ಹೆಸರಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಅಧಿಕಾರಕ್ಕಾಗಿ ನನ್ನ ಕೊಲೆಗೆ ಸಂಚು, ರಿವಾಲ್ವಾರ್ ಕೇಳಿದ್ದರೂ ಅನುಮತಿ‌ ನೀಡಿಲ್ಲ – ವಿದ್ಯಾಧರನಾಥ ಶ್ರೀ

ಹೆಸರಘಟ್ಟದ ಶಾಖಾ ಮಠದ ಅಧಿಕಾರಕ್ಕಾಗಿ ನನ್ನ ಕೊಲೆಗೆ ಸಂಚು ನಡೆದಿದೆ ಎಂದಿದ್ದಾರೆ ವಿದ್ಯಾಧರನಾಥ ಶ್ರೀ. ಈ ವಿಚಾರ ಆದಿಚುಂಚನಗಿರಿಯ ನಿರ್ಮಲಾನಂದನಾಥ ಶ್ರೀ, ಹೆಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರಿಗೆ ತಿಳಿದಿದೆ. ಆದರೆ ಒತ್ತಡದಿಂದಾಗಿ ಶ್ರೀಗಳು ಕೂಡ ಸುಮ್ಮನಾಗಿದ್ದಾರಂತೆ.

ಹೆಸರಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಅಧಿಕಾರಕ್ಕಾಗಿ ನನ್ನ ಕೊಲೆಗೆ ಸಂಚು, ರಿವಾಲ್ವಾರ್ ಕೇಳಿದ್ದರೂ ಅನುಮತಿ‌ ನೀಡಿಲ್ಲ - ವಿದ್ಯಾಧರನಾಥ ಶ್ರೀ
ಹೆಸರಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಅಧಿಕಾರಕ್ಕಾಗಿ ನನ್ನ ಕೊಲೆಗೆ ಸಂಚು
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Jan 03, 2024 | 11:21 AM

ಅದು ರಾಜ್ಯದ ಪ್ರತಿಷ್ಠಿತ ಮಠವೊಂದರ ಶಾಖಾ ಮಠ..‌ ಆ ಮಠದ ಅಧಿಕಾರಕ್ಕಾಗಿ ಎರಡು ದಶಕಗಳಿಂದ ಕಾಳಗ ನಡೆಯತ್ತಿದೆ.. ನಾ ಕೊಡೆ ನೀ ಬಿಡೆ ಎಂಬ ಹೋರಾಟದಲ್ಲಿ ಆರೋಪ ಪ್ರತ್ಯಾರೋಗಳ ಕಾಳಗ ಜೋರಾಗಿದೆ.. ಅಷ್ಟಕ್ಕೂ ಆ ಮಠ ಯಾವುದು ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಪ್ರಮುಖವಾದದ್ದು ಆದಿಚುಂಚನಗಿರಿ ಮಠ. ಈ ಮಠದ ಶಾಖಾ ಮಠಗಳಿಗೂ ಅಷ್ಟೇ ಗೌರವ ಪೂಜನೀಯ ಸ್ಥಾನವಿದೆ. ಆದರೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದ ಆದಿಚುಂಚನಗಿರಿ ಶಾಖಾ ಮಠದ (Adichunchanagiri branch Math at Hesaraghatta) ಸ್ವಾಮೀಜಿ ವಿದ್ಯಾಧರ ನಾಥ ಶ್ರೀಗಳು ಇದೀಗ ಗಂಭೀರವಾದ ಆರೋಪ (Conspiracy) ಮಾಡ್ತಿದ್ದಾರೆ. ಮಠದ ಪಾರುಪತ್ಯಕ್ಕಾಗಿ ವಿದ್ಯಾಧರನಾಥ ಶ್ರೀಗಳ (Vidyadhara Nath Shri) ಕೊಲೆಗೆ ಸಂಚು ರೂಪಿಸಿದ್ದಾರಂತೆ. ಅದನ್ನು ಶ್ರೀಗಳೇ ಹೇಳುತ್ತಿದ್ದಾರೆ.

ಅಂದಹಾಗೆ ವಿದ್ಯಾಧರ ಶ್ರೀಗಳನ್ನು ಸಾಯಿಸಲು ಹೊಂಚು ಹಾಕಲಾಗುತ್ತಿದೆಯಂತೆ. ಕುಂಬಳಗೂಡು ಪ್ರಕಾಶನಾಥ ಸ್ವಾಮೀಜಿ ಹಾಗೂ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ‌ ಮೇಲೆ ನೇರವಾಗಿ ಆರೋಪ ಮಾಡಲಾಗುತ್ತಿದೆ. ನಮ್ಮ ಅವರ ಮಧ್ಯೆ ಏನೂ ದ್ವೇಷವಿಲ್ಲ. ಆದರೆ ಅಧಿಕಾರಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಸಹ ರಿಲೀಸ್ ಮಾಡಿದ್ದಾರೆ.

ಇನ್ನು ಈ ವಿಚಾರ ನಿರ್ಮಲಾನಂದನಾಥ ಶ್ರೀಗಳಿಗೆ (nirmalanandanatha swamiji) ಹಾಗೂ ಹೆಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರಿಗೆ ತಿಳಿದಿದೆ. ಆದರೆ ಒತ್ತಡದಿಂದಾಗಿ ಶ್ರೀಗಳು ಕೂಡ ಸುಮ್ಮನಾಗಿದ್ದಾರಂತೆ. ನನಗೆ ಜೀವಭಯವಿದ್ದು ಊಟದಲ್ಲಿ ಅಥವಾ ಕಾಫಿ ಟೀ ಯಲ್ಲಿ ಕೆಲವನ್ನು ಮಿಕ್ಸ್ ಮಾಡುವ ಎಕ್ಸ್ ಪರ್ಟ್ ಗಳಿದ್ದಾರೆ.

Also Read: ಉಪನ್ಯಾಸಕ ಕಿರುಕುಳ ಆರೋಪ: ವಿಡಿಯೋ ಮಾಡಿಟ್ಟು ವಿದ್ಯಾರ್ಥಿ ಆತ್ಮಹತ್ಯೆ, ಸಮಸ್ಯೆ ಆಲಿಸುವಂತೆ ಚುಂಚಶ್ರೀಗೆ ಮನವಿ

ಹೆಸರುಘಟ್ಟದ ಸಿಬ್ಬಂದಿಗೂ ಈ ವಿಚಾರ ತಿಳಿದಿದೆ ಆದರೆ ಯಾರು ಬಾಯ್ಬಿಡುವುದಿಲ್ಲ. ಈ ಹಿಂದೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಮತ್ತು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗಿತ್ತು ಎನ್ನಲಾಗಿದೆ. ಇನ್ನು ರಿವಾಲ್ವಾರ್ ಕೇಳಿದ್ದರೂ ಅನುಮತಿ‌ ನೀಡದೇ ಅವಾಯ್ಡ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸಹ ಶ್ರೀಗಳು ಮಾಡುತ್ತಿದ್ದಾರೆ.

ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಹಲವಾರು ಪ್ರಕರಣಗಳು ದಾಖಲಾಗಿವೆ. ಅದೇನೇ ಆದರೂ ಶಾಖಾ ಮಠಗಳ ಸ್ವಾಮೀಜಿಗಳು ಹಾದಿರಂಪ ಬೀದಿರಂಪ ಮಾಡುತ್ತಿರೋದು ಮಠದ ಘನತೆಗೆ ಮಾರಕವಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ