ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ

ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್​ಗೂ ಪ್ರತಿಭಾಗೆ ಕೇವಲ ಬಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಆರೋಪಿ ಕಿಶೋರ್​ಗೆ ತನ್ನ ಪ್ರತಿ ಮೇಲೆ ಅನುಮಾನ ಇತ್ತು. ಆ ಅನುಮಾನವೇ ಇಂದು ಕೊಲೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪತ್ನಿ ಒಬ್ಬಳೆ ಇದ್ದ‌ ವೇಳೆ‌ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಫ್ಯಾನಿಗೆ ಸೀರೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.

ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ
ಮೃತ ಪ್ರತಿಭಾ, ಆರೋಪಿ ಕಿಶೋರ್
Edited By: ಆಯೇಷಾ ಬಾನು

Updated on: Nov 07, 2023 | 9:36 AM

ದೇವನಹಳ್ಳಿ, ನ.07: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಪೊಲೀಸ್ ಗಂಡನಿಂದಲೇ 11 ದಿನಗಳ ಬಾಣಂತಿ ಪತ್ನಿಯ ಕೊಲೆ (Murder) ನಡೆದಿದೆ. ಚಾಮರಾಜನಗರದಲ್ಲಿ (Chamarajanagar Police Station) ಪೊಲೀಸ್ ಪೇದೆಯಾಗಿರುವ ಕಿಶೋರ್ ತಮ್ಮ ಬಾಣಂತಿ ಹೆಂಡತಿಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅನುಮಾನ ಹಾಗೂ ಸೈಕೋ ವರ್ತನೆಯಿಂದ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೊಳತೂರು ನಿವಾಸಿ ಪ್ರತಿಭಾ ಮೃತ ಬಾಣಂತಿ. 11 ದಿನಗಳ ಮಗುವನ್ನು ಅನಾಥ ಮಾಡಿ ಹೋದ ಮಗಳಿಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆದಷ್ಟು ಬೇಗ ಅಳಿಯನ್ನು ಬಂಧಿಸುವಂತೆ ಆಕ್ರೋಶ ಹೊರಹಾಕಿದ್ದಾರೆ.

ಚಾಮರಾಜನಗರದಲ್ಲಿ ಪೊಲೀಸ್ ಪೇದೆಯಾಗಿರುವ ಕಿಶೋರ್​ಗೂ ಪ್ರತಿಭಾಗೆ ಕೇವಲ ಬಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಆರೋಪಿ ಕಿಶೋರ್​ಗೆ ತನ್ನ ಪ್ರತಿ ಮೇಲೆ ಅನುಮಾನ ಇತ್ತು. ಆ ಅನುಮಾನವೇ ಇಂದು ಕೊಲೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಿಶೋರ್​, ಯಾವಾಗಲೂ ಅನುಮಾನ ಹಾಗೂ ಅವರ ಕಡೆಯವರು ಸರಿಯಾಗಿ ತನ್ನನ್ನು ಉಪಚಾರ ಮಾಡಲ್ಲ ಎಂಬ ಬಗ್ಗೆ ಗಲಾಟೆ ಮಾಡುತ್ತಿದ್ದ. ಮದುವೆಯಾದ ಒಂದು ವರ್ಷದಲ್ಲೇ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಇನ್ನು 11 ದಿನಗಳ ಹಿಂದಷ್ಟೇ ಪ್ರತಿಭಾಗೆ ಮಗುವಾಗಿತ್ತು. ಹೀಗಾಗಿ ಬಾಣಂತನಕ್ಕೆ ತಂದೆ ಮನೆಗೆ ಬಂದಿದ್ದರು. ನಿನ್ನೆ ಎಂದಿನಂತೆ ಮಾವನ ಮನೆಗೆ ಬಂದವ ಮನೆಯಲ್ಲಿ ಪತ್ನಿ ಒಬ್ಬಳೆ ಇದ್ದ‌ ವೇಳೆ‌ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಫ್ಯಾನಿಗೆ ಸೀರೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಮೃತ ಪ್ರತಿಭಾ ಪೋಷಕರು ಮನೆಗೆ ಎಂಟ್ರಿಕೊಟ್ಟಿದ್ದು ಇದರಿಂದ ಬೆಚ್ಚಿಬಿದ್ದ ಕಿಶೋರ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

ಇದನ್ನೂ ಓದಿ: ಬಿಜೆಪಿ ಶಾಸಕನ ಬಾಮೈದನ ಮನೆಯಲ್ಲಿ ವಜ್ರ, ಚಿನ್ನ ಸೇರಿದಂತೆ 2 ಕೋಟಿ ರೂ. ಹೆಚ್ಚು ಮೌಲ್ಯದ ವಸ್ತು ಕಳ್ಳತನ

ಪತ್ನಿ ಕೊಲೆ ಮಾಡಿ‌ ಹೋಗಿ ಪತಿಯೂ ಆತ್ಮಹತ್ಯೆಗೆ ಯತ್ನ

ಇನ್ನು ಆರೋಪಿ ಕಿಶೊರ್ ತನ್ನ ಪತ್ನಿಯನ್ನು ಕೊಂದು ಕೋಲಾರಕ್ಕೆ ಹೋಗಿ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಕಿಶೋರ್ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:19 am, Tue, 7 November 23

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us