AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart attack: ನೈಟ್ ಶಿಫ್ಟ್​ ಮುಗಿಸಿ ಮನೆಗೆ ಬಂದಾಗ ಹೃದಯಾಘಾತ: ಹೆಡ್ ಕಾನ್ಸಟೇಬಲ್ ಸಾವು

Devanahalli Head constable: ನಿನ್ನೆ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಕೂಡಲೆ ಎದೆನೋವು ಅಂತ ಕುಸಿದು ಬಿದ್ದಿದ್ದು ಕೂಡಲೇ ಸ್ಥಳಿಯರು ಮತ್ತು ಸ್ನೇಹಿತರು ಅವರನ್ನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದ್ರೆ ಅಷ್ಟೋತ್ತಿಗಾಗಲೆ

Heart attack: ನೈಟ್ ಶಿಫ್ಟ್​ ಮುಗಿಸಿ ಮನೆಗೆ ಬಂದಾಗ ಹೃದಯಾಘಾತ: ಹೆಡ್ ಕಾನ್ಸಟೇಬಲ್ ಸಾವು
ಹೃದಯಾಘಾತ: ಹೆಡ್ ಕಾನ್ಸಟೇಬಲ್ ಸಾವು
TV9 Web
| Updated By: ಸಾಧು ಶ್ರೀನಾಥ್​|

Updated on:Jan 04, 2023 | 11:46 AM

Share

ರಾತ್ರಿ ಪಾಳೆಯದಲ್ಲಿ ಕೆಲಸ ಮುಗಿಸಿ (night shift) ಮನೆಗೆ ವಾಪಸ್ ಆಗಿದ್ದ ಹೆಡ್ ಕಾನ್ಸಟೇಬಲ್ ಗೆ ಎದೆನೋವು ಕಾಣಿಸಿಕೊಂಡಿದ್ದು ತೀವ್ರ ಹೃದಯಾಘಾತದಿಂದ (heart attack) ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (Devanahalli) ಪಟ್ಟಣದಲ್ಲಿ ವಾಸವಾಗಿದ್ದ ಹೆಡ್ ಕಾನ್ಸಟೇಬಲ್ (head constable) ವಿರೂಪಾಕ್ಷ ಹೃದಯಾಘಾತದಿಂದ ಸಾವನ್ನಪಿದ (death) ಮುಖ್ಯ ಪೇದೆ‌.

ಅಂದಹಾಗೆ ಮೃತ ವಿರೂಪಾಕ್ಷ ಕಳೆದ ಹಲವು ವರ್ಷಗಳಿಂದ ದೇವನಹಳ್ಳಿ ಠಾಣೆ, ಏರ್ಪೋಟ್ ಪೊಲೀಸ್ ಠಾಣೆ ಸೇರಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಕರ್ತವ್ಯದ ಜೊತೆಗೆ ಹಲವು ಸಾಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ರು. ಜತೆಗೆ ಕೊರೊನಾ ಸಂದರ್ಭದಲ್ಲಿ ಬಡವರು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ದೇವನಹಳ್ಳಿ ಸುತ್ತಾಮುತ್ತ ಜನಮನ್ನಣೆ ಗಳಿಸಿ ಇತ್ತೀಚೆಗಷ್ಟೆ ಇಲಾಖೆಯ ಬಡ್ತಿ ಮೇರೆಗೆ ದೇವನಹಳ್ಳಿ ಠಾಣೆಯಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

Also read:

ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಾದರೆ ಈ ಸಲಹೆ ತಪ್ಪದೆ ಪಾಲಿಸಿ

ಆದ್ರೆ ನಿನ್ನೆ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಕೂಡಲೆ ಎದೆನೋವು ಅಂತ ಕುಸಿದು ಬಿದ್ದಿದ್ದು ಕೂಡಲೇ ಸ್ಥಳಿಯರು ಮತ್ತು ಸ್ನೇಹಿತರು ಅವರನ್ನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದ್ರೆ ಅಷ್ಟೋತ್ತಿಗಾಗಲೆ ಹೆಚ್​ಸಿ ವಿರೂಪಾಕ್ಷ ಹೃದಯಾಘಾತದಿಂದ ಸಾವನ್ನಪಿದ್ದಾನೆ ಅಂತ ವೈದ್ಯರು ತಿಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ಹೆಡ್ ಕಾನ್ಸಟೇಬಲ್ ಸಾವಿಗೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಕಂಬನಿ ಮಿಡಿದಿದ್ದು ಮೃತ ವಿರೂಪಾಕ್ಷ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Wed, 4 January 23