ಅಬ್ಬಾ! ಕೊನೆಗೂ ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಪಿ ಹಸಿರು ನಿಶಾನೆ, ತಗ್ಗಿದ ಕೊರೊನಾ ಅಬ್ಬರ

ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ(Bengaluru Karaga) ಈ ಬಾರಿ ಬಿಬಿಎಂಪಿ(BBMP) ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೆಂಗಳೂರು ಕರಗ ಉತ್ಸವಕ್ಕೆ ಪಾಲಿಕೆ ಷರತ್ತು ಬದ್ಧ ಅನುಮತಿ ನೀಡಿದೆ. ಇದೆ ಮಾರ್ಚ್ 8 ರಂದು ದ್ರೌಪದಮ್ಮ ಕರಗ ಉತ್ಸವ ನಡೆಯಲಿದೆ.

ಅಬ್ಬಾ! ಕೊನೆಗೂ ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಪಿ ಹಸಿರು ನಿಶಾನೆ, ತಗ್ಗಿದ ಕೊರೊನಾ ಅಬ್ಬರ
ಬೆಂಗಳೂರು ಕರಗ ಉತ್ಸವ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Feb 11, 2022 | 12:18 PM

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ(Bengaluru Karaga) ಈ ಬಾರಿ ಬಿಬಿಎಂಪಿ(BBMP) ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಹಾಮಾರಿ ಕೊರೊನಾ(Coronavirus)ದಿಂದಾಗಿ ಕಳೆದ ಎರಡು ವರ್ಷದಿಂದ ಬೆಂಗಳೂರು ಕರಗ ಉತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅನುಮತಿ ಕೊಡಲಾಗಿತ್ತು. ಸದ್ಯ ಕೊರೊನಾ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸಿದ್ದು ಬೆಂಗಳೂರು ಕರಗ ಉತ್ಸವಕ್ಕೆ ಬಿಬಿಎಂಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಎರಡು ವರ್ಷಗಳ ಬಳಿಕ ಮತ್ತೆ ದ್ರೌಪದಮ್ಮ ದೇವಿಯ ಸಂಚಾರ ರಸ್ತೆಗಳಲ್ಲಿ ಸಾಗಲಿದೆ.

ಬೆಂಗಳೂರು ಕರಗ ಉತ್ಸವಕ್ಕೆ ಪಾಲಿಕೆ ಷರತ್ತು ಬದ್ಧ ಅನುಮತಿ ನೀಡಿದೆ. ಇದೆ ಮಾರ್ಚ್ 8 ರಂದು ದ್ರೌಪದಮ್ಮ ಕರಗ ಉತ್ಸವ ನಡೆಯಲಿದೆ. ಮಹಾಮಾರಿ ಕೊರೊನಾ ಕಡಿಮೆಯಾಗಿದೆ. ಈ ಬಾರಿಯಾದ್ರು ಉತ್ಸವಕ್ಕೆ ಅನುಮತಿ ನೀಡುವಂತೆ ಕರಗ ಉತ್ಸವ ಸಮಿತಿಯ ಅಧ್ಯಕ್ಷ ಪಿ, ಅರ್ ರಮೇಶ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ಪತ್ರ ಬರೆದಿದ್ದರು. ಸದ್ಯ ಇವರ ಮನವಿಗೆ ಸ್ಪಂದಿಸಿದ ಪಾಲಿಕೆ ಕರಗ ಸಮಿತಿಗೆ ಈಗಾಗ್ಲೆ ಮೌಖಿಕವಾಗಿ ಒಪ್ಪಿಗೆ ನೀಡಿದೆ. ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಸುಮಾರು 800 ವರ್ಷಗಳ ಇತಿಹಾಸವಿರೋ ಕರಗ ಉತ್ಸವ ಬೆಂಗಳೂರಿನಲ್ಲಿ ಆಚರಿಸುವ ಐತಿಹಾಸಿಕ ದೊಡ್ಡ ಉತ್ಸವವಾಗಿದೆ. ಎರಡು ವರ್ಷಗಳ ಬಳಿಕ ಬೆಂಗಳೂರು ಕರಗ ಉತ್ಸವಕ್ಕೆ ಅನುಮತಿ ಸಿಕ್ಕಿದ್ದು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ವಿದೇಶದಿಂದಲು ಭಕ್ತರು ಉತ್ಸವಕ್ಕೆ ಬರುವ ಸಾಧ್ಯತೆ ಇದೆ. ಈ ಬಾರಿ ಕರಗ ಉತ್ಸವಕ್ಕೆ ಬಿಬಿಎಂಪಿಯಿಂದ ಒಂದೂವರೆ ಕೋಟಿ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ. ಕರಗ ಜಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗಿ ಆಗುವ ಸಾಧ್ಯತೆ ಇದೆ.

ಕರಗ ಉತ್ಸವಕ್ಕೆ ಸಿದ್ಧತೆ ಹೇಗಿದೆ? ಬಿಬಿಎಂಪಿ ಈಗಾಗ್ಲೆ ಮೌಖಿಕವಾಗಿ ಒಪ್ಪಿಗೆ ನೀಡಿದ್ದು ಸಿಲಿಕಾನ್ ಸಿಟಿಯ ತಿಗಳರ ಪೇಟೆಯಲ್ಲಿರೋ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಸ್ಥಾನದಲ್ಲಿ ಸಿದ್ಧತೆಗಳು ಶುರುವಾಗಿವೆ. ದೇವಸ್ಥಾನದ ಅಡಳಿತ ಮಂಡಳಿ ಉತ್ಸವಕ್ಕೆ ಸಿದ್ದತೆ ನಡೆಸುತ್ತಿದೆ. ದೇವಸ್ಥಾನದಲ್ಲಿ ಸ್ವಚ್ಚತೆ ಹಾಗೂ ಸುಣ್ಣ, ಬಣ್ಣ ಬಳಿಯಲಾಗುತ್ತಿದೆ. 7 ಬಾರಿ ಕರಗ ಹೊತ್ತ ಖ್ಯಾತಿ ಇರುವ ಜ್ನಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ: ಇಂಜಿನಿಯರ್​ಗಳು ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ; ಬಿಬಿಎಂಪಿ ನಿರ್ಮಿಸಿದ ರಸ್ತೆಗಳಲ್ಲಿ ಗುಂಡಿ: ಹೈಕೋರ್ಟ್ ತರಾಟೆ