Hijab Row: ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ? ತಜ್ಞರಿಂದ ಸಲಹೆ

ಅನಗತ್ಯವಾಗಿ ಇಂತಹ ವಿಡಿಯೋಗಳನ್ನು ವೈರಲ್ ಮಾಡ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಬಳಿ ಮೊಬೈಲ್​ ಬಳಕೆ ನಿಷೇಧಕ್ಕೆ ತಜ್ಞರಿಂದ ಸಲಹೆ ಕೇಳಿಬಂದಿದೆ.

Hijab Row: ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ? ತಜ್ಞರಿಂದ ಸಲಹೆ
ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧ? ತಜ್ಞರಿಂದ ಸಲಹೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 11, 2022 | 12:11 PM

ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಶಾಲು ಕದನದ (Hijab Row) ನಂತರ ಎಚ್ಚೆತ್ತ ರಾಜ್ಯ ಶಿಕ್ಷಣ ಇಲಾಖೆಯು ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧದ ಬಗ್ಗೆ ಆಲೋಚಿಸುತ್ತಿದೆ. ಸ್ಕೂಲ್ ಕಾಲೇಜಿನಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳನ್ನೂ ಮೊಬೈಲಿನಲ್ಲಿ ಚಿತ್ರೀಕರಣ ಮಾಡಿ (mobile videography ban), ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ.

ಅನಗತ್ಯವಾಗಿ ಇಂತಹ ವಿಡಿಯೋಗಳನ್ನು ವೈರಲ್ ಮಾಡ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಬಳಿ ಮೊಬೈಲ್​ ಬಳಕೆ ನಿಷೇಧಕ್ಕೆ ತಜ್ಞರಿಂದ ಸಲಹೆ ಕೇಳಿಬಂದಿದೆ. ಹಾಗಾಗಿ ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಇನ್ನು ಮುಂದೆ, ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳನ್ನ ಕೂಲಂಕಶವಾಗಿ ಪರಿಶೀಲಿಸುವಂತೆ ತಪಾಸಣೆ ಮಾಡಿ, ಶಾಲಾ ಕಾಲೇಜು ಒಳಗೆ ಬಿಡುವ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಮೊಬೈಲ್ ನಿಷೇಧಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ- ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ರಾಮನಗರ: ಈ ಮಧ್ಯೆ, ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಆದರೆ ಕಲಿಕೆಗೂ ಮೊಬೈಲ್ ಬೇಕಾಗುತ್ತದೆ. ಮೊಬೈಲ್ ನಿಂದ ಅನುಕೂಲ, ಅನಾನುಕೂಲ ಎರಡೂ ಇದೆ. ಯಾವ ರೀತಿ ಕ್ರಮವಹಿಸಬೇಕು ಪರಿಶೀಲನೆ ಮಾಡುತ್ತೇವೆ. ಕೆಲವು ಚಟುವಟಿಕೆಗಳ ಬಗ್ಗೆ ನಿರ್ಬಂಧ ಹೇರಲು ಮಕ್ಕಳಲ್ಲಿ ಜಾಗೃತಿ ತರಲಾಗುತ್ತದೆ. ಕಾಲೇಜುಗಳಲ್ಲಿ ಇದೀಗ ತರಗತಿಗಳನ್ನ ಟ್ಯಾಬ್ ಬೇಸ್ ಮಾಡಿದ್ದೇವೆ. ನಾವೇ ಟ್ಯಾಬ್ ಹಂಚಿಕೆ ಮಾಡುತ್ತಿದ್ದೇವೆ. ಕಲಿಕೆಗೆ ಇದು ಅವಶ್ಯಕತೆ ಇದೆ. ಗನಾರ್ಹವೆಂದರೆ 2018ರಲ್ಲಿಯೇ ಪಿಯುಸಿ ಮಂಡಳಿ ಈಗಾಗಲೇ ಮೊಬೈಲ್​ ಬಳಕೆ ಬ್ಯಾನ್​ ಮಾಡಿದೆ.

ಶಾಲಾ ಕಾಲೇಜುಗಳಲ್ಲಿ ಮುಂದುವರಿದ ಪೊಲೀಸ್ ಭದ್ರತೆ: ಹಿಜಾಬ್ ಹಾಗೂ ಕೇಸರಿ ವಿವಾದ ಪ್ರಕರಣದ ಸಮ್ಮುಖದಲ್ಲಿ ರಾಜ್ಯದ ಅನೇಕ ಶಾಲಾ ಕಾಲೇಜುಗಳಲ್ಲಿ ಭದ್ರತೆ ಮುಂದುವರೆಸಲಾಗಿದೆ. ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದರೂ ಪೊಲೀಸ್​ ಭದ್ರತೆ ಮುಂದುವರಿದಿದೆ. ಶಾಲಾ ಕಾಲೇಜು ಮುಂಭಾಗ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಯೂತ್​ ಕಾಂಗ್ರೆಸ್​ ಅರ್ಜಿ: ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ಗೆ ಯೂತ್​ ಕಾಂಗ್ರೆಸ್​ನಿಂದ ಅರ್ಜಿ ಸಲ್ಲಿಕೆಯಾಗಿದೆ. ಮುಸ್ಲಿಂ ಹುಡುಗಿಯರು ಮತ್ತು ಮಹಿಳೆಯರ ಹಕ್ಕನ್ನು ರಕ್ಷಿಸುವಂತೆ ಕೋರಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ದೂರಿಡಬಾರದು. ಧರ್ಮದ ಹೆಸರಿನಲ್ಲಿ ಶಿಕ್ಷಣದಿಂದ ವಂಚಿಸಬಾರದು ಎಂದು ಅರ್ಜಿಯಲ್ಲಿ ಬಿ.ವಿ ಶ್ರೀನಿವಾಸ್ ಪ್ರಾರ್ಥಿಸಿದ್ದಾರೆ.

Also Read: Sidlaghatta: ಶಿಡ್ಲಘಟ್ಟದ ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ

Also Read: ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3ಲಕ್ಷದ ಚಿನ್ನಾಭರಣ ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ

Published On - 10:19 am, Fri, 11 February 22