ಹಲವಾರು ವರ್ಷಗಳಿಂದ ಟಾರ್ ಕಾಣದ ಸರ್ವೀಸ್ ರಸ್ತೆ; ಬಾಯ್ತೆರೆದು ಕುಳಿತ ಗುಂಡಿಗಳು, ಜೀವ ಪಣಕ್ಕಿಟ್ಟು ಸಂಚಾರ

ಈ ರಸ್ತೆಯಲ್ಲಿ ಒಂದು ವಾಹನ ಹೋಗಬೇಕಾದ್ರು ಹರಸಾಹಸ ಪಡಬೇಕು. ಬೆಳಿಗ್ಗೆ ಹಾಗೂ ಸಂಜೆ ವೇಳೆ ರಸ್ತೆ ಗುಂಡಿಗಳಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಿರ್ಮಾಣವಾಗಿಬಿಡುತ್ತದೆ. ಒಂದು ವಾಹನ ಸಿಕ್ಕಿ ಹಾಕಿಕೊಂಡ್ರೂ ಇಡೀ ಹೈವೇ ರಸ್ತೆ ಜಾಮ್ ಆಗಿಬಿಡುತ್ತದೆ.

ಹಲವಾರು ವರ್ಷಗಳಿಂದ ಟಾರ್ ಕಾಣದ ಸರ್ವೀಸ್ ರಸ್ತೆ; ಬಾಯ್ತೆರೆದು ಕುಳಿತ ಗುಂಡಿಗಳು, ಜೀವ ಪಣಕ್ಕಿಟ್ಟು ಸಂಚಾರ
ಹಲವಾರು ವರ್ಷಗಳಿಂದ ಟಾರ್ ಕಾಣದ ಸರ್ವೀಸ್ ರಸ್ತೆ; ಬಾಯ್ತೆರೆದು ಕುಳಿತ ಗುಂಡಿಗಳು, ಜೀವ ಪಣಕ್ಕಿಟ್ಟು ಸಂಚಾರ
Follow us
| Updated By: ಆಯೇಷಾ ಬಾನು

Updated on: Mar 31, 2022 | 6:11 PM

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆಗಳನ್ನು ಆಧುನೀಕರಣಗೊಳಿಸಲು ಕೋಟಿ ಕೋಟಿ ಹಣ ವ್ಯಯ ಮಾಡಲಾಗುತ್ತಿದೆ. ಆದ್ರೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓರ್ ಇಳಿದ ತಕ್ಷಣ ಸಿಗುವ ಸರ್ವೀಸ್ ರಸ್ತೆ ವ್ಯವಸ್ಥೆ ತೀರ ಹಾಳಾಗಿದೆ. ಅನಂತನಗರ ಕಡೆಯಿಂದ ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಪ್ರವೇಶದಲ್ಲಿ ಕಂದಕದಂತಹ ಗುಂಡಿಗಳು ನಿರ್ಮಾಣವಾಗಿದ್ದು ಯಮನಂತೆ ಬಾಯ್ತೆರೆದು ಕುಳಿತಿವೆ.

ಈ ರಸ್ತೆಯಲ್ಲಿ ಒಂದು ವಾಹನ ಹೋಗಬೇಕಾದ್ರು ಹರಸಾಹಸ ಪಡಬೇಕು. ಬೆಳಿಗ್ಗೆ ಹಾಗೂ ಸಂಜೆ ವೇಳೆ ರಸ್ತೆ ಗುಂಡಿಗಳಿಂದಾಗಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಿರ್ಮಾಣವಾಗಿಬಿಡುತ್ತದೆ. ಒಂದು ವಾಹನ ಸಿಕ್ಕಿ ಹಾಕಿಕೊಂಡ್ರೂ ಇಡೀ ಹೈವೇ ರಸ್ತೆ ಜಾಮ್ ಆಗಿಬಿಡುತ್ತದೆ. ಕೆಟ್ಟ ರಸ್ತೆಯಿಂದಾಗಿ ಪ್ರತಿದಿನ ಐದಾರು ಅಪಘಾತಗಳು ಸಂಭವಿಸುತ್ತಿವೆ.

ಎಲೆಕ್ಟ್ರಾನಿಕ್ 2ನೇ ಹಂತಕ್ಕೆ ಈ ರಸ್ತೆ ಕನೆಕ್ಟ್ ಆಗುತ್ತೆ. ಹೆಬ್ಬಗೋಡಿ ನಗರಸಭೆ, ಅನಂತನಗರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಐಟಿ‌ ಬಿಟಿ ಉದ್ಯೋಗಿಗಳು, ಲಕ್ಷಾಂತರ ವಿದ್ಯಾರ್ಥಿಗಳು ಈ ರಸ್ತೆಯನ್ನು ಬಳಸುತ್ತಾರೆ. ಟಾರ್ ಕಿತ್ತು ಹೋಗಿ ರಸ್ತೆಯಲ್ಲಿ ಕಂದಕ‌ ನಿರ್ಮಾಣ ಆಗಿರೋದ್ರಿಂದ ಜೀವವನ್ನು ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ಇದೆ. 2015 ರಿಂದ 2022ರವರೆಗೆ ಒಟ್ಟು‌ 500ಕ್ಕೂ ಹೆಚ್ವು ಅಪಘಾತಗಳು ಸಂಭವಿಸಿವೆ. ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ವ್ಯವಸ್ಥೆ ಇದ್ದರೂ ಇದುವರೆಗೂ ಯಾವ ಅಧಿಕಾರಿಯೂ ಈ ಬಗ್ಗೆ ತೆಲೆ ಕಡೆಸಿಕೊಂಡಿಲ್ಲ. ಹೆಬ್ಬಗೋಡಿ ನಗರ ಸಭೆ, ಶಾಸಕ ಶಿವಣ್ಣ, ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಮಾಹಿತಿಯನ್ನೂ ಪಡೆದಿಲ್ಲ. ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನ ಸವಾರರು ಕಳಪೆ ರಸ್ತೆಗಳಿಂದ ಪ್ರಾಣ ಹಾನಿಯಾದರೂ ಯಾರೊಬ್ಬರೂ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Bengaluru: ನನ್ನ ಗರ್ಲ್​ಫ್ರೆಂಡ್​ಗಾಗಿ ಆಟೋ ಓಡಿಸುತ್ತೇನೆ; ಬೆಂಗಳೂರಿನ 74 ವರ್ಷದ ನಿವೃತ್ತ ಇಂಗ್ಲಿಷ್ ಲೆಕ್ಚರರ್ ಕತೆಯಿದು

ಕುಮಾರಸ್ವಾಮಿಯವರ ಹಾಗೆ ನಾವು ಗಂಡಸ್ತನ ತೋರಲು ಸಾಧ್ಯವಿಲ್ಲ, ಅವರ ಗಂಡಸ್ತನದ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ: ಸಿಟಿ ರವಿ