ಕಾರ್ಮಿಕ ವರ್ಗದ ಜನರನ್ನೇ ಟಾರ್ಗೆಟ್ ಮಾಡಿ ರಾಯಚೂರಿನಲ್ಲಿ ಸೇಂದಿ ದಂಧೆ ನಡೆಸುತ್ತಿದ್ದ 9 ಮಂದಿ ಅರೆಸ್ಟ್
ಬೇಸಿಗೆ ಶುರುವಾಗ್ತಿದ್ದಂತೆ ರಾಯಚೂರಿನಲ್ಲಿ ಕಲಬೆರಿಕೆ ಸೇಂದಿ ದಂಧೆ ಶುರುವಾಗಿದೆ. ಹೀಗಾಗಿ ಆಂಧ್ರ, ತೆಲಂಗಾಣ ಗಡಿಭಾಗದಿಂದ ರಾಯಚೂರು ನಗರಕ್ಕೆ ಸೇಂದಿ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ತಿಳಿದ ಅಬಕಾರಿ ಅಧಿಕಾರಿಗಳು 5 ದಿನಗಳಲ್ಲಿ 15 ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 6 ಕೇಸ್ ದಾಖಲಿಸಿ 9 ಆರೋಪಿಗಳನ್ನು ಬಂಧಿಸಿದ್ದಾರೆ.
ರಾಯಚೂರು: ಬೇಸಿಗೆ ಶುರುವಾಗ್ತಿದ್ದಂತೆ ಕಲಬೆರಿಕೆ ಸೇಂದಿ ದಂಧೆ ಹೆಚ್ಚಾಗಿದೆ. ನಿಷೇಧಿತ ಸಿಹೆಚ್ ಪೌಡರ್ ಮಿಶ್ರಿತ ಸೇಂದಿ ರಾಯಚೂರು ಜಿಲ್ಲೆಯ ಜನರನ್ನು ಕಿಕ್ಕೇರಿಸುತ್ತಿದೆ. ಸದ್ಯ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಆಂಧ್ರ, ತೆಲಂಗಾಣ ಗಡಿಭಾಗದಿಂದ ರಾಯಚೂರು ನಗರಕ್ಕೆ ಕಲಬೆರಿಕೆ ಸೇಂದಿ ಸಾಗಿಸುತ್ತಿದ್ದ 9 ಜನರನ್ನ ಬಂಧಿಸಿದ್ದಾರೆ. 5 ದಿನಗಳಲ್ಲಿ 15 ಕಡೆಗಳಲ್ಲಿ ದಾಳಿ ನಡೆಸಿ 6 ಕೇಸ್ ದಾಖಲಿಸಿ 9 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 41 ಕೆಜಿ ನಿಷೇಧಿತ ಡೇಂಜರಸ್ ಸಿಹೆಚ್ ಪೌಡರ್, 150 ಲೀಟರ್ ಕಲಬೆರಿಕೆ ಸೇಂದಿ, 3 ಬೈಕ್, 1 ಕಾರು ಜಪ್ತಿ ಮಾಡಲಾಗಿದೆ.
ಬೇಸಿಗೆ ಶುರುವಾಗ್ತಿದ್ದಂತೆ ರಾಯಚೂರಿನಲ್ಲಿ ಕಲಬೆರಿಕೆ ಸೇಂದಿ ದಂಧೆ ಶುರುವಾಗಿದೆ. ಹೀಗಾಗಿ ಆಂಧ್ರ, ತೆಲಂಗಾಣ ಗಡಿಭಾಗದಿಂದ ರಾಯಚೂರು ನಗರಕ್ಕೆ ಸೇಂದಿ ಸಾಗಾಟ ಮಾಡಲಾಗುತ್ತಿತ್ತು. ಇದನ್ನು ತಿಳಿದ ಅಬಕಾರಿ ಅಧಿಕಾರಿಗಳು 5 ದಿನಗಳಲ್ಲಿ 15 ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 6 ಕೇಸ್ ದಾಖಲಿಸಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಾರು 10 ಲಕ್ಷ ಮೌಲ್ಯದ 41 ಕೆಜಿ ನಿಷೇಧಿತ ಡೇಂಜರಸ್ ಸಿಹೆಚ್ ಪೌಡರ್, 150 ಲಿಟರ್ ಕಲಬೆರಿಕೆ ಸೇಂದಿ, 3 ಬೈಕ್, 1 ಕಾರು ಜಪ್ತಿ ಮಾಡಿದ್ದಾರೆ. ತೆಲಂಗಾಣ ಮೂಲದ ತಂದೆ ಯಂಕಣಗೌಡ ಹಾಗೂ ಮಗ ಶಿವರಾಜ್ ಬಂಧಿತರಾಗಿದ್ದು ಮತ್ತೊಂದು ಕೇಸ್ ನಲ್ಲಿ ತಂದೆ ನರಸರಾಜ ಮತ್ತು ಮಗ ಮುಕುಂದ ಬಂಧಿತರಾಗಿದ್ದಾರೆ.
ಆರೋಪಿಗಳು ಗಡಿಭಾಗಗಳ ಮೂಲಕ ಪ್ರಯಾಣಿಕರ ಸೋಗಿನಲ್ಲಿ ರಾಯಚೂರಿಗೆ ಸೇಂದಿ ಸಾಗಾಟ ಮಾಡುತ್ತಿದ್ದರು. ಬಳಿಕ ರಾಯಚೂರಿನಲ್ಲಿ ನಿಷೇಧಿತ ಸಿಹೆಚ್ ಪೌಡರ್ ಮಿಶ್ರಣ ಮಾಡಿ ಕಲಬೆರಿಕೆ ಮಾಡುತ್ತಿದ್ದರು. ಈ ಮೂಲಕ ಅತೀ ಕಡಿಮೆ ದರಕ್ಕೆ ಸೇಂದಿ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ಆರೋಪಿಗಳು ಹೆಚ್ಚಾಗಿ ಕಾರ್ಮಿಕ ವರ್ಗದ ಜನರನ್ನೇ ಟಾರ್ಗೆಟ್ ಮಾಡುತ್ತಿದ್ದರು. ರಾಯಚೂರು ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕ ವರ್ಗದ ಜನರಿರುವುದರಿಂದ ರಾಯಚೂರನ್ನೇ ತಮ್ಮ ಸೇಂದಿ ದಂಧೆಯ ಅಡ್ಡ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕ್ರಿಕೆಟರ್ ಶ್ರೀಶಾಂತ್ ಈಗ ಮೊಹಮ್ಮದ್ ಮೊಬಿ; ಹೊಸ ಜರ್ನಿಗೆ ಶುಭಕೋರಿದ ಸೆಲೆಬ್ರಿಟಿಗಳು