ಪತ್ನಿಗೆ ಅಧ್ಯಕ್ಷ ಪಟ್ಟ ಕಟ್ಟಲು ಸದಸ್ಯರ ಹೈಜಾಕ್: ಸುತ್ತಾಡಿ ವಾಪಾಸ್ ಬರುವಾಗ ಅಪಘಾತ, ಇಬ್ಬರ ಸಾವು
ಕೋಲಾರದಿಂದ ಹೊರಟಿದ್ದ ಹತ್ತು ಜನ ಸದಸ್ಯರು ಬಾಂಬೆ, ಶಿರಡಿ ಪ್ರವಾಸ ಮುಗಿಸಿ ವಾಪಾಸ್ ಆಗಿ ನೆಲಮಂಗಲ ಬಳಿ ಫಾರಂ ಹೌಸ್ನಲ್ಲಿ ತಂಗಿದ್ದರು. ಈ ಪೈಕಿ ಐದು ಜನ ಮಾತ್ರ ಫಾರಂ ಹೌಸ್ ನಿಂದ ಹೊರ ಬಂದಿದ್ದಾರೆ. ಈ ವೇಳೆ ನೆಲಮಂಗಲದ ಬೇಗೂರು ಬಳಿ ಅಪಘಾತ ಸಂಭವಿಸಿದೆ.
ನೆಲಮಂಗಲ, ಆ.07: ಪತ್ನಿಗೆ ಅಧ್ಯಕ್ಷ ಪಟ್ಟ ಕಟ್ಟಲು 10 ಸದಸ್ಯರನ್ನ ಹೈಜಾಕ್(Hijacking) ಮಾಡಿದ್ದ ಪತಿ ಅಪಘಾತದಲ್ಲಿ(Accident) ಮೃತಪಟ್ಟ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಅಂಗೊಂಡಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಅಮರಾವತಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಲು ಪತಿ ಕೇಶವರೆಡ್ಡಿ 10 ಸದಸ್ಯರನ್ನ ಹೈಜಾಕ್ ಮಾಡಿದ್ದರು. ಸದಸ್ಯರು ಪ್ರವಾಸಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿದೆ. ಹಾಗೂ ಕೇಶವರೆಡ್ಡಿ ಮೃತಪಟ್ಟಿದ್ದು ಕೆಲ ಸದಸ್ಯರಿಗೆ ಗಾಯಗಳಾಗಿವೆ.
ಕೋಲಾರದಿಂದ ಹೊರಟಿದ್ದ ಹತ್ತು ಜನ ಸದಸ್ಯರು ಬಾಂಬೆ, ಶಿರಡಿ ಪ್ರವಾಸ ಮುಗಿಸಿ ವಾಪಾಸ್ ಆಗಿ ನೆಲಮಂಗಲ ಬಳಿ ಫಾರಂ ಹೌಸ್ನಲ್ಲಿ ತಂಗಿದ್ದರು. ಈ ಪೈಕಿ ಐದು ಜನ ಮಾತ್ರ ಫಾರಂ ಹೌಸ್ ನಿಂದ ಹೊರ ಬಂದಿದ್ದಾರೆ. ಈ ವೇಳೆ ನೆಲಮಂಗಲದ ಬೇಗೂರು ಬಳಿ ಅಪಘಾತ ಸಂಭವಿಸಿದೆ. ಮೂವರು ಸದಸ್ಯರಿಗೆ ಗಂಭೀರ ಗಾಯಗಳಾಗಿವೆ. ಹದಿನೇಳು ಜನ ಸದಸ್ಯರಿರುವ ಗ್ರಾಮ ಪಂಚಾಯಿತಿಗೆ ನಾಳೆ ಚುನಾವಣೆ ನಡೆಯಬೇಕಿತ್ತು. ಆದ್ರೆ ಅಪಘಾತ ಹಿನ್ನಲೆ ಇಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಲಾಗಿದೆ.
ಇದನ್ನೂ ಓದಿ: ಜಾತಿ ಜಾತಿಗಳ ವೈಷಮ್ಯದ ಗ್ಯಾರಂಟಿ ಇರುವಾಗ ಬಳೂತಿ ಗ್ರಾಮದ ಬೀಬಿ ಫಾತೀಮಾ ಜಾತ್ರೆ ಅಪರೂಪದ್ದಾಗಿದೆ! ಹೇಗೆ?
ಇನ್ನು ಕೇಶವರೆಡ್ಡಿ ಅತ್ತಿಗೆ ಅನಿತ ಕೂಡ ಗ್ರಾ.ಪಂ ಸದಸ್ಯರು ಹೀಗಾಗಿ ಇವರ ಜೊತೆ 8 ಜನ ಸದಸ್ಯರನ್ನ ಹೈಜಾಕ್ ಮಾಡಲಾಗಿತ್ತು. ಸುಬ್ಬರತ್ನ, ಸೀತಮ್ಮ, ಪ್ರೇಮ, ಅಶೋಕ್, ಸುಮಿತ್ರ, ಶಿವಶಂಕರ, ಸೋಮಶೇಖರ್, ಮುನಿವೆಂಕಟಪ್ಪ ಕಳೆದ 15 ದಿನದ ಹಿಂದೆಯೇ ಗ್ರಾಮ ತೊರೆದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಸದಸ್ಯರು,
ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿಯ ರಾಮರೆಡ್ಡಿ ಅವರ ತೋಟದ ಮನೆಯಲ್ಲಿ ಕೆಲ ಕಾಲ ಉಳಿದುಕೊಂಡು ಬಳಿಕ ಕೆಲವು ಕಡೆ ವಿಮಾನದಲ್ಲಿ ಪ್ರವಾಸ ಮಾಡಿ ಬಾಂಬೆ, ಶಿರಡಿ ಸೇರಿದಂತೆ ಹಲವು ಕಡೆ ಜಾಲಿ ಟ್ರಿಪ್ ಮುಗಿಸಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಹಾಘೂ ಈ ಟ್ರಿಪ್ಗಾಗಿ ಮೃತ ಕೇಶವರೆಡ್ಡಿ 10 ಲಕ್ಷ ಹಣ ಖರ್ಚು ಮಾಡಿಕೊಂಡಿದ್ದರು. ಅಪಘಾತ ಸಂಭವಿಸದೇ ಇದ್ದಿದ್ದರೆ ಚುನಾವಣೆಗೆ ಎಲ್ಲಾ ಸದಸ್ಯರು ವಾಪಾಸ್ ಆಗುತ್ತಿದ್ದರು. ಸದಸ್ಯರು ತಂಗಿದ್ದ ತೋಟದ ಮನೆ ಮಾಲೀಕ ರಾಮರೆಡ್ಡಿ ಅವರ ದಾಬಸ್ ಪೇಟೆಯ ಮತ್ತೊಂದು ಮನೆಗೆ ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಅಪಘಾತವಾಗಿದೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ, ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ: ರಾಜ್ಯಪಾಲರಿಗೆ ದೂರು
5 ಜನರು ಮಾತ್ರ ಬುಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಕ್ಯಾಂಟರ್ಗೆ ಡಿಕ್ಕಿಯಾಗಿ ಕೇಶವರೆಡ್ಡಿ ಮತ್ತು ಶ್ರೀನಿವಾಸ್ ಮೃತಪಟ್ಟಿದ್ದಾರೆ. ಕೇಶವರೆಡ್ಡಿ ಪತ್ನಿ ಅಮರಾವತಿ ಹಾಗೂ ಶ್ರೀನಿವಾಸ್ ಅತ್ತಿಗೆ ಅನಿತಾ ಸದಸ್ಯರು. ಹೀಗಾಗಿ ಇವರು ತೆರಳಿದ್ದರು. ಸದಸ್ಯ ಸೋಮಶೇಖರ್ ಬುಲೆರೋ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಉಳಿದ ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇವರೆಲ್ಲರೂ ಜೆಡಿಎಸ್ ಬೆಂಬಲಿತರಾಗಿದ್ದು ಜೆಡಿಎಸ್ ತೆಕ್ಕೆಗೆ ಅಧ್ಯಕ್ಷ ಸ್ಥಾನ ಗಳಿಸುವ ಸಲುವಾಗಿ ಮೃತ ಕೇಶವರೆಡ್ಡಿ ಹೈಜಾಕ್ ಮಾಡಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಇನ್ನು ಅಪಘಾತದಲ್ಲಿ ಪತಿಯನ್ನ ಕಳೆದುಕೊಂಡ ಗ್ರಾಮ ಪಂಚಾಯತಿ ಸದಸ್ಯೆ ಅಮರಾವತಿ ಕಣ್ಣೀರು ಹಾಕಿದ್ದಾರೆ. ರಾಜಕೀಯ, ರಾಜಕೀಯ ಅಂತ ಇವತ್ತು ಪ್ರಾಣ ಕೊಟ್ಟಿದ್ದಾರೆ. ದೇವರು ಅವರ ಪ್ರಾಣವನ್ನು ತಗೊಂಡಿದ್ದಾರೆ. ನನ್ನನ್ನ, ನಮ್ಮ ಇಬ್ಬರು ಮಕ್ಕಳನ್ನ ಅನಾಥ ಮಾಡಿ ಬಿಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ನನ್ನ ಪತಿ ಆಧಾರವಾಗಿದ್ದರು. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದಂತೆ ಕೇಳಿದ್ದೇವೆ. ಒಂದು ವಾರದಿಂದ ಈ ತೋಟದ ಮನೆಯಲ್ಲಿ ಇದೀವಿ ಉಳಿದಂತೆ ವಿಮಾನದಲ್ಲಿ ಶಿರಡಿ, ಮುಂಬೈ ಹೋಗಿದ್ವಿ ನಿನ್ನೆ ರಾತ್ರಿ 2:50ಕ್ಕೆ ಬಂದಿದ್ದೀವಿ ಎಂದಿದ್ದರು. ಕೇಶವರೆಡ್ಡಿ ಅಣ್ಣ ರಾಮರೆಡ್ಡಿ ಕಾರ್ಖಾನೆ ನೋಡಲು ದಾಬಸ್ ಪೇಟೆಗೆ ಸಂಜೆ 4:30ಗೆ ಹೋಗಿದ್ದ ಪತಿ ಬರಲೇ ಇಲ್ಲ. ಈಗ ಶಾಸಕ ಸಮೃದ್ಧಿ ಮಂಜುನಾಥ್ ಯಾವ ರೀತಿ ಹೇಳ್ತಾರೋ ಅದೇ ರೀತಿ ಕೇಳ್ತೀವಿ. ಶಾಸಕ ಸಮೃದ್ಧಿ ಮಂಜುನಾಥ್, ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ದೇವೇಗೌಡ ಅವರ ಬಗ್ಗೆಯೇ ನನ್ನ ಗಂಡ ಯಾವಾಗಲು ಕನವರಿಸುತ್ತಿದ್ದರು. ಅವರಿಗಾಗಿ ಪ್ರಾಣ ಕೊಡಲು ಸಿದ್ಧರಿದ್ರು. ನನಗೆ ಅಧ್ಯಕ್ಷ ಪಟ್ಟ ಹಿಡಿಯಲು ಹೋಗಿ ಈ ರೀತಿ ಆಗಿದೆ. ಈಗಾಗಲೇ 10 ಲಕ್ಷ ಖರ್ಚಾಗಿದೆ ಎಂದು ಪತಿ ನೆನೆದು ಅಮರಾವತಿ ಕಣ್ಣೀರು ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:53 am, Mon, 7 August 23