ನೆಲಮಂಗಲ: ಶಾದಿ ಡಾಟ್ ಕಾಮ್​ನಲ್ಲಿ ನಕಲಿ ಫೋಟೋ ಹಾಕಿ ವ್ಯಕ್ತಿಗೆ 6 ಲಕ್ಷ ರೂ. ವಂಚನೆ

ನೆಲಮಂಗಲದಲ್ಲಿ ಶಾದಿ ಡಾಟ್ ಕಾಮ್​ನಲ್ಲಿ ಯುವತಿಯ ನಕಲಿ ಫೋಟೋ ಹಾಕಿ ವ್ಯಕ್ತಿಗೆ 6 ಲಕ್ಷ ರೂ. ವಂಚಿಸಲಾಗಿದೆ.

ನೆಲಮಂಗಲ: ಶಾದಿ ಡಾಟ್ ಕಾಮ್​ನಲ್ಲಿ ನಕಲಿ ಫೋಟೋ ಹಾಕಿ ವ್ಯಕ್ತಿಗೆ 6 ಲಕ್ಷ ರೂ. ವಂಚನೆ
ಪೀಣ್ಯ ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: Aug 05, 2023 | 10:45 AM

ನೆಲಮಂಗಲ: ಶಾದಿ ಡಾಟ್ ಕಾಮ್​ನಲ್ಲಿ (Shadi.com) ಯುವತಿಯ ನಕಲಿ ಫೋಟೋ ಹಾಕಿ ವ್ಯಕ್ತಿಗೆ 6 ಲಕ್ಷ ರೂ. ವಂಚಿಸಲಾಗಿದೆ. ಪೀಣ್ಯಾದ (Peenya) ಶಿವಪುರದ ರಾಬರ್ಟ್ ವರ್ಗಿಸ್ ವಂಚನೆಗೊಳಗಾದ ವ್ಯಕ್ತಿ. ಯುವತಿ ಅಲೋಶಿಯ, ಶಿವಮಧು, ಮುಜೀಬ್ ಎಂಬುವವರು ವಂಚಿಸಿದ್ದಾರೆ. ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೀಣ್ಯ ಪೊಲೀಸರು ಯುವತಿ ಸೇರಿ ಮೂವರಿಗಾಗಿ ಬಲೆ ಬೀಸಿದ್ದಾರೆ. ಇನ್ನು ರಾಬರ್ಟ್ ವರ್ಗಿಸ್ ಅವರಿಗೆ ಸುಳ್ಳಿನ ಕಥೆ ಹೇಳಿ ಯುವತಿ ಹಣ ಪಡೆದಿದ್ದಾಳೆ.

ನಾನು ಕಾರು ಚಾಲನೆ ಮಾಡಿಕೊಂಡು ಬರುವಾಗ ಅಪಘಾತಕ್ಕೆ ಕಾರಣಳಾದೆ. ಅದ್ದರಿಂದ ಪೊಲೀಸರು ನನ್ನನ್ನ ಕಸ್ಟಡಿ ತೆಗೆದುಕೊಂಡಿದ್ದಾರೆ. ಪೊಲೀಸರಿಂದ ಕೇಸ್ ಮುಕ್ತಗೊಳಿಸಲು ಹಣದ ಅವಶ್ಯಕತೆ ಇದೆ. ಹೀಗಾಗಿ ನಾನು ತಿಳಿಸಿದ ವ್ಯಕ್ತಿಗಳ ಖಾತೆಗೆ ಹಣ ಹಾಕು ಎಂದು ರಾಬರ್ಟ್ ವರ್ಗಿಸ್ ಅವರಿಗೆ ಹೇಳಿದ್ದಾಳೆ.

ಇದನ್ನೂ ಓದಿ: ಪ್ರಿಯತಮನಿಂದ ಯುವತಿ ಮೇಲೆ ರಾಡ್​ನಿಂದ ಹಲ್ಲೆ; ಆರೋಪಿ ಬಂಧನ 

ಅದರಂತೆ ರಾಬರ್ಟ್ ವರ್ಗಿಸ್ ಆರೋಪಿ ಮುಜೀಬ್​​ನ ಎಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಅಕೌಂಟ್​ ಗೆ 6 ಲಕ್ಷ ರೂ. ಹಾಕಿದ್ದರು. ಮತ್ತೊಬ್ಬ ಆರೋಪಿಯ ಯುನಿಯನ್ ಬ್ಯಾಂಕ್ ಅಕೌಂಟ್​​ಗೆ 25 ಸಾವಿರ ರೂ. ಹಣ ಹಾಕಿದ್ದಾರೆ. ಗುರುತನ್ನು ಮರೆಮಾಚಿ ಆರೋಪಿಗಳು ಹಣವನ್ನು ಆನ್ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾರೆ. ಪೀಣ್ಯಾ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ 2008 (U/s-66(D),66(C))ಪ್ರಕರಣ ದಾಖಲಾಗಿದೆ.

ಮನೆ ಮುಂದೆ ನಿಲ್ಲಿಸಿದ್ದ ಕ್ವಾಲಿಸ್ ವಾಹನ ಕಳವು

ಇನ್ನು ಮನೆ ಮುಂದೆ ನಿಲ್ಲಿಸಿದ್ದ ಕ್ವಾಲಿಸ್ ವಾಹನವನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಪರಿಮಳನಗರಲ್ಲಿದಲ್ಲಿ ನಡೆದಿದೆ. ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು ಕಾರು ಕದ್ದು ಪರಾರಿಯಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Sat, 5 August 23

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us