ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸರು ಮಾಡಿದ್ದೇನು ನೀವೇ ನೋಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆ ಮುಂದೆ ಓರ್ವ ಯುವಕ ಹೈಡ್ರಾಮಾ ಮಾಡಿದ್ದಾನೆ. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಸವಾರರಿಗೆ ದಂಡ ಹಾಕಲು ಬಿಡದೆ, ಪೊಲೀಸರನ್ನ ನೋಡಿ ಡ್ಯಾನ್ಸ್ ಮಾಡಿದ್ದಾನೆ. ಲಾಠಿಯಿಂದ ಹೊಡೆದರೂ ಬಿಡದ ಯುವಕ, ಕೊನೆಗೆ ಪೊಲೀಸರು ಏನು ಮಾಡಿದರು ನೋಡಿ.
ನೆಲಮಂಗಲ, ಸೆಪ್ಟೆಂಬರ್ 30: ಪೊಲೀಸ್ ಠಾಣೆ ಮುಂದೆ ಯುವಕ ಹೈಡ್ರಾಮಾ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ಟೌನ್ ಪೊಲೀಸ್ ಠಾಣೆ ಮುಂದೆ ನಡೆದಿದೆ. ಹರೀಶ್ ಕುಮಾರ್ ಹೈಡ್ರಾಮಾ ಮಾಡಿದ ಯುವಕ. ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರಿಗೆ ದಂಡ ಹಾಕಲು ಬಿಡದೆ ತೊಂದರೆ ನೀಡಿದ್ದಾನೆ. ಪೊಲೀಸರನ್ನ ನೋಡಿ ಡ್ಯಾನ್ಸ್ ಮಾಡುತ್ತಾ ನಿಂತಿದ್ದಾನೆ. ಲಾಠಿಯಿಂದ ಹೊಡೆದಿದ್ದಕ್ಕೆ ಮತ್ತಷ್ಟು ಹೈಡ್ರಾಮಾ ಮಾಡಿದ್ದು, ಕೊನೆಗೆ ಪೊಲೀಸರು ಯುವಕನಿಗೆ ಹಣ ಕೊಟ್ಟು ಕಳಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos