AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬಸ್​ ನಿಲ್ದಾಣದಲ್ಲಿ ಸ್ನೇಹಿತನಿಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಗುದ್ದಿದ BMW ಕಾರು

ಮಂಜುನಾಥ್ ಅವರು ತಮ್ಮ ಸ್ನೇಹಿತ ಬಸವರಾಜ್​ಗಾಗಿ ತೋಟದಗುಡ್ಡದಹಳ್ಳಿ ಬಸ್ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಈ ವೇಳೆ ಧೀಡಿರ್​​ ಬಂದು ಬೈಕ್​​ ಸವಾರನಿಗೆ BMW ಕಾರು ಗುದ್ದಿದೆ. ನಿಯಂತ್ರಣ ತಪ್ಪಿದ ಕಾರು ವಿದ್ಯುತ್​​ ಕಂಬಕ್ಕೆ, ಬಸ್​​ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ತಿರುಪತಿಯಿಂದ ಮನೆಗೆ ಬರುವಾಗ ಘಟನೆ ನಡೆದಿದ್ದು ಕಾರಿನಲ್ಲಿ ಲಡ್ಡು ಪತ್ತೆಯಾಗಿದೆ.

ಬೆಂಗಳೂರು: ಬಸ್​ ನಿಲ್ದಾಣದಲ್ಲಿ ಸ್ನೇಹಿತನಿಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಗುದ್ದಿದ BMW ಕಾರು
BMW ಕಾರು ಅಪಘಾತ
ಬಿ ಮೂರ್ತಿ, ನೆಲಮಂಗಲ
| Edited By: ಆಯೇಷಾ ಬಾನು|

Updated on:Nov 01, 2023 | 1:53 PM

Share

ನೆಲಮಂಗಲ, ನ.01: ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಬಸ್ ನಿಲ್ದಾಣದಲ್ಲಿ ಬೈಕ್ (Bike)​ ನಿಲ್ಲಿಸಿಕೊಂಡಿದ್ದವನಿಗೆ BMW ಕಾರು ಡಿಕ್ಕಿ ಹೊಡೆದಿದೆ (BMW Car Accident). ಈ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಂದ್ರಹಳ್ಳಿಯ ಮಂಜುನಾಥ್​​(37)ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ. ಸ್ನೇಹಿತ ಬಸವರಾಜ್​ಗಾಗಿ ಬಸ್​​ ನಿಲ್ದಾಣದಲ್ಲಿ ಕಾಯ್ತಿದ್ದ ವೇಳೆ ಘಟನೆ ನಡೆದಿದೆ.

ಮಂಜುನಾಥ್ ಅವರು ತಮ್ಮ ಸ್ನೇಹಿತ ಬಸವರಾಜ್​ಗಾಗಿ ತೋಟದಗುಡ್ಡದಹಳ್ಳಿ ಬಸ್ ನಿಲ್ದಾಣದಲ್ಲಿ ಬೈಕ್​ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಈ ವೇಳೆ ಧೀಡಿರ್​​ ಬಂದು ಬೈಕ್​​ ಸವಾರನಿಗೆ BMW ಕಾರು ಗುದ್ದಿದೆ. ನಿಯಂತ್ರಣ ತಪ್ಪಿದ ಕಾರು ವಿದ್ಯುತ್​​ ಕಂಬಕ್ಕೆ, ಬಸ್​​ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯಾದ ರಭಸಕ್ಕೆ KA19-MC7708 BMW ಕಾರು ನಜ್ಜು ಗುಜ್ಜಾಗಿದೆ. ಡಿಕ್ಕಿ ಪರಿಣಾಮ ಏರ್​​ ಬ್ಯಾಗ್​​ ಓಪನ್ ಆಗಿದ್ದು ಕಾರಿನಲ್ಲಿದ್ದ ನಾಲ್ವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಪರಾರಿಯಾದ ಕಾರಿನ ಚಾಲಕ, ಮಾಲೀಕನಿಗೆ ಪೊಲೀಸರು ಹುಡುಕಾಡುತ್ತಿದ್ದಾರೆ. ತಿರುಪತಿಯಿಂದ ಮನೆಗೆ ಬರುವಾಗ ಘಟನೆ ನಡೆದಿದ್ದು ಕಾರಿನಲ್ಲಿ ಲಡ್ಡು ಪತ್ತೆಯಾಗಿದೆ. ಅತೀವೇಗವಾಗಿ ಬಂದು ಡಿಕ್ಕಿಹೊಡೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accidents: ಭಾರತದಲ್ಲಿ ಕೊರೊನಾ ಪೂರ್ವದಲ್ಲಿದ್ದ ಸಂಖ್ಯೆಗೆ ಬಂದ ರಸ್ತೆ ಅಪಘಾತ ಪ್ರಕರಣಗಳು

ಕ್ಯಾಂಟರ್​ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು

ನಿಂತಿದ್ದ ಕ್ಯಾಂಟರ್​ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ದೇವನಹಳ್ಳಿ ತಾಲೂಕಿನ ವಿಜಯಪುರ ಹೊರವಲಯದ ಹಾರ್ಡಿಪುರ ಬಳಿ ಅಪಘಾತ ಸಂಭವಿಸಿದೆ. ತಮಿಳುನಾಡು ಮೂಲದ ವಿನೋದ್ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಮಂಜುನಾಥ್ ಗೆ ಗಾಯಗೊಂಡಿದ್ದಾನೆ. ರಾತ್ರಿ‌ ಎಲ್ಲೆಂದರಲ್ಲಿ ಲಾರಿಗಳನ್ನ ನಿಲ್ಲಿಸೋದ್ರಿಂದ ಅಪಘಾತ ಸಂಭವಿಸಿದೆ ಅಂತ ಆರೋಪಿಸಲಾಗಿದೆ.

ಫುಟ್​ಪಾತ್ ಮೇಲೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಕಾರು ಪುಟ್ಪಾತ್ ಮೇಲೆ ನುಗ್ಗಿರೋ ಘಟನೆ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಮೆಣಸೆ ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ 9 ಬೈಕ್​ಗಳು ಜಖಂ ಆಗಿದ್ದು, ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಮಾರುತಿ ಆಲ್ಟೊ ಕಾರು ಗಣೇಶ್ ಹೆಗಡೆ ಎಂಬಾತನಿಗೆ ಸೇರಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:22 pm, Wed, 1 November 23

Follow Us
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More