ಸಿನಿಮಾ ಸ್ಟೈಲ್​ನಲ್ಲಿ ಕೋಟಿ ರೂಪಾಯಿ ಬ್ರಾಂಡೆಡ್ ಶೂ ಎಗರಿಸಿದ್ದ ಖದೀಮರು ಅರೆಸ್ಟ್

ಸಿನಿಮಾ ಸ್ಟೈಲ್​ನಲ್ಲಿ ಕೋಟಿ ರೂಪಾಯಿ ಬೆಲೆ ಬಾಳುವ ಬ್ರಾಂಡೆಡ್ ಶೂ ಮತ್ತು ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರನ್ನು ಆನೇಕಲ್ ಉಪವಿಭಾಗದ ಅತ್ತಿಬೆಲೆ ಪೊಲೀಸರು(Attibele Police Station) ಕಾರ್ಯಾಚರಣೆ ನಡೆಸಿ ಮೂವರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಸಿನಿಮಾ ಸ್ಟೈಲ್​ನಲ್ಲಿ ಕೋಟಿ ರೂಪಾಯಿ ಬ್ರಾಂಡೆಡ್ ಶೂ ಎಗರಿಸಿದ್ದ ಖದೀಮರು ಅರೆಸ್ಟ್
ಬಂಧಿತ ಶೂ ಕಳ್ಳರು
Follow us
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 02, 2024 | 4:20 PM

ಬೆಂಗಳೂರು ಗ್ರಾಮಾಂತರ, ಜ.04: ಸಿನಿಮಾ ಸ್ಟೈಲ್​ನಲ್ಲಿ ಕೋಟಿ ರೂಪಾಯಿ ಬೆಲೆ ಬಾಳುವ ಬ್ರಾಂಡೆಡ್ ಶೂ ಮತ್ತು ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರನ್ನು ಆನೇಕಲ್ ಉಪವಿಭಾಗದ ಅತ್ತಿಬೆಲೆ ಪೊಲೀಸರು(Attibele Police Station) ಕಾರ್ಯಾಚರಣೆ ನಡೆಸಿ ಮೂವರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸ್ಸಾಂ ಮೂಲದ ಸುಭಾನ್ ಪಾಷಾ(30), ಮನ್ಸರ್ ಅಲಿ(26) ಹಾಗೂ ಶಹಿದ್ದುಲ್ ರೆಹಮಾನ್(26) ಬಂಧಿತರು. ಉಳಿದ ನಾಲ್ಕು ಮಂದಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಳ್ಳತನಕ್ಕೆ ಖದೀಮರ ಪ್ಲ್ಯಾನ್​ ಹೇಗಿತ್ತು ಗೊತ್ತಾ?

ಮೊದಲು ಪ್ರತಿಷ್ಠಿತ ಕಂಪನಿಗಳ ಗೋದಾಮುಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ ಅಸಾಮಿಗಳು, ವಾರ ಅಥವಾ ಹದಿನೈದು ದಿನ ಕೆಲಸದ ಬಳಿಕ ಪ್ರತಿಷ್ಠಿತ ಬ್ರಾಂಡ್ ಶೂ ಬಟ್ಟೆಗಳನ್ನು ಕಳವು ಮಾಡುತ್ತಿದ್ದರು. ಅದರಂತೆ ಆನೇಕಲ್​ನ ಶೆಟ್ಟಿಹಳ್ಳಿ ಬಳಿಯ ನೈಕಿ ಶೂ ಗೋದಾಮಿಗೆ ಕೆಲಸಕ್ಕೆ ಸೇರಿದ್ದ ಸಲೆ ಅಹಮದ್ ಲಷ್ಕರ್ ಎಂಬಾತ ಹದಿನೈದು ದಿನ ಕೆಲಸ ಮಾಡಿ ಪ್ರತಿಷ್ಠಿತ ಬ್ರಾಂಡೆಡ್ ಶೂಗಳನ್ನು ಎಗರಿಸಿದ್ದ. ನೈಕಿ ಕಂಪನಿಯ ಬರೊಬ್ಬರಿ 1558 ಜೊತೆ ಶೂಗಳನ್ನ ಕಳ್ಳತನ ಮಾಡಿದ್ದರು.

ಇದನ್ನೂ ಓದಿ:ಬ್ಯಾಂಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರು ಅರೆಸ್ಟ್: ಪೊಲೀಸ್ ಸಿಬ್ಬಂದಿಗೆ ನಗದು ನೀಡಿ, ಮೆಚ್ಚುಗೆ ಸೂಚಿಸಿದ ಡಿವೈಎಸ್ಪಿ

ವಾಹನದ ಸಮೇತವಾಗಿ ಲೋಡ್ ಗಟ್ಟಲೇ ನೈಕಿ ಶೂ ಹೈಜಾಕ್

ಆನೇಕಲ್ ತಾಲ್ಲೂಕಿನ ಶೆಟ್ಟಹಳ್ಳಿಯ ನೈಕಿ ಶೂರೂಂ ನಿಂದ ಶೂ ಲೋಡ್ ಆಗಿತ್ತು. ಅಲ್ಲಿಂದ ಅನುಗೊಂಡನಹಳ್ಳಿ ಸೌಖ್ಯರಸ್ತೆಯ ಮಿಂತ್ರ ಗೋಡೌನ್​ಗೆ ಕ್ಯಾಂಟರ್ ಲಾರಿ ಹೋಗಬೇಕಿತ್ತು. ಆದರೆ, ಕ್ಯಾಂಟರ್ ಚಾಲಕ ಸಲೇ ಅಹಮದ್ ಲಷ್ಕರ್ ಖತರ್ನಾಕ್ ಐಡಿಯಾ ಮಾಡಿ, ವಾಹನದ ಸಮೇತವಾಗಿ ಲೋಡ್ ಗಟ್ಟಲೇ ನೈಕಿ ಶೂವನ್ನು ಹೈಜಾಕ್ ಮಾಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ಬೆಂಗಳೂರಿನ ರಜಾಕ್ ಪಾಳ್ಯದಲ್ಲಿ ಶೂ ಅನ್ಲೋಡ್ ಮಾಡಿ ಅಲ್ಲಿಂದ ಹಣ ಪಡೆದಿದ್ದ.

ತರಬನಹಳ್ಳಿಯಲ್ಲಿ ಖಾಲಿ ಲಾರಿ ಬಿಟ್ಟು ಪರಾರಿ

ಇನ್ನು ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು, ಜಿಪಿಆರ್​ಎಸ್​ ಚೆಕ್ ಮಾಡಿಕೊಂಡು ಹೋಗಿ ನೋಡಿದಾಗ ಈಚರ್ ವಾಹನ ಪತ್ತೆಯಾಗಿತ್ತು. ಖತರ್ನಾಕ್​ ಖದೀಮರು, ಖಾಲಿ ಇದ್ದ ಈಚರ್ ವಾಹನವನ್ನ ಚಿಕ್ಕಜಾಲ ಬಳಿಯ ತರಬನಹಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಇದೀಗ ವಾಹನದ ಸಮೇತ ಕೋಟ್ಯಾಂತರ ರೂಪಾಯಿ ಮೌಲ್ಯದ ನೈಕಿ ಕಂಪನಿಯ ಶೂಗಳನ್ನ ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್