ಹೊಸಕೋಟೆ: ಕೂಲಿ ಅರಸಿ ಬಂದಿದ್ದ 7 ಜನ ಕಾರ್ಮಿಕರ ದುರ್ಮರಣ

ಅವರೆಲ್ಲ ಬದುಕಿನ ಬಂಡಿ ಸಾಗಿಸುವುದಕ್ಕಾಗಿ ದೂರದ ಬಿಹಾರದಿಂದ ಸಿಲಿಕಾನ್ ಸಿಟಿಗೆ ಬಂದಿದ್ದು, ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುವ ಪ್ಲಾನ್ ಮಾಡಿದ್ರು. ಜತೆಗೆ ಬೆಳಗಿನಿಂದ ಸಂಜೆವರೆಗೂ ಕಷ್ಟಪಟ್ಟು ದುಡಿದು ಬಂದವರೆ ಆಗತಾನೆ ರಾತ್ರಿಯ ನಿದ್ದೆಗೆ ಜಾರಿದ್ದರು. ಆದರೆ ಗ್ಯಾಸ್​ ಲೀಕೇಜ್​ನಿಂದ ಇದೀಗ 7ಜನ ಚಿರನಿದ್ರೆಗೆ ಜಾರಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 7 ಜನರ ಜೀವ ಹಾರಿ ಹೋಗಿದೆ.

ಹೊಸಕೋಟೆ: ಕೂಲಿ ಅರಸಿ ಬಂದಿದ್ದ 7 ಜನ ಕಾರ್ಮಿಕರ ದುರ್ಮರಣ
ಎಸ್ಪಿ ಮಲ್ಲಿಕಾರ್ಜುನ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 01, 2023 | 7:12 AM

ಬೆಂಗಳೂರು ಗ್ರಾಮಾಂತರ: ಕಿರಿದಾದ ಜಾಗ ಮಲಗುವುದಕ್ಕೂ ವಾಸಿಸುವುದಕ್ಕೂ ಯಾವುದೇ ಮೂಲೆಯಿಂದ ನೋಡಿದ್ರು ಯೋಗ್ಯವಿಲ್ಲ. ಆದರೆ ಇದೇ ಜಾಗದಲ್ಲಿ ಕಳೆದ ಮೂರು ತಿಂಗಳಿಂದ 8 ಜನ ಕೂಲಿ ಕಾರ್ಮಿಕರು ಇಲ್ಲಿ ವಾಸ ಮಡುತ್ತಿದ್ದರು. ಇದೇ ವಾಸದ ಜಾಗವೇ ಇದೀಗ 8 ಜನರಲ್ಲಿ ಏಳು ಜನರ ಜೀವಕ್ಕೆ ಕೊಳ್ಳೀಯಿಟ್ಟಿದ್ದು, ಮಲಗಿದ್ದಲ್ಲೆ ನರಳಾಡಿ ಬಡ ಕೂಲಿ ಕಾರ್ಮಿಕರು ಜೀವವನ್ನೆ ಬಿಟ್ಟಿದ್ದಾರೆ. ಹೌದು ಅಂದಹಾಗೆ ಇಂತಹ ಘನಘೋರ ದೃಶ್ಯಗಳಿಗೆಲ್ಲ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಮೇಡಹಳ್ಳಿ ಗ್ರಾಮ. ಹೌದು ಅಂದಹಾಗೆ ಹೊಸಕೋಟೆಯ ತಿರಮಲಶೇಟ್ಟಿಹಳ್ಳಿ ಹಾಗೂ ಅನುಗೊಂಡನಹಳ್ಳೀ ಸುತ್ತಾಮುತ್ತ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಜನ ಕೂಲಿ ಕಾರ್ಮಿಕರು ಬರುತ್ತಿದ್ದು, ಇಲ್ಲಿಯೇ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಅದೇ ರೀತಿ ಕಳೆದ ಮೂರು ತಿಂಗಳ ಹಿಂದೆ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದಿದ್ದ 8 ಜನ ಕಾರ್ಮಿಕರಿಗೆ ಗುತ್ತಿಗೆದಾರರು ಈ ಶೇಡ್​ನಲ್ಲಿ ವಾಸಕ್ಕೆ ಬಿಟ್ಟಿದ್ದು ಅಡುಗೆ ಮಾಡಿಕೊಳ್ಳುವುದಕ್ಕೆಂದು ಒಂದು ಗ್ಯಾಸ್ ಸ್ಟೌವ್ ಸಹ ಕೊಟ್ಟಿದ್ದಾರೆ. ಹೀಗಾಗಿ ಕಳೆದ ಭಾನುವಾರ ರಾತ್ರಿ ಶೇಡ್​ನಲ್ಲಿ ಅಡುಗೆ ಮಾಡಿಕೊಂಡ ಕಾರ್ಮಿಕರು ನಂತರ ವಿಶ್ರಾಂತಿಗೆ ಮರಳಿದ್ದು ಗಾಡ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಗ್ಯಾಸ್ ಲೀಕ್ ಆಗಿದ್ದು ಶೌಚಾಲಯಕ್ಕೆ ಹೋಗಬೇಕು ಎಂದು ಮೇಲೆದ್ದ ಕಾರ್ಮಿಕ ಲೈಟ್ ಆನ್ ಮಾಡಿದ್ದಾನೆ. ಆದ್ರೆ ಅಷ್ಟರಲ್ಲೆ ಶೇಡ್ ತುಂಬಾ ಗ್ಯಾಸ್ ತುಂಬಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದ್ದು 8 ಜನ ಕಾರ್ಮಿಕರು ಸುಟ್ಟ ಗಾಯಗಳೊಂದಿಗೆ ವಿಕ್ಟೋರಿಯಾ ಆಸ್ಬತ್ರೆ ಪಾಲಾಗಿದ್ದರು.

ಇದನ್ನೂ ಓದಿ:ಹೆರಿಗೆಯಾದ ಹತ್ತು ದಿನದ ನಂತರ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರ ಆರೋಪ

ಸುಟ್ಟ ಗಾಯಗಳೊಂದಿಗೆ ನರಳಾಡಿದ ಕಾರ್ಮಿಕರನ್ನ ಸ್ಥಳಿಯರು ಅಂದು ರಾತ್ರಿಯೆ ರಕ್ಷಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದರು. ಆದರೆ ಶೇ60 ರಷ್ಟು ಸುಟ್ಟ ಗಾಯಗಳೊಂದಿಗೆ ನರಳಾಡಿದ ಕಾರ್ಮಿಕರು ಸತತ ಐದು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಒಬ್ಬರಿಂದೆ ಒಬ್ಬರಂತೆ 7 ಜನರು ಸಾವನ್ನಪಿದ್ದಾರೆ. ಇನ್ನು ಕಳೆದ ವರ್ಷ ಮಳೆಗಾಲದಲ್ಲಿ ಕಂಪೌಂಡ್​ ಕುಸಿದು ನಾಲ್ವರು ಉತ್ತರ ಭಾರತ ಮೂಲದ ಕಾರ್ಮಿಕರು ಸಾವನ್ನಪಿದ್ದರು. ಇದೀಗ ಮತ್ತೆ ಸಮರ್ಪಕ ಮೂಲ ಸೌಕರ್ಯ ನೀಡದೇ 7 ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಕಾರ್ಮಿಕ ಇಲಾಖೆ ಮತ್ತು ಪೊಲೀಸರು ಸಹ ಬಂದ ಕಾರ್ಮಿಕರು ಯಾರು ಎಲ್ಲಿದ್ದಾರೆ ಎಂದು ಪರಿಶೀಲಿಸದೆ ಈ ರೀತಿ ಅನಾಹುತಗಳಾಗುತ್ತಿದ್ದು, ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆ ಕೂಲಿ ಕೆಲಸಕ್ಕೆ ಎಂದು ಕರೆತಂದು ದಿನಪೂರ್ತಿ ಅವರಿಂದ ದುಡಿಸಿಕೊಳ್ಳುವ ಗುತ್ತಿಗೆದಾರರು ಅವರಿಗೆ ಸಮರ್ಪಕ ಮೂಲ ಸೌಕರ್ಯ ನೀಡದೆ ಇಂತಹ ಅವಘಡಗಳಿಗೆ ಕಾರಣವಾಗುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಮತ್ತೊಮ್ಮೆ ಇಂತಹ ದುರ್ಘಟನೆಗಳು ನಡೆಯದಂತೆ ಎಚ್ಚರವಹಿಸುವ ಕೆಲಸ ಮಾಡಬೇಕಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ