ನೆಲಮಂಗಲದಲ್ಲಿ ಮಾಂಸಾಹಾರದ ವಿರುದ್ಧ ಸಸ್ಯಹಾರಿಗಳ ರ್ಯಾಲಿ
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್ಮೆಂಟ್ ಇಂಡಿಯಾ ಹಾಗೂ ವಿಶ್ವ ಚೈತನ್ಯ ಕ್ವಾಂಟಮ್ ಫೌಂಡೇಶನ್ ವತಿಯಿಂದ ಮಾಂಸಾಹಾರದ ವಿರುದ್ಧ ನೆಲಮಂಗಲ ಪಟ್ಟಣದಲ್ಲಿ ರ್ಯಾಲಿ ನಡೆಯಿತು.
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪರೂಪದ ಜಾಥಾ ನಡೆದಿದೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್ಮೆಂಟ್ ಇಂಡಿಯಾ ಹಾಗೂ ವಿಶ್ವ ಚೈತನ್ಯ ಕ್ವಾಂಟಮ್ ಫೌಂಡೇಶನ್ ವತಿಯಿಂದ ನೆಲಮಂಗಲ (Nelamangala) ಪಟ್ಟಣದಲ್ಲಿ ಸಸ್ಯಹಾರ (Vegetarian Rally)ದ ಪರವಾಗಿ ಸಸ್ಯಹಾರ ಜನಜಾಗೃತಿ ರ್ಯಾಲಿ ನಡೆದಿದ್ದು, ನೂರಾರು ಸದಸ್ಯರು ಈ ಜಾಥಾದಲ್ಲಿ ಭಾಗಿಯಾದರು. ಸಸ್ಯಹಾರ ಹಾಗೂ ಮಾಂಸಹಾರ (Non-vegetarian) ಬಗೆಗಿನ ಬಿತ್ತಿ ಪತ್ರ ಹಂಚಿ ಸಸ್ಯಹಾರದ ಪ್ರಯೋಜ (Benefits of vegetarian)ನ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ನೆಲಮಂಗಲ ಪಟ್ಟಣದ ವೀರಭದ್ರೇಶ್ವರ ಮಠದಿಂದ ವಿಶ್ವಶಾಂತಿ ಆಶ್ರಮದವರೆಗೂ ಜಾಥಾ ನಡೆದಿದ್ದು, ರಸ್ತೆಯುದ್ದಕ್ಕೂ ಸಸ್ಯಹಾರಿಗಳು ಮಾಂಸಹಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ವಾದ್ಯದ ಸದ್ದಿಗೆ ಕುಣಿಯುತ್ತಾ ಸಸ್ಯಹಾರಿಗಳು ಜಾಥಾದಲ್ಲು ಮುನ್ನಡೆದರು.
ಇದನ್ನೂ ಓದಿ: ಹುಂಜ ಕೂಗುತ್ತದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಪಕ್ಕದ ಮನೆಯವರು
ಮೇಕೆಯಲ್ಲಿ ದೇವರಿದ್ದಾನೆ, ಮೊಟ್ಟೆಯಲ್ಲಿ ದೇವರಿದ್ದಾನೆ. ಸಕಲ ಪ್ರಾಣಿ ಕೋಟಿಗಳಲ್ಲಿ ದೇವರಿದ್ದಾನೆ. ನಮ್ಮೆಲ್ಲರಲ್ಲಿ ದೇವರಿದ್ದಾನೆ ಎಂದು ಜಾಥಾದಲ್ಲಿ ಭಾಗಿಯಾಗಿದ್ದ ಜನರು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಶಾಖಾ ಹಾರಿಗೆ ಜಿಂದಾಬಾದ್, ಸಸ್ಯಹಾರ ಜಗತ್ತಿಗೆ ಜೈ, ಸಸ್ಯಹಾರವನ್ನೇ ಸೇವಿಸೋಣ, ಪ್ರಾಣಿಗಳನ್ನು ಉಳಿಸೋಣ, ಪ್ರಾಣಿಗಳನ್ನು ಸ್ವತಂತ್ರವಾಗಿ ಬದುಕಲು ಬಿಡಿ, ಮಾಂಸಾಹಾರ ಪಾಪಾಹಾರ-ಸಸ್ಯಾಹಾರ ಅಮೃತಾಹಾರ, ಪ್ರಾಣಿಗಳು ನಮ್ಮ ಗೆಳೆಯರು ಆಹಾರವಲ್ಲ, ಜೀವಿಸಿ ಜೀವಿಸಲು ಬಿಡಿ, ಪ್ರಾಣ ನೀಡುವ ಶಕ್ತಿ ನಿನಗಿಲ್ಲದ ಮೇಲೆ ಪ್ರಾಣ ತೆಗೆಯುವ ಅಧಿಕಾರ ನಿನಗಿಲ್ಲ ಎಂಬ ಭಿತ್ತಿಪತ್ರವನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ, ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನದ ಭಿತ್ತಿಪತ್ರವನ್ನೂ ಹಿಡಿದು ಜಾಥಾದಲ್ಲಿ ಪ್ರದರ್ಶಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ