ಬ್ಯಾಂಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರು ಅರೆಸ್ಟ್: ಪೊಲೀಸ್ ಸಿಬ್ಬಂದಿಗೆ ನಗದು ನೀಡಿ, ಮೆಚ್ಚುಗೆ ಸೂಚಿಸಿದ ಡಿವೈಎಸ್ಪಿ

ಬ್ಯಾಂಕ್ ಕಾಂಪೌಂಡ್ನಲ್ಲಿ ಮಷೀನ್ ಕಟ್ ಮಾಡುವ ಶಬ್ದ ಬಂದಿದೆ. ಇಬ್ಬರು ಕಳ್ಳರು ಆಕ್ಸಿಸ್ ಬ್ಯಾಂಕ್‌ ನ ಕಿಟಕಿ ಸರಳಗಳನ್ನು ಕಟ್ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ರಘು ಮತ್ತು ರಮೇಶ್ ಎಂಬ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.

ಬ್ಯಾಂಕ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರು ಅರೆಸ್ಟ್: ಪೊಲೀಸ್ ಸಿಬ್ಬಂದಿಗೆ ನಗದು ನೀಡಿ, ಮೆಚ್ಚುಗೆ ಸೂಚಿಸಿದ ಡಿವೈಎಸ್ಪಿ
ಪೊಲೀಸ್ ಸಿಬ್ಬಂದಿಗೆ ನಗದು ನೀಡಿ, ಮೆಚ್ಚುಗೆ
TV9kannada Web Team

| Edited By: Ayesha Banu

Jul 21, 2022 | 6:01 PM

ದಾವಣರೆಗೆ: ಬ್ಯಾಂಕ್ ದರೋಡೆ ಮಾಡಲು ಯತ್ನಸುತ್ತಿದ್ದ ಇಬ್ಬರು ಕಳ್ಳರನ್ನು ದಾವಣಗೆರೆ ಬಡಾವಣೆ ಪೋಲಿಸರು ಬಂಧಿಸಿದ್ದಾರೆ. ದಾವಣಗೆರೆ ಪಿಬಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ನಲ್ಲಿ ದರೋಡೆಗೆ ಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಕಾಂಪೌಂಡ್ನಲ್ಲಿ ಮಷೀನ್ ಕಟ್ ಮಾಡುವ ಶಬ್ದ ಬಂದಿದೆ. ಇಬ್ಬರು ಕಳ್ಳರು ಆಕ್ಸಿಸ್ ಬ್ಯಾಂಕ್‌ ನ ಕಿಟಕಿ ಸರಳಗಳನ್ನು ಕಟ್ ಮಾಡಿದ್ದಾರೆ. ಇದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ರಘು ಮತ್ತು ರಮೇಶ್ ಎಂಬ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಕಳ್ಳತನಕ್ಕೆ ಬಳಸಿದ ಆಯುಧಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಲಂ 457.380.527 ಐಪಿಸಿ ಪ್ರಕಾರ ಪ್ರಕರಣವನ್ನು ಬಡಾವಣೆ ಪೋಲಿಸರು ದಾಖಲಿಸಿಕೊಂಡಿದ್ದಾರೆ.

ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಬಡಾವಣೆ ಠಾಣೆಯ ಸಿಬ್ಬಂದಿಗಳಾದ ಧನಂಜಯ್ ರಾಜ ಅರಸ್ ಮತ್ತು ಸುರೇಶ್ ಎಲ್ ರವರ ಕರ್ತವ್ಯಕ್ಕೆ ನಗರ ಡಿವೈಎಸ್ಪಿ ನರಸಿಂಹ ವಿ ತಾಮ್ರದ್ವಜ ರವರು ಶ್ಲಾಘಿಸಿ ಸನ್ಮಾನಿಸಿದ್ದಾರೆ. ಹಾಗೂ ನಗದು ಬಹುಮಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಡಾವಣೆ ಠಾಣೆಯ ಪಿಐ ಧನಂಜಯ್, ಸಿಪಿಐ ಸಂಚಾರರಾದ ಅನಿಲ್, ಕೆಟಿಜೆ ನಗರ ವೃತ್ತದ ಸಿಪಿಐ ಗುರುಬಸವರಾಜ್, ಜಿಲ್ಲಾ ರಕ್ಷಣಾಧಿಕಾರಗಳಾದ ರಿಷ್ಯಂತ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಯುವಕರ ನಡುವೆ ಹೊಡೆದಾಟ

ಧಾರವಾಡದ ಸ್ಟೇಶನ್ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರ ನಡುವೆ ಹೊಡೆದಾಟವಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ನಿಡವಣಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಹೊಡೆಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada