ಫೇಸ್ಬುಕ್ ಮೂಲಕ ಬಲೆಗೆ ಬೀಳಿಸಿ ಬಣ್ಣ ಬಣ್ಣ ಮಾತಿನಿಂದ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ
ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಲಂಡನ್ನಿಂದ ಗಿಫ್ಟ್ ಬಾಕ್ಸ್, ಶರ್ಟ್, ಶೂ, ರಿಂಗ್ಸ್, ವಾಚ್ ಕಳುಹಿಸುತ್ತೇನೆ ಎಂದು ನಂಬಿಸಿ 5 ಲಕ್ಷ ವಂಚನೆ ಮಾಡಲಾಗಿದೆ.
ನೆಲಮಂಗಲ, ಆ.10: ಫೇಸ್ ಬುಕ್(Facebook) ಮೂಲಕ ಪರಿಚಯ ಮಾಡಿಕೊಂಡು ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚನ್ನಾನಾಯಕನಪಾಳ್ಯದಲ್ಲಿ ನಡೆದಿದೆ. ಪ್ಯಾಟ್ರಿಕ್ ರೋಹನ್ ಎನ್ನುವರಿಗೆ 5 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಲಾಗಿದೆ. ಮನಿ ಲಾಂಡರಿಂಗ್ ಚಾರ್ಜಸ್ ಕಟ್ಟಬೇಕೆಂದು ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಮಿಸ್ ಬ್ಲಾಂಕ್ ಜಾ, ಪ್ರಿಯಾಂಕ್ ಸೆಕ್ಸಿನಾ, ಗೌತಮ್ ಸೇನ್, ರೋಹಿತ್ ಸಿಂಗ್ ಸೇರಿ ನಾಲ್ವರು ವಂಚಿಸಿದ್ದಾರೆ.
ಲಂಡನ್ನಿಂದ ಗಿಫ್ಟ್ ಬಾಕ್ಸ್, ಶರ್ಟ್, ಶೂ, ರಿಂಗ್ಸ್, ವಾಚ್ ಕಳುಹಿಸುತ್ತೇನೆ. ನೀವು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡಬಹುದೆಂದು ನಂಬಿಸಿ ಆರೋಪಿಗಳು ವಂಚಿಸಿದ್ದಾರೆ. ಸದ್ಯ ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ INFORMATION TECHNOLOGY ACT 2000 (U/s-66(C), 66(D))IPC 1860 (U/s-420) ಅಡಿ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ಮುಖೇನ ಲಂಡನ್ನಲ್ಲಿ ಕಾಸ್ ಡಿಸೈನ್ ಕೆಲಸ ಕೊಡುತ್ತೇನೆಂದು ಮಿಸ್ ಬ್ಯಾಂಕ್ ಜಾ ಎಂಬುವವರು ಪರಿಚಯವಾಗಿ ತಾನು ಲಂಡನಿಂದ ಗಿಫ್ಟ್ ಬಾಕ್ಸ್, ಶರ್ಟ್, ಶೂ, ರಿಂಗ್, ಕಳುಹಿಸುತ್ತೇನೆ ಎಂದು ನಂಬಿಸಿದ್ದಾರೆ. ನಂತರ ಅದಕ್ಕೆ ಕಸ್ಟಮ್ ಡ್ಯೂಟಿ ಕಟ್ಟಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣವನ್ನು ನನ್ನ ಸ್ನೇಹಿತನಿಗೆ ನೀಡಿ ಅವರು ಕರೆ ಮಾಡುತ್ತಾರೆ ಎಂದಿದ್ದಾರೆ. ಬಳಿಕ ಪ್ರಿಯಾಂಕ್ ಸೆಕ್ಸಿನಾ ಕರೆ ಮಾಡಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಹಣ ಪೀಕಿದ್ದಾರೆ.
ಇದನ್ನೂ ಓದಿ:ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಗೊತ್ತೇ?: ಇಲ್ಲಿದೆ ನೋಡಿ
ಚಾಲಕನಿಂದಲೇ ಲಾರಿ ಐಜಾಕ್, ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳ ಕಳ್ಳತನ
ಇನ್ನು ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಚಾಲಕನೇ ಲಾರಿ ಐಜಾಕ್ ಮಾಡಿ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ. 12 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಚಾಲಕ ಪ್ರಭು ಸೇರಿದಂತೆ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸ್ಮಾರ್ಟ್ ಎಕ್ಸ್‌ಪ್ರೆಸ್ ಗೆ ಸೇರಿದ 18 ಲಕ್ಷ ಬೆಲೆಬಾಳುವ ವಸ್ತುಗಳನ್ನು ಕೇರಳದ ಕೊಚ್ಚಿಗೆ ಡಿಲವರಿ ಮಾಡಬೇಕಿತ್ತು. ಸೇಲಂ ರಸ್ತೆ ಬಳಿ ಕಂಟೇನರ್ ನಿಲ್ಲಿಸಿ 18 ಲಕ್ಷ ವಸ್ತುಗಳಲ್ಲಿ 12 ಲಕ್ಷ ಬೆಲೆಬಾಳುವ ವಸ್ತುಗಳನ್ನು ಕದ್ದು ಖದೀಮರು ಪರಾರಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸಾಮಾಗ್ರಿಗಳು ತಲುಪದ ಹಿನ್ನೆಲೆ ಮಾಲೀಕ ಚೌಡರೆಡ್ಡಿ ಚಾಲಕನಿಗೆ ಕರೆ ಮಾಡಿದ್ದಾರೆ. ಆಗ ಚಾಲಕ ಪ್ರಭು ಅಡ್ರೆಸ್ ಮಿಸ್ ಆಗಿದೆಯೆಂದು ಕಥೆ ಕಟ್ಟಿದ್ದಾನೆ. ಡೌಟ್ ಬಂದು ಜಿಪಿಎಸ್ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ