ಬೆಂಗಳೂರು, (ಏಪ್ರಿಲ್ 04): ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ಅಳಿಯ ಖ್ಯಾತ ವೈದ್ಯ ಡಾ.ಸಿಎನ್ ಮಂಜುನಾಥ್ ಅವರುಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು(ಏಪ್ರಿಲ್ 04) ನಾಮಪತ್ರ ಸಲ್ಲಿಸಿದರು. ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ರಾಮನಗರ ಜಿಲ್ಲಾಧಿಕಾರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಇನ್ನು ನಾಮಪತ್ರದ ಅಫಿಡೆವಿಟ್ನಲ್ಲಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದು, ಇದರಲ್ಲಿ ಪುಸ್ತಕಗಳು ಸಹ ತಮ್ಮ ಆಸ್ತಿ ಪಟ್ಟಿಯಲ್ಲಿದೆ ಮಾಹಿತಿ ನೀಡಿರುವುದು ವಿಶೇಷವಾಗಿದೆ. ತಮ್ಮ ಹೆಸರಿನಲ್ಲಿ 43.63 ಕೋಟಿ ರೂ. ಮತ್ತು ಪತ್ನಿ ಅನುಸೂಯ ಅವರ ಆಸ್ತಿ ಮೌಲ್ಯ 52.66 ಕೋಟಿ ರೂ. ಇದೆ ಎಂದು ಮಂಜುನಾಥ್ ತಿಳಿಸಿದ್ದಾರೆ. ಈ ದಂಪತಿ ಒಟ್ಟು 96.29 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇನ್ನು ಮಂಜುನಾಥ್ ಅವರಿಗಿಂತ ಅವರ ಪತ್ನಿ ಅನುಸೂಯ ಅವರೇ ಶ್ರೀಮಂತರಾಗಿದ್ದಾರೆ.
ಡಾ.ಮಂಜುನಾಥ್ ಅವರ ಹೆಸರಿನಲ್ಲಿ 43.63 ಕೋಟಿ ರೂ ಆಸ್ತಿ ಇದ್ದರೆ, ಅವರ ಪತ್ನಿ ದೇವೇಗೌಡ ಅವರ ಪುತ್ರಿ ಅನುಸೂಯ ಅವರು 52.66 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇದರೊಂದಿಗೆ ಈ ದಂಪತಿಯ ಒಟ್ಟು ಆಸ್ತಿ ಮೌಲ್ಯ 96.29 ಕೋಟಿ ರೂಪಾಯಿ ಇದೆ. ಡಾ. ಮಂಜುನಾಥ್ ಅವರು 6.98 ಕೋಟಿ ರೂ. ಚರಾಸ್ಥಿ, 36.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಆನುಸೂಯ ಅವರು 17.36 ಕೋಟಿ ರೂ. ಚರಾಸ್ತಿ, 35.30 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಇವರ ಅವಿಭಕ್ತ ಕುಟುಂಬದ ಹೆಸರಿನಲ್ಲಿ 5 ಲಕ್ಷ ರೂ. ಸಾಲ ಇದೆ. ಡಾ. ಮಂಜುನಾಥ್ ಅವರ ಹೆಸರಿನಲ್ಲಿ 3 ಕೋಟಿ ರೂ. ಸಾಲ ಇದೆ. ಹಾಗೇ ಪತ್ನಿ ಅನುಸೂಯ ಅವರು 11 ಕೋಟಿ ರೂ. ಸಾಲ ಹೊಂದಿರುವುದಾಗಿ ಡಾ. ಸಿಎನ್ ಮಂಜುನಾಥ್ ಅವರು ತಮ್ಮ ಅಫಿಡೆವಿಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ದಂಪತಿ ಬಳಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ, ಇನ್ನು ಆಸ್ತಿ ಎಷ್ಟಿದೆ ಗೊತ್ತಾ?
ಡಾ.ಮಂಜುನಾಥ್ ಬಳಿ ಒಂದು ಮರ್ಸಿಡೀಸ್ ಬೆಂಜ್ ಕಾರು, ಒಂದು ಹುಂಡೈ ವರ್ನಾ, ಕಾರು ಇದ್ದರೆ, ಇವರ ಪತ್ನಿಯ ಬಳಿ ಮಾರುತಿ ಸಿಯಾಜ್ ಕಾರು ಇದೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಚಿನ್ನಾರಣ ಇಲ್ಲ. ಆದ್ರೆ, ಪತ್ನಿ ಅನುಸೂಯ ಅವರ ಬಳಿ 5 ಕೆಜಿ ಚಿನ್ನಾಭರಣ, 1ಕೆಜಿ ಚಿನ್ನದ ಗಟ್ಟಿ ಹೊಂದಿದ್ದು, 51 ಕ್ಯಾರೇಟ್ ವಜ್ರ ಇದೆ. ಹಾಗೇ 340 ಗ್ರಾಂ ಬೆಲೆ ಬಾಳುವ ಹರಳುಗಳು ಮತ್ತು 25 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಹಾಗೇ ಅನುಸೂಯ ಮಂಜುನಾಥ್ ಹೆಸರಿನಲ್ಲಿ 4 ವಾಸದ ಮನೆಗಳು ಇದ್ದರೆ, ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಮನೆ ಇಲ್ಲ.
ಡಾ.ಮಂಜುನಾಥ್ ಅವರು ಅನಿತಾ ಕುಮಾರಸ್ವಾಮಿಗೆ 7.50 ಲಕ್ಷ ರೂ., ಪುತ್ರ ಸಾತ್ವಿಕ್‌ಗೆ 99.83 ಲಕ್ಷ ರೂ. ಪುತ್ರಿ ನಮ್ರತಾಗೆ 1.31 ಕೋಟಿ ರೂ., ಪತ್ನಿ ಅನುಸೂಯಗೆ 2.32 ಕೋಟಿ ರೂ. ಸಾಲ ನೀಡಿದ್ದಾರೆ. ಇನ್ನು ಅನುಸೂಯ ಮಂಜುನಾಥ್ ಸಹ ಕುಟುಂಬದವರಿಗೆ ಸಾಲ ನೀಡಿದ್ದು, ಅಣ್ಣನ ಮಗ ಸೂರಜ್‌ಗೆ 7.50 ಲಕ್ಷ ರೂ. ಪ್ರಜ್ವಲ್ ರೇವಣ್ಣಗೆ 22 ಲಕ್ಷ ರೂ. ಪುತ್ರ ಸಾತ್ವಿಕ್‌ಗೆ 62.88 ಲಕ್ಷ ರೂ. ಪುತ್ರಿ ನಮ್ರತಾಗೆ 2.50 ಕೋಟಿ ರೂ., ತಾಯಿ ಚನ್ನಮ್ಮಗೆ 19.20 ಲಕ್ಷ ರೂ. ಸಾಲ ನೀಡಿದ್ದಾರೆ.
ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ 100 ಪುಸ್ತಕ, 125 ಕನ್ನಡ ಸಾಹಿತ್ಯ ಪುಸ್ತಕ ನನ್ನ ಆಸ್ತಿ ಪಟ್ಟಿಯಲ್ಲಿದೆ ಎಂದು ಡಾ.ಮಂಜುನಾಥ್ ಘೋಷಣೆ ಮಾಡಿಕೊಂಡಿರುವುದು ವಿಶೇಷ.
Published On - 7:56 pm, Thu, 4 April 24