ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ಬಚ್ಚೇಗೌಡ ನಡುವೆ ಸಂಘರ್ಷ ನಡೆಯಬಾರದಿತ್ತು: ಸಚಿವ ಸುಧಾಕರ

ಸರ್ಕಾರದ ಪ್ರತಿನಿಧಿಯಾಗಿ ಎಂಟಿಬಿ ನಾಗರಾಜ್ ಹೋಗಿದ್ದರು. ಸರ್ಕಾರದ ಪ್ರತಿನಿಧಿಗೆ ಶಾಸಕ ಶರತ್‌ ಗೌರವ ಕೊಡಬೇಕಿತ್ತು ಎಂದು ಸಚಿವ ಡಾ.ಕೆ.ಸುಧಾಕರ ಹೇಳಿದರು.

ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ಬಚ್ಚೇಗೌಡ ನಡುವೆ ಸಂಘರ್ಷ ನಡೆಯಬಾರದಿತ್ತು: ಸಚಿವ ಸುಧಾಕರ
ಸಚಿವರಾದ ಎಂಟಿಬಿ ನಾಗರಾಜ್, ಡಾ.ಕೆ.ಸುಧಾಕರ ಮತ್ತು ಶಾಸಕ ಶರತ್ ಬಚ್ಚೇಗೌಡ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 11, 2022 | 9:09 PM

ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್‌ (MTB Nagaraj) ಮತ್ತು ಶಾಸಕ ಶರತ್ ಬಚ್ಚೇಗೌಡ ನಡುವೆ ಸಣ್ಣ ಕಾರಣವೊಂದಕ್ಕೆ ನಡೆದ ಮಾತಿನ ಚಕಮಕಿಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ ಶುಕ್ರವಾರ ದೇವನಹಳ್ಳಿ ತಾಲ್ಲೂಕು ವೆಂಕಟಗಿರಿಕೋಟೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಇಂಥ ಘಟನೆ ಆಗಬಾರದಿತ್ತು. ಅಧಿಕಾರ ಯಾರಿಗೂ ಶಾಶ್ವತವಲ್ಲ. ನಾನು ಕೆಲ ಕಾರಣಗಳಿಂದ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಹೀಗಾಗಿ ಸರ್ಕಾರದ ಪ್ರತಿನಿಧಿಯಾಗಿ ಎಂಟಿಬಿ ನಾಗರಾಜ್ ಹೋಗಿದ್ದರು. ಸರ್ಕಾರದ ಪ್ರತಿನಿಧಿಗೆ ಶಾಸಕ ಶರತ್‌ ಗೌರವ ಕೊಡಬೇಕಿತ್ತು. ಮತ್ತೆ ಈ ರೀತಿ ಆಗಬಾರದೆಂದು ಇಬ್ಬರಿಗೂ ಸಲಹೆ ನೀಡಿರುವೆ ಎಂದು ತಿಳಿಸಿದರು. ಎಂಟಿಬಿ‌ ನಾಗರಾಜ್ ಅವರು ಹಿರಿಯ ನಾಯಕರು, ಸರ್ಕಾರದ ಸಚಿವರಾಗಿದ್ದಾರೆ. ಶರತ್ ಅವರು ಹೊಸಕೋಟೆ ಶಾಸಕರಾಗಿದ್ದಾರೆ ಅವರು ಅಧ್ಯಕ್ಷತೆ ವಹಿಸಬೇಕು. ಹಿರಿಯ ಸಚಿವ ಹಾಗೂ ಕಿರಿಯ ಶಾಸಕ ಅನ್ಯೋನ್ಯವಾಗಿ ನಡೆದುಕೊಳ್ಳಬೇಕಾಗಿತ್ತು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ಸರ್ಕಾರದ ಪ್ರತಿನಿಧಿಗೆ ಗೌರವ ಕೊಡಬೇಕಾಗುತ್ತೆ. ಯಾವ ರೀತಿ ಮುಂದೆ ಕೆಲಸ ಮಾಡಿಕೊಂಡು ಹೋಗಬೇಕು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಜೊತೆಗೆ ಇದ್ದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

ಕರ್ನಾಟಕದ ಹಿಜಾಬ್ ವಿವಾದ ಕುರಿತು ಪ್ರಸ್ತಾಪಿಸಿದ ಅವರು, ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ಬದ್ಧರಾಗಿರಬೇಕು. ಯಾರ ಭಾವನೆಗಳಿಗೂ ಧಕ್ಕೆ ತರಬಾರದು. ಶಿಕ್ಷಣ ಸಂಸ್ಥೆಗಳಲ್ಲಿ ಕಾನೂನು ಮತ್ತು ಶಿಷ್ಟಾಚಾರ ಅನುಷ್ಠಾನವಾಗಬೇಕು. ಸಮವಸ್ತ್ರ ಎಂದರೆ ಎಲ್ಲರೂ ಸಮಾನರು ಎಂದು ಅರ್ಥ. ಶಾಲೆಯಲ್ಲಿ ಎಲ್ಲ ವರ್ಗ ಮತ್ತು ಜಾತಿಗಳಿಗೆ ಸೇರಿದವರು ಇರುತ್ತಾರೆ. ಹಾಗೆಂದು ಶ್ರೀಮಂತರು ಏನೆಂದರೆ ಅದು ಧರಿಸಲು ಆಗುವುದಿಲ್ಲ. ಸಮವಸ್ತ್ರ ಸಂಹಿತೆ ಎಲ್ಲ ಶಾಲೆಗಳಲ್ಲಿ ಅನುಷ್ಠಾನವಾಗಬೇಕು. ಪಕ್ಷಾತೀತ, ಜಾತ್ಯತೀತವಾಗಿ ಎಲ್ಲ ಧರ್ಮಗಳು ಸಮವಸ್ತ್ರ ಒಪ್ಪಬೇಕು ಎಂದು ಸಲಹೆ ಮಾಡಿದರು.

ಹಿಜಾಬ್ ವಿಚಾರ ಬಳಸಿ ರಾಜಕಾರಣ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಾಹಿತಿ ಕೊರತೆಯಿದೆ. ಹೀಗಾಗಿಯೇ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಯಾರ ಮನಸ್ಸಿಗೂ ಘಾಸಿಯಾಗದಂತೆ ನಾವು ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್-ಸಬ್ ಕಾ ವಿಶ್ವಾಸ್ ಎಂದಿದ್ದಾರೆ. ಈ ಆಶಯವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಎಂಟಿಬಿ ನಾಗರಾಜ್-ಶರತ್ ಬಚ್ಚೇಗೌಡ ಮಾತಿನ ಚಕಮಕಿ

ಹೊಸಕೋಟೆಯಲ್ಲಿ ಗುರುವಾರ (ಫೆ.10) ಶಾಸಕ ಶರತ್ ಬಚ್ಚೇಗೌಡ ಮತ್ತು ಸಚಿವ ಎಂಟಿಬಿ ನಾಗರಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ವೇಳೆ ಇಬ್ಬರ ನಡವಣ ವೈಮನಸ್ಯ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಇಬ್ಬರನ್ನೂ ಆಹ್ವಾನಿಸಲಾಗಿತ್ತು. ಉದ್ಘಾಟನೆ ವೇಳೆ ಶಾಸಕ ಶರತ್ ಬಚ್ಚೇಗೌಡ, ಸಚಿವ ಎಂಟಿಬಿ ನಾಗರಾಜ್ ಅವರನ್ನು ಓವರ್‌ಟೇಕ್ ಮಾಡಿ ಸಚಿವರಿಗಿಂತ ಮೊದಲೇ ಟೇಪ್ ಕತ್ತರಿಸಿ ಒಳನುಗ್ಗಲು ಯತ್ನಿಸಿದರು. ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ಎಚ್ಚರಿಸಿದರು. ಆಗ ಸಚಿವರನ್ನು ಬದಿಗೆ ತಳ್ಳಿ ಶಾಸಕ ಶರತ್ ಒಳ‌ನುಗ್ಗಿದರು. ಆಗ ಪಕ್ಕಕ್ಕೆ ಎಡವಿದ ಎಂಟಿಬಿ ನಾಗರಾಜ್, ಕ್ಷೇತ್ರದಲ್ಲಿ ತಂದೆ-ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಸಿಟ್ಟಾದರು. ಅಪ್ಪನ ಬಗ್ಗೆ ಮಾತಾಡಬೇಡಿ, ಕೈ ತೋರಿಸಬೇಡಿ ಎಂದು ಎಂಟಿಬಿಗೆ ಶಾಸಕ ಶರತ್ ಎಚ್ಚರಿಕೆ ಕೊಟ್ಟರು. ಈ‌ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆಯಿತು. ಸ್ಥಳದಲ್ಲಿದ್ದ ಪೊಲೀಸರು, ಮುಖಂಡರು, ಅಧಿಕಾರಿಗಳು ಇಬ್ಬರನ್ನೂ ಸಮಾಧಾನಪಡಿಸಿದರು.

ಇದನ್ನೂ ಓದಿ: ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸ್ತಾರೆ; ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ ಇದನ್ನೂ ಓದಿ: ಕಟ್ಟಡ ಉದ್ಘಾಟನೆ ವೇಳೆ ಟೇಪ್ ಕಟ್ ಮಾಡುವ ವಿಚಾರಕ್ಕೆ ಗಲಾಟೆ: ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ