ದೇವನಹಳ್ಳಿ: ಮದುವೆಯಾಗಲು(Marriage) ನಿರಾಕರಿಸಿದ ಹಿನ್ನೆಲೆ ಪಾಗಲ್ ಪ್ರೇಮಿ(Boy Friend) ತನ್ನ ಪ್ರಿಯತಮೆ(Girl Friend) ಮನೆಗೆ ನುಗ್ಗಿ ಕತ್ತು, ಭುಜಕ್ಕೆ ಚಾಕು ಇರಿದ(Knife Attack) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಐಬಿ ವೃತ್ತದ ಬಳಿ ನಡೆದಿದೆ. ಗಂಭೀರವಾಗಿ ಗಾಯ ಗೊಂಡಿರುವ ಯುವತಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೀರಿಶ್(31) ಹಲ್ಲೆ ಮಾಡಿದ ಆರೋಪಿ. ಪ್ರಭಾವತಿ(28) ಚಾಕು ಇರಿತಕ್ಕೆ ಒಳಗಾದ ಯುವತಿ.
ಇಂದು ಬೆಳಗ್ಗೆ ಏಕಾಏಕಿ ಮನೆಗೆ ಬಂದ ಗೀರಿಶ್ ಎರಡು ಚಾಕುವಿನಿಂದ ಪ್ರಭಾವತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಚಾಕು ಇರಿದು ಬಳಿಕ ಎಸ್ಕೇಪ್ ಆಗಿದ್ದಾನೆ. ದೊಡ್ಡಬಳ್ಳಾಪುರದ ಯೋಗಿ ನಾರಾಯಣಪ್ಪ ಬಡಾವಣೆಯಲ್ಲಿ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಭಾವತಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ಗಿರೀಶ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹಿನ್ನಲೆ ಇಬ್ಬರಿಗೂ ಸ್ನೇಹವಾಗಿ ಬಳಿಕ ಪ್ರೇಮಾಂಕುರವಾಗಿದೆ. ಇಬ್ಬರ ಪ್ರೀತಿಯ ಬಗ್ಗೆ ಮನೆಯಲ್ಲಿ ಗೊತ್ತಾಗಿ ಎರಡು ಕುಟುಂಬಗಳು ಒಪ್ಪಿಗೆ ನೀಡಿದ್ದು ಒಪ್ಪಿಗೆ ಮೇರೆಗೆ ಮದುವೆ ಮಾತುಕತೆ ನಡದಿತ್ತು. ಆದ್ರೆ ಕೆಲ ದಿನಗಳ ಹಿಂದೆ ಹುಡುಗಿ ಮನೆಯವರು ಮದುವೆ ಮಾಡಲು ನಿರಾಕರಿಸಿದ್ದಾರೆ. ಮನನೊಂದ ಹುಡುಗ ಏಕಾಏಕಿ ಮನೆಗೆ ಬಂದು ಪ್ರಭಾವತಿಯ ಕತ್ತು, ಹೊಟ್ಟೆ, ಬೆನ್ನಿಗೆ ಚಾಕು ಇರಿದಿದ್ದಾನೆ. ದೊಡ್ಡಬಳ್ಳಾಪುರ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾಂಗ್ ಹಿಡಿದು ಮನೆ ನುಗ್ಗಿದ ಪ್ರಿಯಕರ
ಇನ್ನು ಇದೇ ರೀತಿ ಮತ್ತೊಂದು ಘಟನೆ ಬೆಂಗಳೂರಿನ ಕೆ.ಆರ್.ಪುರಂ ಮಸೀದಿ ರಸ್ತೆಯಲ್ಲಿ ನಡೆದಿದೆ. ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಯುವಕ ದಾಂಧಲೆ ನಡೆಸಿದ್ದಾನೆ. ಲಾಂಗ್ ಹಿಡಿದು ಮನೆ ಬಳಿಯೇ ಯುವತಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ನಾಲ್ಕು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಶಾರುಖ್, ಶಬ್ನಂ ಎಂಬಾಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಮನೆ ಗೇಟ್ ಲಾಕ್ ಮಾಡಿಕೊಂಡಿದ್ದು ಭಾರಿ ಅನಾಹುತ ತಪ್ಪಿದೆ. ಆರೋಪಿ ಶಾರುಖ್ ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿಕೊಂಡಿದ್ದು ಮನಬಂದಂತೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳ ಮೇಲೂ ಲಾಂಗ್ ಬೀಸಿದ್ದಾನೆ. ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಯುವತಿ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಶಾರುಖ್ನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅಬ್ಬಾ! ಕೊನೆಗೂ ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಪಿ ಹಸಿರು ನಿಶಾನೆ, ತಗ್ಗಿದ ಕೊರೊನಾ ಅಬ್ಬರ
Published On - 1:04 pm, Fri, 11 February 22