ಸ್ವಂತ ಮಗನಿಂದಲೇ ನಿವೃತ್ತ ಎಎಸ್ಐ ಹತ್ಯೆ, ಕಾರಣ ಏನು ಗೊತ್ತಾ?

ನಿವೃತ್ತ ಎಎಸ್ ಐ ಬರ್ಬರ ಹತ್ಯೆ ಪ್ರಕರಣದ ತನಿಖೆಯ ವೇಳೆ ಹಂತಕನ ಕರಾಳ ಮುಖ ಬಯಲಾಗಿದೆ. ಸ್ವಂತ ಮಗನಿಂದಲೇ ನಿವೃತ್ತ ಎಎಸ್ ಐ ಹತ್ಯೆಯಾಗಿದೆ. ಮದುವೆ ಮಾಡಿಲ್ಲ ಅನ್ನೊ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಆರೋಪ ಮಗನ ಮೇಲೆ ಕೇಳಿ ಬಂದಿದೆ.

ಸ್ವಂತ ಮಗನಿಂದಲೇ ನಿವೃತ್ತ ಎಎಸ್ಐ ಹತ್ಯೆ, ಕಾರಣ ಏನು ಗೊತ್ತಾ?
ಸ್ವಂತ ಮಗನಿಂದಲೇ ನಿವೃತ್ತ ಎಎಸ್ಐ ಹತ್ಯೆ, ಕಾರಣ ಏನು ಗೊತ್ತಾ?
TV9kannada Web Team

| Edited By: sadhu srinath

Feb 11, 2022 | 9:57 AM

ರಾಯಚೂರು: ನಿವೃತ್ತ ಎಎಸ್ ಐ ಬರ್ಬರ ಹತ್ಯೆ ಪ್ರಕರಣದ ತನಿಖೆಯ ವೇಳೆ ಹಂತಕನ ಕರಾಳ ಮುಖ ಬಯಲಾಗಿದೆ. ಸ್ವಂತ ಮಗನಿಂದಲೇ ನಿವೃತ್ತ ಎಎಸ್ ಐ ಹತ್ಯೆಯಾಗಿದೆ. ಮದುವೆ ಮಾಡಿಲ್ಲ ಅನ್ನೊ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಆರೋಪ ಮಗನ ಮೇಲೆ ಕೇಳಿ ಬಂದಿದೆ. ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸರು ಇದೀಗ ಆರೋಪಿ ಮಗನನ್ನು ಬಂಧಿಸಿದ್ದಾರೆ. ಜಗದೀಶ್ (38) ಬಂಧಿತ ಆರೋಪಿ.

ಇದೇ ಫೆಬ್ರವರಿ 9 ರ ರಾತ್ರಿ 9 ಗಂಟೆಗೆ ಕೊಲೆ ನಡೆದಿತ್ತು. ಬಸವರಾಜಪ್ಪ(75) ಹತ್ಯೆಯಾಗಿದ್ದ ನಿವೃತ್ತ ಪೊಲೀಸ್​ ಅಧಿಕಾರಿ. ರಾಯಚೂರು ನಗರದ ಗೋಶಾಲೆ ಹಿಂಭಾಗ ಪಾತಕ ಘಟನೆ ನಡೆದಿತ್ತು. ನಿವೃತ್ತ ಎಎಸ್ ಐ ಬಸವರಾಜಪ್ಪಗೆ ಐದು ಜನ ಮಕ್ಕಳು ಇದ್ದಾರೆ. ಮೂರು ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ್ದು, ಹಿರಿಯ ಮಗ ಶಿವರಾಜ್ (40) ಹಾಗೂ ಕಿರಿಯ ಮಗ ಜಗದೀಶ್ (37) ಇಬ್ಬರಿಗೂ ಮದುವೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಿರಿ ಮಗ ಜಗದೀಶ್ ಮಾನಸಿಕವಾಗಿ ಕುಂದಿದ್ದ. ಅದರಿಂದ ಮದ್ಯ ವ್ಯಸನಿಯೂ ಆಗಿಬಿಟ್ಟಿದ್ದ ಜಗದೀಶ್.

ಮದುವೆ ಮಾಡಿಸು ಅಂತಾ ಕಿರಿಯ ಪುತ್ರನ ಕಿರಿಕಿರಿ: ಕಿರಿಯ ಪುತ್ರ ಜಗದೀಶ ತನಗೆ ಮದುವೆ ಮಾಡಿಸುವಂತೆ ಅಪ್ಪನನ್ನು ಒತ್ತಾಯ ಮಾಡುತ್ತಿದ್ದ. ಇದೇ ಕಾರಣಕ್ಕೆ ಎಎಸ್ ಐ ಬಸವರಾಜಪ್ಪ ಹಾಗೂ ಕುಟುಂಬಸ್ಥರು ಊರು ಬಿಟ್ಟಿದ್ದರು. ಇದೇ ಫೆಬ್ರವರಿ 9ಕ್ಕೆ ಚಿಕಿತ್ಸೆಗೆಂದು ಬಸವರಾಜಪ್ಪ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆರೋಪಿ ಮಗ ಜಗದೀಶ್ ಫೋನ್ ಮಾಡಿ ಅಪ್ಪನನ್ನು ಕರೆಸಿಕೊಂಡಿದ್ದ.

ಆಗ ಮತ್ತೆ ಮದುವೆ ವರಾತ ತೆಗೆದು ತನಗೆ ಮದುವೆ ಮಾಡಿಸುವಂತೆ ತಾಕೀತು ಮಾಡಿದ್ದ. ಬಳಿಕ ಕುಡಿಯಲು ಹಣವನ್ನಾದರೂ ಕೊಡು ಅಂತಾನೂ ಗಲಾಟೆ ಮಾಡಿದ್ದಾನೆ. ಆ ವೇಳೆ ಅಪ್ಪ-ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕಿರಿಯ ಮಗ ಜಗದೀಶ್ ಸಿಮೆಂಟ್ ಇಟ್ಟಿಗೆಯಿಂದ ತಂದೆ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: Sidlaghatta: ಶಿಡ್ಲಘಟ್ಟದ ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ

Also Read: ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3ಲಕ್ಷದ ಚಿನ್ನಾಭರಣ ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada