‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್; ದಾಸನ ಪ್ರತಿಕ್ರಿಯೆ ನೋಡಿ..

‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್; ದಾಸನ ಪ್ರತಿಕ್ರಿಯೆ ನೋಡಿ..

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಮದನ್​ ಕುಮಾರ್​

Updated on: Sep 30, 2024 | 7:24 PM

ಜಾಮೀನು ಸಿಗುವ ನಿರೀಕ್ಷೆಯಲ್ಲಿ ನಟ ದರ್ಶನ್​ ಅವರನ್ನು ನೋಡಲು ಬಳ್ಳಾರಿ ಜೈಲಿನ ಎದುರು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್​ ನಡೆದು ಬರುವಾಗ ಫ್ಯಾನ್ಸ್​ ಹಲವಾರು ರೀತಿಯಲ್ಲಿ ಜೈಕಾರ ಹಾಕಿದರು. ‘ದೇವರು ಬಂದ್ರು, ಹುಲಿ ಬಂತು’ ಎಂಬಿತ್ಯಾದಿಯಾಗಿ ತಮ್ಮ ನೆಚ್ಚಿನ ನಟನ ಗುಣಗಾನ ಮಾಡಿದರು. ಆ ವಿಡಿಯೋ ಇಲ್ಲಿದೆ ನೋಡಿ..

ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್​ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಇಂದು (ಸೆಪ್ಟೆಂಬರ್​ 30) ಆಗಮಿಸಿದ್ದರು. ಸೆಲ್​ನಿಂದ ವೀಕ್ಷಕರ ಕೊಠಡಿಗೆ ಬರುವಾಗ ದರ್ಶನ್​ ಅವರನ್ನು ನೋಡಿ ಫ್ಯಾನ್ಸ್​ ಜೈಕಾರ ಹಾಕಿದ್ದಾರೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದ ದರ್ಶನ್​ಗೆ ನಿರಾಸೆ ಆಗಿದೆ. ಅವರ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್​ 4ಕ್ಕೆ ಮುಂದೂಡಿಕೆ ಆಗಿದೆ. ವಾದ ಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್ ಪರ ವಕೀಲರೇ ಮನವಿ ಮಾಡಿದ ಕಾರಣ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.