ಮಗಳನ್ನು ಶಾಲೆಗೆ ಬಿಡಲು ಹೋಗ್ತಿದ್ದ ವೇಳೆ ಲಾರಿ ಡಿಕ್ಕಿ; ತಂದೆ ಸ್ಥಳದಲ್ಲೇ ದುರ್ಮರಣ, ಬಾಲಕಿ ಸ್ಥಿತಿ ಗಂಭೀರ

Bengaluru Rural: ಆತ ತನ್ನ ಮಗಳನ್ನ ಶಾಲೆಗೆ ಬಿಡುವುದಕ್ಕೆಂದು ಬೆಳ್ಳಂ ಬೆಳಗ್ಗೆ ಬೈಕ್ ಏರಿ ಶಾಲೆಯತ್ತ ಹೊರಟ್ಟಿದ್ದ. ಸ್ವಲ್ಪ ದೂರ ಹೋಗಿದ್ರೆ, ಮಗಳು ಶಾಲೆಗೆ ಹೋಗಿ ತಂದೆ ತನ್ನ ಕೆಲಸದತ್ತ ತೆರಳುತ್ತಿದ್ದ. ಆದ್ರೆ, ಈ ವೇಳೆ ಯಮಸ್ವರೂಪಿಯಾಗಿ ವೇಗವಾಗಿ ಬಂದ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದು, ತಂದೆಯ ಜೀವವನ್ನೇ ಬಲಿಪಡೆದುಕೊಂಡಿದ್ರೆ, ಇತ್ತ ನೂರಾರು ಕನಸು ಕಂಡಿದ್ದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.

ಮಗಳನ್ನು ಶಾಲೆಗೆ ಬಿಡಲು ಹೋಗ್ತಿದ್ದ ವೇಳೆ ಲಾರಿ ಡಿಕ್ಕಿ; ತಂದೆ ಸ್ಥಳದಲ್ಲೇ ದುರ್ಮರಣ, ಬಾಲಕಿ ಸ್ಥಿತಿ ಗಂಭೀರ
ಲಾರಿ ಮತ್ತು ಬೈಕ್​ ಅಪಘಾತ
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 10, 2023 | 9:44 PM

ಬೆಂಗಳೂರು ಗ್ರಾಮಾಂತರ, ಆ.10: ಇಂದು(ಆ.10) ಬೆಳಗ್ಗೆ ಮುದ್ದನಾಯಕನಪಾಳ್ಯದ ವೆಂಕಟೇಶ್ ಎಂಬಾತ ತನ್ನ ಮಗಳಾದ ಯಶಸ್ವಿನಿಯನ್ನು ಶಾಲೆಗೆ ಬಿಟ್ಟು ನಂತರ ಕೆಲಸಕ್ಕೆ ಹೋಗೋಣ ಎಂದು ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದ. ಈ ವೇಳೆ ಮಾರುಕಟ್ಟೆ ಬಳಿಗೆ ಬರ್ತಿದ್ದಂತೆ ದಾಬಸ್ ಪೇಟೆ(Dabaspete) ಕಡೆಯಿಂದ ವೇಗವಾಗಿ ಬಂದ ಲಾರಿ ನೋಡ ನೋಡ್ತಿದ್ದಂತೆ ಬೈಕ್​ಗೆ ಡಿಕ್ಕಿ ಹೊಡೆದಿದ್ದು ಬೈಕ್ ಸಮೇತ ಸವಾರ ಮತ್ತು ಬಾಲಕಿಯನ್ನ ನೂರು ಮೀಟರ್ ಮುಂದಕ್ಕೆ ಎಳೆದೋಗಿದೆ. ಇನ್ನೂ ಲಾರಿ ಬೈಕ್ ಸಮೇತ ಎಳೆದೊಗುತ್ತಿದ್ದಂತೆ ಬೈಕ್ ಸವಾರ ವೆಂಕಟೇಶನ ಕೈ ಕಾಲು ಕಟ್ ಆಗಿದ್ದು ನಂತರ ಅಪಘಾತದ ರಬಸಕ್ಕೆ ಸ್ಥಳದಲ್ಲೆ ದುರ್ಮರಣಕ್ಕೀಡಾಗಿದ್ದಾನೆ.

ಬಾಲಕಿ ಸ್ಥಿತಿ ಚಿಂತಾಜನಕ

ತಂದೆ ಸ್ಥಳದಲ್ಲೆ ಸಾವನ್ನಪಿದ್ರೆ ಬೈಕ್ ನಲ್ಲಿ ಹಿಂದೆ ಕೂತಿದ್ದ ಬಾಲಕಿ ಯಶಸ್ವಿನಿ ಕೈ ಮತ್ತು ಭುಜದ ಮೇಲೆ ಲಾರಿಯ ಟೈರ್ ಹರಿದು ನಂತರ ಆಕೆಯ ಮೇಲೆಯೆ ಟರ್ ನಿಂತಿದೆ. ಹೀಗಾಗಿ ಅಪಘಾತದಲ್ಲಿ ನಜ್ಜುಗುಜ್ಜಾಗಿ ಲಾರಿಯ ಟೈರ್ ಕೆಳಗಡೆ ಸಿಲುಕು ಒದ್ದಾಡುತ್ತಿದ್ದ ಬಾಲಕಿಯನ್ನ ಕಂಡ ಸ್ಥಳಿಯರು ಜೆಸಿಬಿ ಮೂಲಕ ಲಾರಿಯನ್ನ ಮೇಲಕ್ಕೆ ಲಿಪ್ಟ್ ಮಾಡಿಸಿ ಬಾಲಕಿಯನ್ನ ಹೊರಗಡೆ ತಂದಿದ್ದಾರೆ. ಜೊತೆಗೆ ಕೈ ಕಾಲು ನಜ್ಜುಗುಜ್ಜಾಗಿದ್ರು ಬಾಲಕಿ ಉಸಿರಾಡುತ್ತಿದ್ದನ್ನ ಕಂಡ ಸ್ಥಳಿಯರು ಬಾಲಕಿಯನ್ನ ಯಲಹಂಕದ ಖಾಸಗಿ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದು ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ನಗರದಲ್ಲಿ ಲಾರಿ ಚಾಲಕರು ಅತಿವೇಗವಾಗಿ ಬೆಳ್ಳಂ ಬೆಳಗ್ಗೆ ಮಧ್ಯಪಾನ ಮಾಡಿ ಚಾಲನೆ ಮಾಡುವ ಕಾರಣ ಈ ರೀತಿ ಅಪಘಾತಗಳಾಗ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನೆಲಮಂಗಲ: ಪತ್ನಿಯನ್ನು ಗ್ರಾಪ ಪಂಚಾಯಿತಿ ಅಧ್ಯಕ್ಷೆಯಾಗಿಸುವ ಕಸರತ್ತು ನಡೆಸಿದ್ದ ಪತಿ ಗುರಿ ಈಡೇರುವ ಮೊದಲೇ ರಸ್ತೆ ಅಪಘಾತಕ್ಕೆ ಬಲಿ!

ಒಟ್ಟಾರೆ ಮಗಳ ಭವಿಷ್ಯದ ಮೇಲೆ ನೂರಾರು ಕನಸುಗಳನ್ನ ಕಂಡಿದ್ದ ತಂದೆ ಮಗಳನ್ನ ಶಾಲೆಗೆ ಬಿಡಲು ಹೋಗ್ತಿದ್ದ ವೇಳೆಯೆ ದುರ್ಮರಣಕ್ಕೀಡಾಗಿದ್ದು ನಿಜಕ್ಕೂ ದುರಂತ. ಇನ್ನೂ ಹೆದ್ದಾರಿಯಲ್ಲಿ ಅತಿವೇಗದ ಭಾರಿ ವಾಹನಗಳಿಂದ ಇಂತಹ ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಬಾರಿ ವಾಹನಗಳ ಅತಿವೇಗಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್