ಬೆಂಗಳೂರಿನಲ್ಲಿ ಪಾಕ್​​​ ದಂಪತಿ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣ; ಮಹತ್ವದ ಮಾಹಿತಿ ಹಂಚಿಕೊಂಡ ಎಡಿಜಿಪಿ

ಪಾಕ್​​​ ದಂಪತಿ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗಣಿ ಠಾಣೆಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಪಾಕ್ ಪ್ರಜೆಗಳ ಬಗ್ಗೆ ಕೆಲವೊಂದಿಷ್ಟು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪಾಕ್​​​ ದಂಪತಿ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣ; ಮಹತ್ವದ ಮಾಹಿತಿ ಹಂಚಿಕೊಂಡ ಎಡಿಜಿಪಿ
ಎಡಿಜಿಪಿ ಹಿತೇಂದ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 01, 2024 | 6:13 PM

ಬೆಂಗಳೂರು ಗ್ರಾಮಾಂತರ, ಅ.01: ಪಾಕ್​​​ ದಂಪತಿ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಠಾಣೆಗೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ(ADGP Hitendra) ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಅವರು, ‘ ಎರಡು ದಿನಗಳ ಹಿಂದೆ ಆನೇಕಲ್‌ನಲ್ಲಿ ಬಂಧಿತರಾದವರು ಪಾಕಿಸ್ತಾನದ ಕರಾಚಿ ನಿವಾಸಿಗಳು. ಅಪ್ನ ಅಂಗಾನ್ ಬಡಾವಣೆಯ ಎರಡು ವಿಲ್ಲಾಗಳಲ್ಲಿ ವಾಸ ಮಾಡುತ್ತಿದ್ದರು. ಇವರು 2014ರಲ್ಲಿ ಭಾರತಕ್ಕೆ ಬಾಂಗ್ಲಾದೇಶದ ಮೂಲಕ ಬಂದಿದ್ದಾರೆ. ಎರಡ್ಮೂರು ವರ್ಷಗಳಿಂದ ಬಿರಿಯಾನಿ ಹೋಟೆಲ್ ಬಿಸಿನೆಸ್ ಮಾಡಿಕೊಂಡಿದ್ದರು.

ಇನ್ನು ಈ ಆರೋಪಿಗಳ ಬಳಿ ಭಾರತೀಯ ಪಾಸ್‌ಪೋರ್ಟ್, ಆಧಾರ್, ಡಿಎಲ್ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ವೇಳೆ ಕೆಲವೊಂದು ಮಾಹಿತಿಗಳು ಲಭ್ಯ ಆಗಿವೆ. ಹಾಗಾಗಿ ನಾನು ಕೂಡ ಆಗಮಿಸಿ ತನಿಖಾ ತಂಡದ ಜೊತೆ ಚರ್ಚೆ ನಡೆಸಿದ್ದೆನೆ. ಯಾವ ರೀತಿ ತನಿಖೆ ನಡೆಯಬೇಕು ಎಂಬುದರ ಬಗ್ಗೆ ನಿರ್ದೇಶನ ನೀಡಿದ್ದೆನೆ. ಪಾಸ್‌ಪೋರ್ಟ್, ಆಧಾರ್ ಪ್ಯಾನ್ ಕಾರ್ಡ್ ಹೇಗೆ ಬಂತು ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಬಂಧಿತನಾದ ಪಾಕಿಸ್ತಾನ ಪ್ರಜೆ ಬಳಿ ಇದೆ ಭಾರತದ ಪಾಸ್​ಪೋರ್ಟ್​!

ಈ ಆರೋಪಿಗಳ ಮನೆಯಲ್ಲಿ ಸಿಕ್ಕ ಮೊಬೈಲ್, ಲ್ಯಾಪ್‌ಟಾಪ್ ಕೆಲ ದಾಖಲೆಗಳನ್ನು FSL ಗೆ ಕಳುಹಿಸಲಾಗಿದೆ. ಆರೋಪಿಗಳು ನೀಡುತ್ತಿರುವ ಮಾಹಿತಿ ಸತ್ಯ ಎಂದು ನಂಬಲು ಸಾಧ್ಯವಿಲ್ಲ. ಧರ್ಮ ಪ್ರಚಾರದ ಜೊತೆಗೆ ಬೇರೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ ಬಗ್ಗೆ ಮಾಹಿತಿ ಇಲ್ಲ. ಚೆನ್ನೈನಲ್ಲಿ ಆರೋಪಿಗಳ ಸಂಬಂಧಿಗಳು ಅರೆಸ್ಟ್ ಆಗಿರುವುದು ಸತ್ಯ. ದಾವಣಗೆರೆ ಮೂಲದ ಅಲ್ತಾಫ್ ಅರೆಸ್ಟ್ ಆಗಿರುವುದು ನಿಜ. ಆದ್ರೆ, ಇವರುಗಳ ಜೊತೆ ಆತನ ಪಾತ್ರ ಇನ್ನೂ ಕನ್ಫರ್ಮ್ ಇಲ್ಲ. ಸದ್ಯ ಪ್ರಕರಣವನ್ನು IB ,NIA ಮತ್ತು ಆನೇಕಲ್ ಉಪ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ- ಸಿಎಂ ಸಹೋದರ
ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ- ಸಿಎಂ ಸಹೋದರ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಮುಡಾ ಸೈಟ್​ಗೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಚಂದ್ರಶೇಖರ್​ ಗೆಟ್​ ಲಾಸ್ಟ್​​ : ADGP ವಿರುದ್ಧ ಸಿಂಹ ಪ್ರತಾಪ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಕೋಸಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸೇತುವೆಯಿಂದ ಓಡಿದ ಜನ
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ