ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸ್ತಾರೆ; ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ

ನಾವು ಕೊಡುವ ಕಾಮಗಾರಿಗಳನ್ನೆಲ್ಲ ಇವರೇ ಉದ್ಘಾಟಿಸುತ್ತಿದ್ದಾರೆ. ನಾವು ಮಾಡಿದರೆ ಮಾತ್ರ ಪ್ರೋಟೋಕಾಲ್ ಅಂತಾರೆ. ಇವರು ಮಾಡಿದ್ರೆ ಪ್ರೋಟೋಕಾಲ್ ಬರಲ್ವ? ಇವರು ಹಿಂದೆ ಹೇಗೆ ಆಡಳಿತ ಮಾಡಿದ್ದಾರೆ ಜನಕ್ಕೆ ಗೊತ್ತು ಎಂದು ಎಂಟಿಬಿ ನಾಗರಾಜ್ ಟೀಕಿಸಿದ್ದಾರೆ.

ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸ್ತಾರೆ; ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ
ಎಂಟಿಬಿ ನಾಗರಾಜ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 10, 2022 | 6:07 PM

ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್ (MTB Nagaraj), ಶಾಸಕ ಶರತ್ ಬಚ್ಚೇಗೌಡರ ಮಧ್ಯೆ ವಾಕ್ಸಮರ ನಡೆದಿದ್ದು, ಈ ಗಲಾಟೆ ಕುರಿತು‌ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಉದ್ಘಾಟನೆಗೆ ಈಶ್ವರಪ್ಪ, ಸುಧಾಕರ್ ಬರದಿದ್ದಕ್ಕೆ ನಾನು ಹೋಗಿದ್ದೆ. ಸರ್ಕಾರದ ಪರವಾಗಿ ನಾನು ಉದ್ಘಾಟಕನಾಗಿ ಹೋಗಿದ್ದೆ. ಈ‌ ಜಿಲ್ಲೆಯನ್ನು ನೋಡಲ್ ಜಿಲ್ಲೆಯಾಗಿ ಪಡೆದುಕೊಂಡಿದ್ದೇನೆ. ನಾವು ಕೊಡುವ ಕಾಮಗಾರಿಗಳನ್ನೆಲ್ಲ ಇವರೇ ಉದ್ಘಾಟಿಸುತ್ತಿದ್ದಾರೆ. ನಾವು ಮಾಡಿದರೆ ಮಾತ್ರ ಪ್ರೋಟೋಕಾಲ್ ಅಂತಾರೆ. ಇವರು ಮಾಡಿದ್ರೆ ಪ್ರೋಟೋಕಾಲ್ ಬರಲ್ವ? ಇವರು ಹಿಂದೆ ಹೇಗೆ ಆಡಳಿತ ಮಾಡಿದ್ದಾರೆ ಜನಕ್ಕೆ ಗೊತ್ತು. ಇದೀಗ ಮತ್ತೆ ಅದನ್ನೇ ಮುಂದುವರೆಸಿದ್ದಾರೆ ಎಂದು ಟೀಕಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಬುದ್ಧಿ ಕಲಿಸುತ್ತಾರೆ. ಟೇಪ್ ಕಟ್ ಮಾಡುವ ವಿಚಾರಕ್ಕೆ ಸಚಿವ ಶಾಸಕರ ಗಲಾಟೆ ನಡೆದ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಕಿಡಿ ಕಾರಿದ್ದಾರೆ.

ಹಾಗೇ ಸಚಿವ ಎಂಟಿಬಿ ನಾಗರಾಜ್, ಶಾಸಕ ಶರತ್ ಬಚ್ಚೇಗೌಡ ಗಲಾಟೆ ವಿಚಾರವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರನ್ನು ಗೌರವದಿಂದಲೇ ಕರೆದು ಮಾತಾಡಿಸಿದ್ದೇನೆ. ಎಡಿಸಿ ಆಹ್ವಾನ ಪತ್ರಿಕೆ ಪ್ರಕಾರ ಕಾರ್ಯಕ್ರಮ ನಡೆಸಿದ್ದೇವೆ. ಎಲ್ಲ ಮಹಾರಾಜರೇ ಬಂದು ಮಾಡಲಿ ಅಂದರೆ ನಡೆಯುವುದಿಲ್ಲ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸದವರ ಬಗ್ಗೆ ವೈಯಕ್ತಿಕ ಆಪಾದನೆ ಮಾಡಬಾರದು. ಯಾಕೆ ಬಚ್ಚೇಗೌಡರ ಬಗ್ಗೆ ಆಪಾದನೆ ಮಾಡಬೇಕು? ನಾನು ಅವರನ್ನು ಗೌರವದಿಂದಲೇ ಕರೆದು ಮಾತನಾಡಿಸಿದ್ದೇನೆ. ಶೂ ಹೊರಗಡೆ ಬಿಟ್ಟು ಒಳಗೆ ಬನ್ನಿ ಅಣ್ಣ ಅಂತಲೇ ಕರೆದು ಪಕ್ಕದಲ್ಲಿ ಕೂರಿಸಿಕೊಂಡೆ. ಕಾರ್ಯಕ್ರಮದ ಉದ್ಘಾಟನೆಗೆ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವ ಕೆ. ಸುಧಾಕರ್ ಕೂಡ ಬಂದಿದ್ದರು. ನಾನು ಅಧ್ಯಕ್ಷತೆ ವಹಿಸಿದ್ದೆ. ಸಚಿವ ಎಂಟಿಬಿ ನಾಗರಾಜ್ ಮುಖ್ಯ ಅತಿಥಿಯಾಗಿದ್ದರು. ಎಡಿಸಿಯವರ ಆಹ್ವಾನ ಪತ್ರಿಕೆಯ‌ಂತೆ ನಾವು ಕಾರ್ಯಕ್ರಮ ನಡೆಸಿದ್ದೇವೆ. ಕೊನೆ ಕ್ಷಣದಲ್ಲಿ ಕೆ.ಎಸ್. ಈಶ್ವರಪ್ಪ, ಡಾ. ಕೆ. ಸುಧಾಕರ್ ಬರುವುದಿಲ್ಲ ಅಂತ ಹೇಳಿದ್ದರು. ಹೀಗಾಗಿ, ಅಧ್ಯಕ್ಷರ ಮೂಲಕ ಉದ್ಘಾಟನೆ ಮಾಡಿದ್ದೇವೆ. ವಿಕೇಂದ್ರಿಕರಣ, ವಿಕೇಂದ್ರಿಕರಣ ಅಂತ ಮಹಾರಾಜರೇ ಬಂದು ಎಲ್ಲವನ್ನೂ ಮಾಡಲಿ ಅಂದ್ರೆ ನಡೆಯಲ್ಲ. ಎಲ್ಲಾ ಏಕಾಧಿಪತ್ಯ ನಡೆಸಿಕೊಂಡು ಇದೀಗ ವಿಕೇಂದ್ರಿಕರಣ ಅಂತ ಪದ ಬಳಸಿದ್ರೆ ಆಗಲ್ಲ. ಎಲ್ಲೂ ಸಹ ವಿಕೇಂದ್ರಿಕರಣ ಇಲ್ಲ ಅಂತ ಸಚಿವ ಎಂಟಿಬಿ ನಾಗರಾಜ್ ವಿರುದ್ದ ಶಾಸಕ ಶರತ್ ಬಚ್ಚೇಗೌಡ ವಾಗ್ದಾಳಿ ನಡೆಸಿದ್ದಾರೆ.

ಇಂದು ಮುತ್ಸಂದ್ರ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ಇಬ್ಬರನ್ನೂ ಆಹ್ವಾನಿಸಲಾಗಿತ್ತು. ಮುತ್ಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ವೇಳೆ ಶಾಸಕ ಶರತ್ ಬಚ್ಚೇಗೌಡ, ಸಚಿವ ಎಂಟಿಬಿ ನಾಗರಾಜ್ ಅವರನ್ನು ಓವರ್‌ಟೇಕ್ ಮಾಡಿ ಸಚಿವರಿಗಿಂತ ಮೊದಲೇ ಟೇಪ್ ಕತ್ತರಿಸಿ ಒಳನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ವಾರ್ನ್ ಮಾಡಿದ್ದಾರೆ. ಆಗ ಸಚಿವ ಎಂಟಿಬಿಯನ್ನು ಒಂದುಕಡೆ ತಳ್ಳಿ ಶಾಸಕ ಶರತ್ ಒಳ‌ನುಗ್ಗಿದ್ದಾರೆ. ಪಕ್ಕಕ್ಕೆ ಎಡವಿದ ಎಂಟಿಬಿ ನಾಗರಾಜ್, ತಂದೆ, ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಗರಂ ಆಗಿದ್ದಾರೆ. ಗರಂ ನಡುವೆ ಕೈ ಬೆರಳು ತೋರಿಸಿ ಮಾತನಾಡದಂತೆ ಎಂಟಿಬಿಗೆ ಶಾಸಕ ಶರತ್ ಎಚ್ಚರಿಕೆ ಕೊಟ್ಟಿದ್ದಾರೆ. ಈ‌ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿದೆ.

ಇದನ್ನೂ ಓದಿ: ಹೇ ನಾಗರಾಜ್, ಇಮ್ಮಿಡಿಯಟ್ ಆರ್ಡರ್ ಮಾಡು: ಸಚಿವ ಎಂಟಿಬಿ ನಾಗರಾಜ್ ಜೊತೆ ಸಿದ್ದರಾಮಯ್ಯ ಖಡಕ್ ಮಾತು

ಕಟ್ಟಡ ಉದ್ಘಾಟನೆ ವೇಳೆ ಟೇಪ್ ಕಟ್ ಮಾಡುವ ವಿಚಾರಕ್ಕೆ ಗಲಾಟೆ: ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ