AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3ಲಕ್ಷದ ಚಿನ್ನಾಭರಣ ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ

ಬ್ಯಾಗ್ ಪತ್ತೆಹಚ್ಚಿ ನೋಡಿದಾಗ ಬ್ಯಾಗಿನಲ್ಲಿ ಬಂಗಾರದ ಆಭರಣಗಳಾದ ಒಂದು ಜೊತೆ ಕಿವಿ ಓಲೆ, ಮಾಂಗಲ್ಯ ಸರ, ನಕ್ಲೇಸ್, ನಾಲ್ಕು ಬಳೆಗಳು ಒಂದು ವಾಚ್ ಸೇರಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿದ್ದವು. ಇದ್ರಿಂದ ಕುಂಬಾರ ಕುಟುಂಬಕ್ಕೆ ಹೋದ ಜೀವ ವಾಪಸ್ ಬಂದಂತಾಗಿತ್ತು.

ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3ಲಕ್ಷದ ಚಿನ್ನಾಭರಣ ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ
ಬಿಆರ್ಟಿಎಸ್ ಬಸ್ನಲ್ಲಿ ಮರೆತು ಹೋಗಿದ್ದ 3ಲಕ್ಷದ ಚಿನ್ನಾಭರಣ ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ
TV9 Web
| Updated By: ಆಯೇಷಾ ಬಾನು|

Updated on:Feb 11, 2022 | 9:28 AM

Share

ಹುಬ್ಬಳ್ಳಿ: ನಿತ್ಯ ಜಂಜಾಟದ ಜೀವನದಲ್ಲಿ ಮರೆವು ಎನ್ನೋದು ಕಾಮನ್ ಆಗಿ ಬಿಟ್ಟಿದೆ. ಬಸ್ನಲ್ಲಿ ಪ್ರಯಾಣಿಸುವಾಗ, ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ಜನ ಏನಾದ್ರು ಮರೆತು ಹೋಗುತ್ತಲೆ ಇರ್ತಾರೆ. ಕೆಲವರಿಗೆ ಅದೃಷ್ಡ ಎಂಬಂತೆ ಮರೆತ ವಸ್ತುಗಳು ಸಿಗುತ್ತೆ. ಆದ್ರೆ ಇನ್ನು ಕೆಲವರಿಗೆ ಅದು ಸಿಗೋದಿಲ್ಲ. ಅರೆ ಇದ‌ನೆಲ್ಲ ಇವಾಗ ಯಾಕ್ ಹೇಳ್ತಿದ್ದಾರೆ ಅನ್ಕೊಂಡ್ರಾ. ಹುಬ್ಬಳ್ಳಿಯಲ್ಲೂ ಅಂತಹುದೇ ಒಂದು ಅಪರೂಪದ ಘಟನೆ ನಡೆದಿದೆ.

ಹುಬ್ಬಳ್ಳಿ- ಧಾರವಾಡ ಮಧ್ಯೆ ಸಂಚರಿಸುತ್ತಿದ್ದ ಬಿಆರ್ಟಿಎಸ್ ಬಸ್ನಲ್ಲಿ ನಿನ್ನೆ ಸಂಜೆ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ 3 ಲಕ್ಷ ಮೌಲ್ಯದ ಬಂಗಾರದ ಬ್ಯಾಗನ್ನು ವಾಪಸ್ ಮಾಲೀಕರಿಗೆ ನೀಡುವ ಮೂಲಕ ಸಿಬ್ಬಂದಿ ಪ್ರಾಮಣಿಕತೆ ಮೆರೆದಿದ್ದಾರೆ. ತಮಗೆ ಸಿಕ್ಕ ಆಭರಣದ ಬ್ಯಾಗ್ ನ್ನ ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆರ್ಟಿಎಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಘಟನೆ ವಿವರ ನಿನ್ನೆ(ಫೆ.10) ಆನಂದ ಸೋಮಪ್ಪ ಕುಂಬಾರ ಮತ್ತು ಅವರ ಕುಟುಂಬ ಧಾರವಾಡದಿಂದ ಹುಬ್ಬಳ್ಳಿಗೆ ಬಿಆರ್ ಟಿಎಸ್ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಗಡಿಬಿಡಿಯಲ್ಲಿ ಆಕಸ್ಮಿಕವಾಗಿ ಬ್ಯಾಗನ್ನ ಬಸ್ನಲ್ಲೆ ತಾವು ಕುಳಿತಿದ್ದ ಸೀಟ್ನಲ್ಲೆ ಬಿಟ್ಟು ಇಳಿದಿದ್ದರು. ಆ ಮೇಲೆ ಅವರಿಗೆ ಬ್ಯಾಗ್ ಬಸ್ನಲ್ಲೆ ಮರೆತದ್ದು ಅರಿವಾಗಿದೆ. ಅಷ್ಟರಲ್ಲಿ ಅದರಲ್ಲಿ 3 ಲಕ್ಷ ಬೆಲೆಬಾಳೋ ಚಿನ್ನಾಭರಣ ಇತ್ತು ಎಂಬುವುದು ಗೊತ್ತಾಗಿದೆ. ಇದ್ರಿಂದ ವಿಚಲಿತರಾದ ಕುಂಬಾರ ಕುಟುಂಬ ಇನ್ನೇನು ತಮ್ಮ ಚಿನ್ನಾಭರಣ ಮರಳಿ ಬರಲ್ಲ ಅಂತ ಕಂಗಾಲಾಗಿತ್ತು. ಅದ್ರೆ ಆಗಿದ್ದಾಗಲಿ ಅಂತ ಒಮ್ಮೆ ಬಿಆರ್ಟಿಎಸ್ ಕಚೇರಿಗೆ ಹೋಗಿ ವಿಚಾರಿಸಿಸೋಣ ಎಂದು ತಕ್ಷಣವೇ ಅಲ್ಲಿಂದ ಹೊರಟು ಬಿಆರ್ಟಿಎಸ್ ಕಚೇರಿಗೆ ಆಗಮಿಸಿ ಬಸ್ನಲ್ಲಿ ಬ್ಯಾಗ್ ಮರೆತಿರುವುದಾಗಿ ದೂರನ್ನು ಸಲ್ಲಿಸಿದ್ದರು. ವಾಯವ್ಯ ಸಾರಿಗೆ ಅಧೀನದಲ್ಲಿ ಬರೋ ಸಂಸ್ಥೆಯ ತನ್ನ ಕಂಟ್ರೋಲ್ ರೂಂನ ಸಿ ಸಿ ಕ್ಯಾಮರಗಳನ್ನು ಪರಿಶೀಲಿಸಿದೆ. ಆ ವೇಳೆ ಕುಂಬಾರ ಕುಟುಂಬದ ಬ್ಯಾಗ್ ಅಲ್ಲೆ ಇರೋದು ಖಚಿತವಾಗಿತ್ತು.

ಬ್ಯಾಗ್ ಪತ್ತೆಹಚ್ಚಿ ನೋಡಿದಾಗ ಬ್ಯಾಗಿನಲ್ಲಿ ಬಂಗಾರದ ಆಭರಣಗಳಾದ ಒಂದು ಜೊತೆ ಕಿವಿ ಓಲೆ, ಮಾಂಗಲ್ಯ ಸರ, ನಕ್ಲೇಸ್, ನಾಲ್ಕು ಬಳೆಗಳು ಒಂದು ವಾಚ್ ಸೇರಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿದ್ದವು. ಇದ್ರಿಂದ ಕುಂಬಾರ ಕುಟುಂಬಕ್ಕೆ ಹೋದ ಜೀವ ವಾಪಸ್ ಬಂದಂತಾಗಿತ್ತು. ತಕ್ಷಣವೇ ತಮ್ಮ ಕಚೇರಿಗೆ ಕುಂಬಾರ ಕುಟುಂಬವನ್ನ ಕರೆಯಿಸಿದ ಅಧಿಕಾರಿಗಳು. ಬ್ಯಾಗ್ ನಲ್ಲಿದ್ದ ಚಿನ್ನಾಭರಣವನ್ನ ಮಾಲೀಕರಿಗೆ ಒಪ್ಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಬಿಆರ್ಟಿಎಸ್ ನ ಸಿಬ್ಬಂದಿ ಕಾರ್ಯ ವೈಖರಿಗೆ ಮರಳಿ ಬ್ಯಾಗ್ ಪಡೆದ ಕುಟುಂಬ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಬಿ.ಡಿ ಜಾಧವ್, ವ್ಯವಸ್ಥಾಪಕರು(ಕಾರ್ಯಾಚರಣೆ) ಮತ್ತು ಮಂಜುನಾಥ ಜೆಡೇನವರ, ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ಉಡ ಪ್ರತ್ಯಕ್ಷ; ಭಯಗೊಂಡ ಮಹಿಳೆ ಉಡದಂತೆ ಕುರ್ಚಿ ಹಿಡಿದು, ಮಾಡಿದ್ದೇನು ಗೊತ್ತಾ?

Published On - 9:26 am, Fri, 11 February 22

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್