ನು ಮೊದಲು ಜಾರಿ ಮಾಡಬೇಕಿದೆ. ಯೋಗೇಶ್ವರ್ ಜತೆ ಚರ್ಚೆ ಮಾಡಿ ಯೋಜನೆಗಳಿಗೆ ಚಾಲನೆ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಹಾಲು ಜೇನಿನಂತೆ ಇದ್ದೇವೆ ಎಂದ ಅಶೋಕ್

ಡಿಕೆ ಶಿವಕುಮಾರ್ ಅವರ ಈ ಶಾಕಿಂಗ್ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು  ಡಿಕೆಶಿ ಹೇಳಿಕೆ ವಿಪಕ್ಷ ನಾಯಕ ಅಶೋಕ್ ಪ್ರತಿಕ್ರಿಯಿಸಿ,  ಡಿ.ಕೆ.ಶಿವಕುಮಾರ್ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ತಂದಿಕ್ಕುವ ಕೆಲಸವನ್ನ ಮಾಡಬಾರದು. ಕ್ಯಾಂಡಿಯೇಟ್ ಗತಿ ಇಲ್ಲದೆ ಬಿಜೆಪಿಯಿಂದ ಕರೆದುಕೊಂಡು ಹೋದ್ರಿ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯಾಗಲು ಯಾರು ಇರಲಿಲ್ವ‌. ನಮ್ಮ ಪಾರ್ಟಿಯಿಂದ ತಕೊಂಡು ಅಭ್ಯರ್ಥಿ ಮಾಡಿದ್ದೀರಾ. ಇವತ್ತು ನಮಗೆ ಸವಾಲ್ ಹಾಕ್ತೀರಲ್ಲ. ಡಿ.ಕೆ.ಶಿವಕುಮಾರ್ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಡಿಕೆಶಿ, ಸಿದ್ದರಾಮಯ್ಯ ಜಗಳವನ್ನ ಮೊದಲು ತೀರ್ಮಾನ ಮಾಡಿಕೊಳ್ಳಲಿ. ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಇದ್ದೇವೆ. ಮುಂದೆ ಬರುವ ಚುನಾವಣೆಯನ್ನ ಒಟ್ಟಿಗೆ ಕೆಲಸ ಮಾಡ್ತೇವೆ. ಬೈ ಎಲೆಕ್ಷನ್ ನಲ್ಲಿ ಹಿನ್ನಡೆಯಾಗಿದೆ, ಆದ್ರೆ ಅದು ಆಧಾರವಾಗಲ್ಲ. ಸೋತಿದ್ದೇವೆಂದು ನಾವೂ ಮಲಗಲ್ಲ.ಭ್ರಷ್ಟಾಚಾರ ಹಗರಣಗಳೇನಿದೆ ಅದನ್ನ ವಿಧಾನಸಭೆಯಲ್ಲಿ ಚರ್ಚೆ ಮಾಡ್ತೇವೆ. ಸೋಲನ್ನ‌ ಗೆಲುವಾಗಿ ಪರಿವರ್ತನೆ ಮಾಡ್ತೇವೆ ಎಂದರು.

ಅಭ್ಯರ್ಥಿ ಗತಿಯಿಲ್ಲದೇ ಬಿಜೆಪಿಯಿಂದ ಕರೆದುಕೊಂಡು ಕೈ ಅಭ್ಯರ್ಥಿ ಮಾಡಿದ್ದಾರೆ. ಗೆದ್ದಿದ್ದೇವೆ ಎಂದು ಕಾಂಗ್ರೆಸ್​ನವರು ಬೀಗುತ್ತಿದ್ದಾರೆ. ಈ ಗೆಲುವು ಟೆಂಪ್ರವರಿ ಅಷ್ಟೇ. ನಾವು 18 ಬೈ‌ ಎಲೆಕ್ಷನ್ ಕ್ಷೇತ್ರದಲ್ಲಿ ಗೆದ್ದವರು. ಬಳಿಕ ನಡೆದ ಜನರಲ್ ಎಲೆಕ್ಷನ್ ನಲ್ಲಿ ನಾವು ಸೋತಿದ್ದೇವೆ ಇವರು 3 ಗೆದ್ದೇ ಹೀಗೆ ಮೆರೆಯುತ್ತಿದ್ದಾರೆ. 18 ಬೈ ಎಲೆಕ್ಷನ್ ಗೆದ್ದ ನಾವು ಹೇಗೆ ಮೆರೆಯಬೇಕು. ಲೋಕಸಭಾ ಎಲೆಕ್ಷನ್ ನಲ್ಲಿ ಯಾಕೆ ಮಣ್ಣು ಮುಕ್ಕುದ್ರಿ. ಡಿಕೆಶಿ, ಸಿದ್ದರಾಮಯ್ಯ ಚುನಾವಣೆ ಅಲ್ಲ. ಇದು ಕಂಟ್ರಾಕ್ಟ್ರ್ ಗಳ, ಹಣದ ಚುನಾವಣಾ ಗೆಲುವು. ನಿಮ್ಮ ಪರಿಶ್ರಮದಿಂದ ಗೆದ್ದಿಲ್ಲ. ಜೆಡಿಎಸ್-ಬಿಜೆಪಿ ಪೂರ್ತಿ ಮನಸ್ಸಿಂದ ಎಲೆಕ್ಷನ್ ಮಾಡಿದ್ದೇವೆ. ಆದ್ರೆ ನಿಖಿಲ್ ಗೆ ಅದೃಷ್ಟ ಇರಲಿಲ್ಲ. ನಿಖಿಲ್ ಮುಂದೆ ಒಳ್ಳೆಯ ಭವಿಷ್ಯವಿದೆ. ಬೆಳಿಗ್ಗೆ ಹೆಚ್ಡಿಕೆ, ನಿಖಿಲ್ ಗೆ ಕರೆ ಮಾಡಿ ಧೈರ್ಯ ಹೇಳಿದ್ದೀನಿ. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡ್ತೇವೆ. ಡಿ.ಕೆ.ಸುರೇಶ್ ಸೋಲೋದಕ್ಕೆ ಸಿದ್ದರಾಮಯ್ಯ‌ ಕಾರಣ ಅಲ್ವಾ. ಅದನ್ನ ಒಪ್ಪಿಕೊಳ್ಳುತ್ತಾರಾ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್