ಬೆಂಗಳೂರು, ಸೆ.14: ಬಾಗಲಗುಂಟೆ ಪೈಪ್ಲೈನ್ ಪಾರ್ಕ್ನ ಕಲ್ಲಿನ ಬೆಂಚ್ ಮೇಲೆ 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ(Dead Body Found). ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ(Bagalagunte Police Station) ಪ್ರಕರಣ ದಾಖಲಾಗಿದ್ದು ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪಾರ್ಕ್ನ ಬೆಂಚ್ ಕಲ್ಲಿನ ಮೇಲೆ ಮಲಗಿದ್ದಲ್ಲಿಯೇ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ರಾಣೆಬೆನ್ನೂರು ತಾಲೂಕಿನ ಹುಲಿಹಳ್ಳಿಯಲ್ಲಿ ಸಾಲಬಾಧೆ ತಾಳಲಾರದೆ ರೈತ ರಾಮಪ್ಪದುರ್ಗಪ್ಪ ಹುಚ್ಚಣ್ಣವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ರಾಮಪ್ಪ ದುರ್ಗಪ್ಪ ಅವರು ಕೆನರಾ ಬ್ಯಾಂಕ್ನಲ್ಲಿ 2 ಲಕ್ಷ ರೂ. ಸಾಲ ಮಾಡಿದ್ದರು ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಕೂಡ ಒಣಗಿತ್ತು. ಸಾಲದ ಹೊರೆ ಜೊತೆಗೆ ಬರಗಾಲದ ಛಾಯೆಗೆ ಕಂಗಾಲಾಗಿದ್ದ ರಾಮದುರ್ಗಪ್ಪ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಮನಗರದಲ್ಲಿ ಬೆಟ್ಟದ ಮೇಲಿಂದ ಬಿದ್ದು ಯುವತಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೆಂಗಳೂರಿನ ಬೆಮೆಲ್ ಲೇಔಟ್ ನಿವಾಸಿ, ನಿನ್ನೆ ರಾಮನಗರದ ರಾಮದೇವರ ಬೆಟ್ಟದಿಂದ ಬಿದ್ದಿದ್ದಾಳೆ. ಏಕಾಂಗಿಯಾಗಿ ರಾಮದೇವರ ಬೆಟ್ಟಕ್ಕೆ ಬಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಾಯಗೊಂಡ ಯುವತಿಯನ್ನ ಸ್ಥಳೀಯರು ರಕ್ಷಿಸಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರಗೂ ಕೊಪ್ಪಳಕ್ಕೂ ಇದೆ ನಂಟು, ಏನಿದು ಚೈತ್ರಾ ವರ್ಸಸ್ ಅನ್ಸಾರಿ ಚುನಾವಣೆ?
ತುಮಕೂರಿನ ಉಪ ವಿಭಾಗಾಧಿಕಾರಿ ತಬಸುಮ್ ಜಹೇರಾಗೆ 4 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಿ 7ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. 2017ರ ಮೇ 23ರಂದು ಲಂಚ ಸ್ವೀಕರಿಸುವಾಗ ತಬಸುಮ್ ಹಾಗೂ ಬೆಳ್ಳಾವಿ ಉಪ ತಹಶೀಲ್ದಾರ್ ಶಬ್ಬೀರ್ ಎಸಿಬಿ ಬಲೆಗೆ ಬಿದ್ದಿದ್ರು. ಆರೋಪ ಸಾಬೀತಾದ ಹಿನ್ನೆಲೆ ಇಬ್ಬರಿಗೂ ತಲಾ 4 ವರ್ಷ ಜೈಲು, ₹20000 ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕ್ರೈಸ್ಟ್ ಶಾಲಾ ವಾಹನದ ಚಾಲಕ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ ಆಡಿದ್ದಾನೆ. ಹೆದ್ದಾರಿಯ ಒನ್ ವೇಯಲ್ಲೇ ಮಕ್ಕಳಿದ್ದ ಶಾಲಾ ವಾಹನವನ್ನ ನುಗ್ಗಿಸಿದ್ದಾನೆ. ಕಾರಿನ ಮುಂಭಾಗದ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ, ಡ್ರೈವರ್ ವಿರುದ್ಧ ಕ್ರಮಕ್ಕೆ ಎಡಿಜಿಪಿ ಅಲೋಕ್ ಕುಮಾರ್, ಕುಂಬಳಗೋಡು ಪೊಲೀಸರಿಗೆ ಸೂಚಿಸಿದ್ದಾರೆ. ಸದ್ಯ ಶಾಲಾ ವಾಹನ ವಶಕ್ಕೆ ಪಡೆದ್ದು, ಚಾಲಕನಿಗಾಗಿ ಹುಡುಕಾಡುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ