ಬೆಂಗಳೂರು ಗ್ರಾಮಾಂತರ, ನ.18: ಹೊರಗಿನಿಂದ ಕಟ್ಟಡ ಸುಸಜ್ಜಿತವಾಗಿದ್ದು, ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಇಷ್ಟೆಲ್ಲ ಚೆನ್ನಾಗಿರಬೇಕಾದರೆ, ಒಳಗಡೆಯೂ ಉತ್ತಮವಾಗೆ ಇರುತ್ತದೆ ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ. ಆದ್ರೆ, ಮಕ್ಕಳು ಆಟ-ಪಾಠ ಮಾಡಿ ಮಲಗಬೇಕಾದರೆ, ಬೇಕಾದ ಸುಸಜ್ಜಿತ ಬೇಡ್(Bed)ಗಳ ವ್ಯವಸ್ಥೆಯೇ ಇಲ್ಲವಾಗಿದೆ. ತಿಗಣೆ ಹಾಗೂ ದುರ್ವಾಸನೆ ಬೀರುವ ಇದೇ ಬೆಡ್ಗಳಲ್ಲಿ ಅವಸ್ಥೆ ಪಡುತ್ತಿದ್ದಾರೆ. ದೇವನಹಳ್ಳಿ(Devanahalli) ತಾಲೂಕಿನ ವಿಜಯಪುರ ಸೇರಿದಂತೆ ಬಹುತೇಕ ಹಾಸ್ಟೇಲ್ಗಳಲ್ಲಿ ಇದೇ ಪರಿಸ್ಥಿತಿ ಇದೆಯಾಗಿದೆ.
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಬಿಸಿಎಂ ಹಾಸ್ಟೇಲ್ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಹೊಸ ಬೆಡ್ಗಳನ್ನು ನೀಡುತ್ತಿತ್ತು. ಆದ್ರೆ, ಕೊರೊನಾ ಕಾರಣದಿಂದಾಗಿ ಕಳೆದ ಐದು ವರ್ಷದಿಂದ ಬೆಡ್ಗಳನ್ನು ನೀಡಿದ್ದು, ಬಿಟ್ಟರೆ ಈವರೆಗೂ ಹೊಸ ಹಾಸಿಗೆಗೆಳನ್ನು ನೀಡಿಲ್ಲ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಹಾಸ್ಟೇಲ್ಗಳಿಗೆ ಬೆಡ್ಗಳು ಬಾರದ ಹಿನ್ನೆಲೆಯಲ್ಲಿ ಬೆಡ್ಗಳಿಲ್ಲದೆ ಚಾಪೆಗಳನ್ನು ಹಾಸಿಕೊಂಡು ವಿದ್ಯಾರ್ಥಿಗಳು ಮಲಗುವ ದುಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಬಿಸಿಎಂ ಹಾಸ್ಟೇಲ್ಗಳ ರೇಷನ್ ದುರ್ಬಳಕೆ, ಟ್ಯೂಷನ್ನಲ್ಲಿ ಗೋಲ್ಮಾಲ್; ಹೇಳೋರು ಇಲ್ಲ, ಕೇಳೋರು ಇಲ್ಲ
ಅಲ್ಲದೆ ಇರುವ ಹಳೆ ಹಾಸಿಗೆಗೆಳಿಂದ ದುರ್ವಾಸನೆ ಹಾಗೂ ತಿಗಣೆಗಳು ಬರುತ್ತಿದ್ದು, ಸರಿಯಾಗಿ ನಿದ್ದೆ ಮಾಡುವುದಕ್ಕೂ ಹಾಸ್ಟೇಲ್ ವಿದ್ಯಾರ್ಥಿಗಳಿಂದ ಆಗುತ್ತಿಲ್ಲ ಎಂದು ಪೋಷಕರು ಹಾಗೂ ಸಾರ್ವಜನಿಕರು ಅಸಮಧಾನ ಹೊರ ಹಾಕಿದ್ದಾರೆ. ಕಳೆದ ಕೋವಿಡ್ ಸಂಧರ್ಭದಲ್ಲಿ ಹಾಸ್ಟೆಲ್ಗಳನ್ನು ಕ್ವಾರಂಟೈನ್ ಸೆಂಟರ್ಗಳಾಗಿ ಮಾಡಿ ಮಕ್ಕಳ ಬೆಡ್ಗಳನ್ನೆ ಬಳಸಿದ್ದು, ನಂತರ ಅದೇ ಬೆಡ್ಗಳನ್ನು ಮಕ್ಕಳಿಗೆ ನೀಡಿದ್ದಾರಂತೆ. ಜೊತೆಗೆ ಹಲವು ಭಾರಿ ಬೆಡ್, ಲೈಬ್ರೇರಿ ಪಿರೋಪಕರಣ ಹಾಗೂ ಕ್ರೀಡಾ ಸಾಮಾಗ್ರಿಗಳನ್ನ ನೀಡಿ ಎಂದು ಕಳೆದ ಎರಡು ವರ್ಷಗಳಿಂದ ಮನವಿ ಮಾಡಿದರೂ ಯಾವುದೇ ಸೌಕರ್ಯ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಈ ಕುರಿತು ಬೆಂಗಳೂರು ಗ್ರಾಮಾಂತರ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪ್ರೇಮ ಅವರನ್ನ ಕೇಳಿದ್ರೆ ‘ನಾವು ಈಗಾಗಲೇ ಇಲಾಖೆ ವತಿಯಿಂದ ಪತ್ರ ಬರೆದಿದ್ದು, ಟೆಂಡರ್ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಬೆಡ್ಗಳನ್ನು ಬೇರೆಡೆ ಶಿಪ್ಟ್ ಮಾಡಿದ್ದ ಕಾರಣ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಎಲ್ಲೆಡೆ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆ ಹರಿಸುವ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಪ್ರತಿವರ್ಷ ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆಗಳಿಗೆ ಎಂದು ಕೋಟಿ ಕೋಟಿ ಹಣ ಬಜೆಟ್ನಲ್ಲಿ ಮೀಸಲಿಡುತ್ತಿದ್ದರೂ ಸಮರ್ಪಕ ಮೂಲ ಸೌಕರ್ಯ ಬಡ ವಿದ್ಯಾರ್ಥಿಗಳಿಗೆ ಸಿಗದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಎಚ್ಚೆತ್ತು ಹಾಸ್ಟೇಲ್ಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ