ಬೆಂಗಳೂರು ಗ್ರಾಮಾಂತರ, ಆ.10: ಇಂದು(ಆ.10) ಬೆಳಗ್ಗೆ ಮುದ್ದನಾಯಕನಪಾಳ್ಯದ ವೆಂಕಟೇಶ್ ಎಂಬಾತ ತನ್ನ ಮಗಳಾದ ಯಶಸ್ವಿನಿಯನ್ನು ಶಾಲೆಗೆ ಬಿಟ್ಟು ನಂತರ ಕೆಲಸಕ್ಕೆ ಹೋಗೋಣ ಎಂದು ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದ. ಈ ವೇಳೆ ಮಾರುಕಟ್ಟೆ ಬಳಿಗೆ ಬರ್ತಿದ್ದಂತೆ ದಾಬಸ್ ಪೇಟೆ(Dabaspete) ಕಡೆಯಿಂದ ವೇಗವಾಗಿ ಬಂದ ಲಾರಿ ನೋಡ ನೋಡ್ತಿದ್ದಂತೆ ಬೈಕ್ಗೆ ಡಿಕ್ಕಿ ಹೊಡೆದಿದ್ದು ಬೈಕ್ ಸಮೇತ ಸವಾರ ಮತ್ತು ಬಾಲಕಿಯನ್ನ ನೂರು ಮೀಟರ್ ಮುಂದಕ್ಕೆ ಎಳೆದೋಗಿದೆ. ಇನ್ನೂ ಲಾರಿ ಬೈಕ್ ಸಮೇತ ಎಳೆದೊಗುತ್ತಿದ್ದಂತೆ ಬೈಕ್ ಸವಾರ ವೆಂಕಟೇಶನ ಕೈ ಕಾಲು ಕಟ್ ಆಗಿದ್ದು ನಂತರ ಅಪಘಾತದ ರಬಸಕ್ಕೆ ಸ್ಥಳದಲ್ಲೆ ದುರ್ಮರಣಕ್ಕೀಡಾಗಿದ್ದಾನೆ.
ತಂದೆ ಸ್ಥಳದಲ್ಲೆ ಸಾವನ್ನಪಿದ್ರೆ ಬೈಕ್ ನಲ್ಲಿ ಹಿಂದೆ ಕೂತಿದ್ದ ಬಾಲಕಿ ಯಶಸ್ವಿನಿ ಕೈ ಮತ್ತು ಭುಜದ ಮೇಲೆ ಲಾರಿಯ ಟೈರ್ ಹರಿದು ನಂತರ ಆಕೆಯ ಮೇಲೆಯೆ ಟರ್ ನಿಂತಿದೆ. ಹೀಗಾಗಿ ಅಪಘಾತದಲ್ಲಿ ನಜ್ಜುಗುಜ್ಜಾಗಿ ಲಾರಿಯ ಟೈರ್ ಕೆಳಗಡೆ ಸಿಲುಕು ಒದ್ದಾಡುತ್ತಿದ್ದ ಬಾಲಕಿಯನ್ನ ಕಂಡ ಸ್ಥಳಿಯರು ಜೆಸಿಬಿ ಮೂಲಕ ಲಾರಿಯನ್ನ ಮೇಲಕ್ಕೆ ಲಿಪ್ಟ್ ಮಾಡಿಸಿ ಬಾಲಕಿಯನ್ನ ಹೊರಗಡೆ ತಂದಿದ್ದಾರೆ. ಜೊತೆಗೆ ಕೈ ಕಾಲು ನಜ್ಜುಗುಜ್ಜಾಗಿದ್ರು ಬಾಲಕಿ ಉಸಿರಾಡುತ್ತಿದ್ದನ್ನ ಕಂಡ ಸ್ಥಳಿಯರು ಬಾಲಕಿಯನ್ನ ಯಲಹಂಕದ ಖಾಸಗಿ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದು ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ನಗರದಲ್ಲಿ ಲಾರಿ ಚಾಲಕರು ಅತಿವೇಗವಾಗಿ ಬೆಳ್ಳಂ ಬೆಳಗ್ಗೆ ಮಧ್ಯಪಾನ ಮಾಡಿ ಚಾಲನೆ ಮಾಡುವ ಕಾರಣ ಈ ರೀತಿ ಅಪಘಾತಗಳಾಗ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಒಟ್ಟಾರೆ ಮಗಳ ಭವಿಷ್ಯದ ಮೇಲೆ ನೂರಾರು ಕನಸುಗಳನ್ನ ಕಂಡಿದ್ದ ತಂದೆ ಮಗಳನ್ನ ಶಾಲೆಗೆ ಬಿಡಲು ಹೋಗ್ತಿದ್ದ ವೇಳೆಯೆ ದುರ್ಮರಣಕ್ಕೀಡಾಗಿದ್ದು ನಿಜಕ್ಕೂ ದುರಂತ. ಇನ್ನೂ ಹೆದ್ದಾರಿಯಲ್ಲಿ ಅತಿವೇಗದ ಭಾರಿ ವಾಹನಗಳಿಂದ ಇಂತಹ ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಬಾರಿ ವಾಹನಗಳ ಅತಿವೇಗಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ